ಹಿಮಾಲಯನ್ ಬೈಕ್ ಅನ್ನು ಕೆಂಪು ಹಾಗೂ ಕಪ್ಪು ಡ್ಯುಯಲ್ ಟೋನ್ ಬಣ್ಣಗಳಲ್ಲಿ ಪ್ರದರ್ಶಿಸಲಾಯಿತು. ರಾಯಲ್ ಎನ್ಫೀಲ್ಡ್ ಕಂಪನಿಯು ಈ ಅಡ್ವೆಂಚರ್ ಟೂರರ್ ಬೈಕ್ ಅನ್ನು ಬಿಳಿ ಬಣ್ಣವನ್ನು ಪ್ರೈಮರಿ ಬಣ್ಣವಾಗಿ ಹೊಂದಿರುವ ಲೇಕ್ ಬ್ಲೂ ಡ್ಯೂಯಲ್ ಟೋನ್ ಹಾಗೂ ಗ್ರಾವೆಲ್ ಗ್ರೇ ಎಂಬ ಎರಡು ಬಣ್ಣಗಳಲ್ಲಿ ಪ್ರದರ್ಶಿಸಿದೆ.
ಸದ್ಯಕ್ಕೆ ಹಿಮಾಲಯನ್ ಬೈಕ್ ಅನ್ನು ಸ್ನೋ ವೈಟ್, ಗ್ರಾನೈಟ್ ಬ್ಲಾಕ್ ಹಾಗೂ ಸ್ಲೀಟ್ ಎಂಬ ಮೂರು ಬಣ್ಣಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಇವುಗಳ ಪೈಕಿ ಕಂಪನಿಯ ಭಾರತದ ವೆಬ್ಸೈಟಿನಲ್ಲಿ ಕಪ್ಪು ಬಣ್ಣದ ಬೈಕ್ ಅನ್ನು ಮಾತ್ರ ಪ್ರದರ್ಶಿಸಲಾಗಿದ್ದು, ಈ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.1.81 ಲಕ್ಷಗಳಾಗಿದೆ.
ಫ್ಯೂಯಲ್ ಟ್ಯಾಂಕ್, ಫ್ಯೂಯಲ್ ಟ್ಯಾಂಕ್ ಗಾರ್ಡ್ ಹಾಗೂ ರೇರ್ ಲಗೇಜ್ ರ್ಯಾಕ್ನ ಮೇಲಿರುವ ರಾಕ್ ರೆಡ್ ಅಸೆಂಟ್ನೊಂದಿಗಿರುವ ಕಪ್ಪು ಬಣ್ಣವನ್ನು ಹೊರತು ಪಡಿಸಿ ಬೇರೆ ಯಾವುದೇ ರೀತಿಯ ಬದಲಾವಣೆಗಳನ್ನು ಮಾಡಲಾಗಿಲ್ಲ. ಕೆಲವು ಭಾಗಗಳಿಗೆ ಕ್ರೋಮ್ ಬಣ್ಣವನ್ನು ಸಹ ನೀಡಲಾಗಿದೆ.
ಇದರ ಜೊತೆಗೆ ಬ್ಲೂ ಹಾಗೂ ವೈಟ್ ಬಣ್ಣವನ್ನು ಹೊಂದಿರುವ ಮಾದರಿಗಳೂ ಇವೆ. ಗ್ರಾವೆಲ್ ಗ್ರೇ ಬ್ಲಾಕ್ ಬಾಡಿ ಪ್ಯಾನೆಲ್ಗಳನ್ನು ಹೊಂದಿದೆ. ಹಿಮಾಲಯನ್ ಬೈಕ್ ಅನ್ನು ಈ ಹೊಸ ಬಣ್ಣಗಳಲ್ಲಿ ಪ್ರದರ್ಶಿಸಲಾಗಿದೆ.
ಆದರೂ ರಾಯಲ್ ಎನ್ಫೀಲ್ಡ್ ಕಂಪನಿಯು ಮುಂದಿನ ವರ್ಷ ಭಾರತದಲ್ಲಿ ತನ್ನ ಬಿಎಸ್6 ಅಪ್ಡೇಟ್ನ ಭಾಗವಾಗಿ ತನ್ನ ಜನಪ್ರಿಯ ಅಡ್ವೆಂಚರ್ ಟೂರರ್ ಅನ್ನು ಹೊಸ ಬಣ್ಣಗಳಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ.
