Back
Home » ಸಿನಿ ಸಮಾಚಾರ
ಗಣೇಶ್ ಗೆ ತಲುಪಿದ ಧ್ರುವ ಸರ್ಜಾ ಮದುವೆ ಕರೆಯೋಲೆ
Oneindia | 8th Nov, 2019 01:47 PM

ಇದೇ ತಿಂಗಳ 24 ರಂದು ಭರ್ಜರಿ ಹುಡುಗ ಧ್ರುವ ಸರ್ಜಾ ವಿವಾಹ ನಡೆಯಲಿದೆ. ಸದ್ಯ, ಚಿತ್ರರಂಗದ ಸ್ನೇಹಿತರಿಗೆ ಆಮಂತ್ರಣ ಪತ್ರಿಕೆಯನ್ನು ಧ್ರುವ ನೀಡುತ್ತಿದ್ದಾರೆ.

ಗೋಲ್ಡನ್ ಸ್ಟಾರ್ ಗಣೇಶ್ ರಿಗೆ ಧ್ರುವ ಸರ್ಜಾ ಆಮಂತ್ರಣ ಪತ್ರಿಕೆ ನೀಡಿ, ಮದುವೆಗೆ ಆಹ್ವಾನ ಮಾಡಿದ್ದಾರೆ. ಆರ್ ಆರ್ ನಗರದ ಗಣೇಶ್ ಮನೆಗೆ ಧ್ರುವ ಸರ್ಜಾ ಭೇಟಿ ನೀಡಿದ್ದರು. ಧ್ರುವಗೆ ಗಣೇಶ್ ಶುಭಾಶಯ ತಿಳಿಸಿದರು.

ಧ್ರುವ ಸರ್ಜಾ ಮದುವೆ ಆಮಂತ್ರಣ ಪತ್ರಿಕೆಯ ವಿಶೇಷತೆ ಏನು ಗೊತ್ತಾ?

ಧ್ರುವ ಜೊತೆಗಿನ ಫೋಟೋವನ್ನು ಗಣೇಶ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ದಿನಾಂಕ 24ಕ್ಕೆ ನಿನ್ನ ಮದುವೆ ಆಗುತ್ತದೆ. ನಮ್ಮ ಸಂಘ ಅಂದರೆ, ಮದುವೆಯಾದವರ ಸಂಘಕ್ಕೆ ಸ್ವಾಗತ ಎಂದು ತಮಾಷೆ ಮಾಡಿದ್ದಾರೆ.

ಧ್ರುವ ಸರ್ಜಾ ನಟ ಪ್ರಜ್ವಲ್ ದೇವರಾಜ್, ನಿರ್ದೇಶಕ ಮಹೇಶ್ ಕುಮಾರ್, ಬಿಗ್ ಬಾಸ್ ಸ್ಪರ್ಧಿ ಪ್ರಥಮ್ ಸೇರಿದಂತೆ ಅನೇಕರಿಗೆ ಈಗಾಗಲೇ ಆಮಂತ್ರಣ ಪತ್ರಿಕೆ ನೀಡಿ ಮದುವೆಗೆ ಆಹ್ವಾನ ನೀಡಿದ್ದಾರೆ.

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮದುವೆ ಆಮಂತ್ರಣ ಪತ್ರಿಕೆ ಬಹಿರಂಗ

ಧ್ರುವ ಸರ್ಜಾ ಮತ್ತು ಪ್ರೇರಣಾ ಮದುವೆ ಇದೇ ತಿಂಗಳು 24ರಂದು ಬೆಂಗಳೂರಿನ ಸಂಸ್ಕೃತಿ ಬೃಂದಾವನ ಕನ್ವೆಷನ್ ಹಾಲ್ ನಲ್ಲಿ ನಡೆಯಲಿದೆ. ಭಾನುವಾರ ಬೆಳಗ್ಗೆ 7.15 ರಿಂದ 7.45ರ ವರೆಗೆ ಸಲ್ಲುವ ಶುಭ ವೃಶ್ಚಿಕ ಲಗ್ನದಲ್ಲಿ ಧ್ರುವ ಮತ್ತು ಪ್ರೇರಣಾ ಶಂಕರ್ ಪತಿ-ಪತ್ನಿಯರಾಗಲಿದ್ದಾರೆ.

   
 
ಹೆಲ್ತ್