Back
Home » ಸಿನಿ ಸಮಾಚಾರ
ಕಾರ್ತಿಕ್ ಗೌಡ ಹೇಳಿದ್ದೇ ಒಂದು, ಜನ ಕೇಳಿದ್ದೇ ಮತ್ತೊಂದು
Oneindia | 8th Nov, 2019 12:06 PM
 • ರಶ್ಮಿಕಾ ಪರ ಕಾರ್ತಿಕ್ ಗೌಡ ಟ್ವೀಟ್

  ರಶ್ಮಿಕಾ ಬಗ್ಗೆ ನಿರ್ದೇಶಕ ಕಿರಣ್ ರಾಜ್ ಟ್ವೀಟ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ನಿರ್ಮಾಪಕ ಕಾರ್ತಿಕ್ ಗೌಡ ''ತಮಾಷೆ ಇದ್ದರೆ ಸರಿ. ಆದರೆ, ಟಾರ್ಗೆಟ್ ಮಾಡಿ ಕಿರುಕುಳ ನೀಡುವುದು ಏಕೆ. ಟ್ರೋಲ್ ಮಾಡುವವರು ಗೆರೆ ದಾಟಬಾರದು. ತಾವು ಯಾರು ಎಂದು ಬಹಿರಂಗ ಪಡಿಸದೆ, ಏನೂ ಬೇಕಾದರೂ ಮಾಡುವುದು ಸುಲಭ.'' ಎಂದು ಟ್ವೀಟ್ ಮಾಡಿದ್ದಾರೆ.


 • ಜನ ಗಂಭೀರವಾಗಿ ಸ್ವೀಕರಿಸಲಿಲ್ಲ

  ಕಾರ್ತಿಕ್ ಗೌಡ ಗಂಭೀರವಾಗಿ ಟ್ವೀಟ್ ಮಾಡಿದ್ದಾರೆ. ಆದರೆ, ಅದನ್ನು ಜನರು ಆ ರೀತಿ ಸ್ವೀಕರಿಸಿಲ್ಲ. ಕಾರ್ತಿಕ್ ಗೌಡ ಟ್ವೀಟ್ ಗೆ ಬರುತ್ತಿರುವ ಕಾಮೆಂಟ್ಸ್ ಗಳೆ ಇದಕ್ಕೆ ಸಾಕ್ಷಿಯಾಗಿವೆ. ಬಹುಪಾಲು ಜನರು ಟ್ರೋಲ್ ಮಾಡಿರುವುದು ತಪ್ಪು ಎಂದು ಒಪ್ಪಿಕೊಳ್ಳಲು ಸಿದ್ಧವಿಲ್ಲ. ರಶ್ಮಿಕಾ ಮಂದಣ್ಣ ಬಗ್ಗೆ ಟ್ವೀಟ್ ಮಾಡಿದ್ದೆ ತಪ್ಪು ಎನ್ನುವ ಹಾಗೆ ಮಾತನಾಡುತ್ತಿದ್ದಾರೆ.

  ರಶ್ಮಿಕಾ ಬೆಂಬಲಕ್ಕೆ ನಿಂತ '777 ಚಾರ್ಲಿ' ನಿರ್ದೇಶಕ ಕಿರಣ್ ರಾಜ್ ಮತ್ತು ಕವಿರಾಜ್


 • 'ಕೆಜಿಎಫ್ 2' ಅಪ್ ಡೇಟ್ ಹೇಳಿ

  ಕಾರ್ತಿಕ್ ಗೌಡ ಒಂದು ಹೇಳಿದ್ರೆ, ಜನರು ಮತ್ತೊಂದು ಕೇಳುತ್ತಿದ್ದಾರೆ. ಅನೇಕರು 'ಕೆಜಿಎಫ್ ಚಾಪ್ಟರ್ 2' ಸಿನಿಮಾದ ಅಪ್ ಡೇಟ್‌ ಹೇಳಿ ಎಂದು ಟ್ವೀಟ್ ಮಾಡಿದ್ದಾರೆ. 'ಕೆಜಿಎಫ್ 2' ಸಿನಿಮಾದ ಬಗ್ಗೆ ಜನರು ಕುತೂಹಲ ಹೊಂದಿರುವುದು ನಿಜ. ಆದರೆ, ಈ ಪೋಸ್ಟ್ ನಲ್ಲಿಯೂ ಅದೇ ಪ್ರಶ್ನೆಗಳು ಇವೆ. ಕೆಲವರು ಮಾತ್ರ ಐ ಸಪೋರ್ಟ್ ರಶ್ಮಿಕಾ ಎಂದಿದ್ದಾರೆ.