ಹಿಮಾಲಯನ್ ಬಿಎಸ್6 ಆವೃತ್ತಿಯಲ್ಲಿ, 411 ಸಿಸಿಯ ಸಿಂಗಲ್-ಸಿಲಿಂಡರ್ ಏರ್ ಕೂಲ್ಡ್ ಎಂಜಿನ್ ಅಳವಡಿಸಲಾಗುವುದು. ಈ ಎಂಜಿನ್ 25.4 ಬಿಹೆಚ್ಪಿ ಪವರ್ ಹಾಗೂ 32 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಬೈಕಿನಲ್ಲಿ 5-ಸ್ಪೀಡ್ ಗೇರ್ಬಾಕ್ಸ್ ನೀಡಲಾಗುವುದು.
MOST READ: ವಿಭಿನ್ನವಾಗಿ ಸ್ಕೂಟರ್ ಖರೀದಿಸಿದ ಗ್ರಾಹಕ - ಶೋರೂಂ ಸಿಬ್ಬಂದಿಗೆ ಸುಸ್ತೋ ಸುಸ್ತು..!
ಯಾವುದೇ ಹೆಚ್ಚಿನ ಬದಲಾವಣೆಗಳಿಲ್ಲದೆ ಬಿಎಸ್-6 ಆವೃತ್ತಿಯು ಈಗಿರುವ ಬಿಡಿಭಾಗಗಳಲ್ಲಿಯೇ ಮುಂದುವರೆಯುವ ಸಾಧ್ಯತೆಗಳಿವೆ. ರಾಯಲ್ ಎನ್ಫೀಲ್ಡ್ ಹಿಮಾಲಯನ್ ಅಡ್ವೆಂಚರ್ ಟೂರರ್ ಬೈಕಿನ ತಳಭಾಗದಲ್ಲಿ ಹಾಫ್ ಡ್ಯುಪ್ಲೆಕ್ಸ್ ಕ್ರೆಡಲ್ ಫ್ರೇಂಗಳಿವೆ. ಇವುಗಳ ಬೆಂಬಲಕ್ಕಾಗಿ ಮುಂಭಾಗದಲ್ಲಿ 41 ಎಂಎಂನ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ ಹಾಗೂ ಹಿಂಭಾಗದಲ್ಲಿ ಮೊನೊಶಾಕ್ಗಳಿವೆ.
MOST READ: ಖಾಸಗಿ ವಿಮಾನ ಹೊಂದಿರುವ ಉದ್ಯಮಿಗಳಿವರು..!
ಬೈಕಿನ ಮುಂಭಾಗದಲ್ಲಿ 21 ಇಂಚು ಹಾಗೂ ಹಿಂಭಾಗದಲ್ಲಿ 17 ಇಂಚಿನ ಸ್ಪೋಕ್ ವ್ಹೀಲ್ಗಳಿದ್ದು, ಕ್ರಮವಾಗಿ 90/90 ಹಾಗೂ 120/90 ಸೆಕ್ಷನ್ ಟಯರ್ಗಳನ್ನು ಹೊಂದಿವೆ. ಬ್ರೇಕಿಂಗ್ಗಳಿಗಾಗಿ ಮುಂಭಾಗದಲ್ಲಿ ಎರಡು ಪಿಸ್ಟನ್ ಕ್ಯಾಲಿಪರ್ನ 300 ಎಂಎಂ ಫ್ರಂಟ್ ಡಿಸ್ಕ್ ಹಾಗೂ ಹಿಂಭಾಗದಲ್ಲಿ 240 ಎಂಎಂನ ಸಿಂಗಲ್ ಪಿಸ್ಟನ್ ಕ್ಯಾಲಿಪರ್ಗಳಿವೆ.
