Back
Home » ಸಿನಿ ಸಮಾಚಾರ
ರವಿಚಂದ್ರನ್ ಸಿನಿಮಾ ನೋಡಿ ಅವ್ರ ಮಕ್ಕಳೇ ಭಯ ಪಟ್ಟರು
Oneindia | 8th Nov, 2019 03:11 PM

ನಟ ರವಿಚಂದ್ರನ್ ನಟನೆಯ 'ಆ ದೃಶ್ಯ' ಸಿನಿಮಾ ಇಂದು ಬಿಡುಗಡೆಯಾಗಿದೆ. ಸಿನಿಮಾವನ್ನು ನಿನ್ನೆ (ನವೆಂಬರ್ 7) ರವಿಚಂದ್ರನ್ ಹಾಗೂ ಅವರ ಪುತ್ರರು ವೀಕ್ಷಿಸಿದ್ದಾರೆ.

ಸಿನಿಮಾ ನೋಡಿ ನಮಗೆ ಭಯ ಆಗಿದೆ ಎಂದು ಮನೋರಂಜನ್ ರವಿಚಂದ್ರನ್ ಹೇಳಿದ್ದಾರೆ. ಕಾರಣ ಸಿನಿಮಾದಲ್ಲಿ ಅಷ್ಟೊಂದು ಯಂಗ್ ಅಗಿ ರವಿಚಂದ್ರನ್ ಕಾಣುತ್ತಾರೆ. ಅಷ್ಟೊಂದು ಚೆನ್ನಾಗಿ ನಟನೆ ಮಾಡಿದ್ದಾರಂತೆ.

ನಾಳೆ (ಶುಕ್ರವಾರ) ಕನ್ನಡದ 6 ಸಿನಿಮಾಗಳು ಬಿಡುಗಡೆ

ಸಿನಿಮಾದ ಬಗ್ಗೆ ಮಾತನಾಡಿದ ಮನೋರಂಜನ್ ''ಸಿನಿಮಾ ತುಂಬ ಸಸ್ಪೆನ್ಸ್ ಆಗಿದೆ. ಡ್ಯಾಡಿ ಮಾತ್ರ.... ನಮಗೆ ಕಷ್ಟ ಆಗುತ್ತದೆ. ಅವರು ಅಷ್ಟೊಂದು ಯಂಗ್ ಆಗಿ ಕಾಣಿಸಿದರೆ, ನಾವೆಲ್ಲಿ ಹೋಗುವುದು ಅಂತ ಭಯ ಆಗುತ್ತದೆ. ಅಪ್ಪ ಅದ್ಭುತವಾಗಿ ಸಿನಿಮಾದಲ್ಲಿ ನಟಿಸಿದ್ದಾರೆ. ಫಸ್ಟ್ ಹಾಫ್ ನಲ್ಲಿ ನಾನು ಗೆಸ್ ಮಾಡಿದ್ದು, ಸುಳ್ಳಾಗಿದೆ. ಸಿನಿಮಾ ತುಂಬ ಚೆನ್ನಾಗಿದೆ.'' ಎಂದು ಹೇಳಿದ್ದಾರೆ.

ವಿಶೇಷವಾಗಿ ರೀ ರೆಕಾರ್ಡಿಂಗ್ ಹಾಗೂ ಎರಡು ಪಾತ್ರಗಳನ್ನು ರವಿಚಂದ್ರನ್ ನಿರ್ವಹಿಸಿರುವ ರೀತಿ ಮನೋರಂಜನ್ ಗೆ ಇಷ್ಟ ಆಗಿದೆ. ಸಿನಿಮಾ ಎಲ್ಲಿಯೂ ಬೋರ್ ಆಗುವುದಿಲ್ಲ. ತುಂಬ ಆಸಕ್ತಿದಾಯಕವಾಗಿದೆ ಎನ್ನುವದು ಮನೋರಂಜನ್ ಅಭಿಪ್ರಾಯ.

ಪುತ್ರನಿಗೆ ಕ್ರೇಜಿಸ್ಟಾರ್ ನಿರ್ದೇಶನ: 90 ನಿಮಿಷದಲ್ಲಿ ಸಿದ್ಧವಾದ ಕಥೆ

'ಆ ದೃಶ್ಯ' ಕೆ ಮಂಜು ನಿರ್ಮಾಣದಲ್ಲಿ, ಶಿವ ಗಣೇಶ್ ನಿರ್ದೇಶನ ಮಾಡಿರುವ ಸಿನಿಮಾ. ಮರ್ಡರ್ ಮಿಸ್ಟರಿ ಕಥೆ ಸಿನಿಮಾದಲ್ಲಿದೆ. ಅಚ್ಚುತ್ ಕುಮಾರ್, ರಮೇಶ್ ಭಟ್, ಚೈತ್ರ ಆಚಾರ್, ಯಶ್ ಶೆಟ್ಟಿ, ಅರ್ಜುನ್ ಗೌಡ ಸಿನಿಮಾದಲ್ಲಿ ನಟಿಸಿದ್ದಾರೆ.

   
 
ಹೆಲ್ತ್