 • ವೈಯಕ್ತಿಕ ವಿಷಯಗಳ ಬಗ್ಗೆ ಮಾತನಾಡಬೇಡಿ

  ಈ ಘಟನೆಯ ಬಗ್ಗೆ ರಶ್ಮಿಕಾ ಟ್ವೀಟ್ ಮಾಡಿದ್ದು, ''ನಮ್ಮ ಕೆಲಸದ ಬಗ್ಗೆ ನಿಮಗೆ ಏನು ಹೇಳಬೇಕು ಅನಿಸುತ್ತದೆ ಹೇಳಿ. ನಿಮಗೆ ಅದನ್ನು ಹೇಳಲು ಹಕ್ಕಿದೆ. ಆದರೆ, ನಮ್ಮ ವೈಯಕ್ತಿಕ ಜೀವನ ಹಾಗೂ ಕುಟುಂಬದ ಬಗ್ಗೆ ಮಾತನಾಡಲು ಯಾರಿಗೂ ಅಧಿಕಾರ ಇಲ್ಲ. ಈ ರೀತಿ ಯಾವ ಕಲಾವಿದರಿಗೆ ಮಾಡಬಾರದು. ಯಾಕೆಂದರೆ, ಒಬ್ಬ ಕಲಾವಿದೆಯಾಗುವುದು ಅಷ್ಟು ಸುಲಭ ಅಲ್ಲ. ಪ್ರತಿ ವೃತ್ತಿಗೂ ಒಂದು ಗೌರವ ಇದೆ.'' ಎಂದು ಪ್ರತಿಕ್ರಿಯೆ ನೀಡಿದ್ದಾರೆ.

  ಅಲ್ಲು ಅರ್ಜುನ್ ಮತ್ತು ತಂಡಕ್ಕೆ ಕ್ಷಮೆ ಕೇಳಿದ ರಶ್ಮಿಕಾ ಮಂದಣ್ಣ
ನಟಿ ರಶ್ಮಿಕಾ ಮಂದಣ್ಣ ಬಾಲ್ಯದ ಫೋಟೋಗೆ ಕೆಟ್ಟದಾಗಿ ಟ್ರೋಲ್ ಮಾಡಲಾಗಿತ್ತು. ಇದರ ವಿರುದ್ಧ ರಶ್ಮಿಕಾ ಧ್ವನಿ ಎತ್ತಿದ್ದು, #SayNotSocialMediaHarassment ಎಂಬ ಅಭಿಯಾನ ಶುರು ಮಾಡಿದ್ದರು.

ರಶ್ಮಿಕಾಗೆ ಚಿತ್ರರಂಗದ ಅನೇಕರ ಸಾಥ್ ಸಿಕ್ಕಿದೆ. ನಿರ್ದೇಶಕ ಕವಿರಾಜ್, '777 ಚಾರ್ಲಿ' ಡೈರೆಕ್ಟರ್ ಕಿರಣ್ ರಾಜ್ ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದು, ಟ್ರೋಲ್ ವಿರುದ್ಧ ಮಾತನಾಡಿದ್ದರು. ಇದೀಗ 'ಕೆಜಿಎಫ್ 'ಚಿತ್ರದ ಕಾರ್ಯಕಾರಿ ನಿರ್ಮಾಪಕ, ಸಿನಿಮಾ ವಿತರಕ ಕಾರ್ತಿಕ್ ಗೌಡ ಕೂಡ ಟ್ವೀಟ್ ಮಾಡಿದ್ದಾರೆ.

ರಶ್ಮಿಕಾ ಬಾಲ್ಯದ ಫೋಟೋಗೆ ಕೆಟ್ಟ ಪದ ಬಳಸಿ ಟ್ರೋಲ್: ಬೇಸರಗೊಂಡ ನಟಿ

ರಶ್ಮಿಕಾ ಮಂದಣ್ಣ ಬಗ್ಗೆ ಆಗುತ್ತಿರುವ ಟ್ರೋಲ್ ಗಳ ವಿಚಾರವಾಗಿ ಕಾರ್ತಿಕ್ ಗೌಡ ಟ್ವೀಟ್ ಮಾಡಿದ್ದಾರೆ. ಆದರೆ, ಅದಕ್ಕೆ ಬಂದ ಕಾಮೆಂಟ್ಸ್ ಗಳು ಬೇರೆಯದ್ದೆ ಆಗಿವೆ. ಅವರು ಒಂದು ಹೇಳಿದ್ರೆ, ಜನ ಮತ್ತೊಂದು ಕೇಳುತ್ತಿದ್ದಾರೆ.

   
 
ಹೆಲ್ತ್