MOST READ: ವಿಮಾನಗಳಲ್ಲಿ ಬಿಳಿ ಬಣ್ಣವನ್ನೇ ಬಳಕೆ ಮಾಡುವುದರ ಹಿಂದಿನ ಕಾರಣವೇನು?
ಡ್ಯುಯಲ್ ಚಾನೆಲ್ ಎಬಿಎಸ್ ಅನ್ನು ಸ್ಟಾಂಡರ್ಡ್ ಆಗಿ ನೀಡಲಾಗುವುದು. ಎಕ್ಸ್ ಶೋರೂಂ ದರವಾದ ರೂ.1.81 ಲಕ್ಷದಲ್ಲಿ ರಾಯಲ್ ಎನ್ಫೀಲ್ಡ್ ಕಂಪನಿಯ ಹಿಮಾಲಯನ್ ಬೈಕ್ ಈ ಸೆಗ್ಮೆಂಟಿನಲ್ಲಿರುವ ಉತ್ತಮವಾದ ಅಡ್ವೆಂಚರ್ ಟೂರರ್ ಬೈಕ್ ಆಗಿದೆ.
ಈ ಬೈಕ್ ದೇಶಿಯ ಮಾರುಕಟ್ಟೆಯಲ್ಲಿ ಬಿಎಂಡಬ್ಲ್ಯು ಜಿ 310 ಜಿಎಸ್ ಹಾಗೂ ಕವಾಸಕಿ ವರ್ಸಿಸ್-ಎಕ್ಸ್ 300 ಬೈಕುಗಳ ಜೊತೆಗೆ ಇದೇ ಇಐಸಿಎಂಎನಲ್ಲಿ ಪ್ರದರ್ಶನಗೊಂಡ ಕೆಟಿಎಂ 390 ಬೈಕುಗಳಿಗೆ ಪೈಪೋಟಿ ನೀಡುತ್ತದೆ. ರಾಯಲ್ ಎನ್ಫೀಲ್ಡ್ ಕಂಪನಿಯು ಸದ್ಯಕ್ಕೆ ತನ್ನ ಸರಣಿಯಲ್ಲಿರುವ ಎಲ್ಲಾ ಬೈಕುಗಳನ್ನು ಹೊಸ ಮಾಲಿನ್ಯ ನಿಯಮಗಳಿಗೆ ತಕ್ಕಂತೆ ಅಪ್ಗ್ರೇಡ್ ಮಾಡುತ್ತಿದೆ.
ಮೊದಲಿಗೆ ಜನಪ್ರಿಯ ಟ್ವಿನ್ ಬೈಕುಗಳಾದ ಕಾಂಟಿನೆಂಟಲ್ ಜಿಟಿ ಹಾಗೂ ಇಂಟರ್ಸೆಪ್ಟರ್ 650 ಬೈಕುಗಳನ್ನು ನವೀಕರಿಸುವ ಸಾಧ್ಯತೆಗಳಿವೆ. ನಂತರ ಬುಲೆಟ್, ಕ್ಲಾಸಿಕ್, ಥಂಡರ್ ಬರ್ಡ್ ಹಾಗೂ ಹಿಮಾಲಯನ್ ಬೈಕುಗಳನ್ನು ಅಪ್ಗ್ರೇಡ್ಗೊಳಿಸಲಿದೆ.
ಇಟಲಿಯ ಮಿಲಾನ್ನಲ್ಲಿ ನಡೆಯುತ್ತಿರುವ 2019ರ ಇಐಸಿಎಂಎನಲ್ಲಿ ರಾಯಲ್ ಎನ್ಫೀಲ್ಡ್ ಕಂಪನಿಯು ಟ್ವಿನ್ ಪ್ಲಾಟ್ಫಾರ್ಮ್ ಅನ್ನು ಆಧರಿಸಿದ ಫ್ಲಾಟ್ ಟ್ರ್ಯಾಕ್ ಕಾನ್ಸೆಪ್ಟ್ ಅನ್ನು ಅನಾವರಣಗೊಳಿಸಿದೆ. ಇದರ ಜೊತೆಗೆ ಹಲವು ರೀತಿಯ ಮಾದರಿಗಳನ್ನು ಸಹ ಪ್ರದರ್ಶಿಸಿದೆ.