ನರೇಂದ್ರ ಮೋದಿ ಸರ್ಕಾರ ನೋಟು ಅಮಾನ್ಯ ಘೋಷಿಸಿ ನವೆಂಬರ್ 8ಕ್ಕೆ (ಶುಕ್ರವಾರ) ಮೂರು ವರ್ಷವಾಗಿದೆ. ಇಷ್ಟಾದರೂ ನಗದು ಪಾವತಿಯೇ ರಿಯಲ್ ಎಸ್ಟೇಟ್ ವ್ಯವಹಾರಗಳಲ್ಲಿ ಪ್ರಾಬಲ್ಯ ಮುಂದುವರಿಸಿದೆ ಎಂದು ಸಮುದಾಯ ವೇದಿಕೆ Localcircles ತನ್ನ ಸಮೀಕ್ಷೆಯಲ್ಲಿ ತಿಳಿಸಿದೆ. ಈ ಕುರಿತು ಲೇಖನ ಇಲ್ಲಿದೆ.
ಕೇಂದ್ರ ಸರ್ಕಾರ ಅಪನಗದೀಕರಣ ಘೋಷಣೆ ಮಾಡಿ ನವೆಂಬರ್ 8ಕ್ಕೆ ಮೂರು ವರ್ಷ ಪೂರ್ತಿಯಾಗಿದೆ. 2016 ನವೆಂಬರ್ 8ರಂದು ದೂರದರ್ಶನದ ಮೂಲಕ ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಇಂದು ಮಧ್ಯರಾತ್ರಿಯಿಂದಲೇ 500 ರು. ಮತ್ತು 1000 ರು. ಮುಖಬೆಲೆ ನೋಟುಗಳು ಅಮಾನ್ಯೀಕರಣವಾಗಲಿದೆ ಎಂದು ಘೋಷಿಸಿದ್ರು.
ಯಾವ ಉಳಿತಾಯ ಸೇಫ್ ಮತ್ತು ಬೆಸ್ಟ್? ಇಲ್ಲಿವೆ 6 ಆಯ್ಕೆಗಳು
ಮೇರೆ ಪ್ಯಾರ್ ದೇಶ್ ವಾಸಿಯೋ.. ಎಂದು ಪ್ರಧಾನಿ ನರೇಂದ್ರ ಮೋದಿ ಮಾಡಿದ್ದ ಅಂದಿನ ಆ ಘೋಷಣೆ ಭಾರತದ ಆರ್ಥಿಕತೆಯಲ್ಲಿ ಸಂಚಲವನ್ನೇ ಸೃಷ್ಟಿಸಿತು ಎಂದರೆ ತಪ್ಪಾಗಲಾರದು. ಸರ್ಕಾರದ ಈ ದಿಢೀರ್ ಕ್ರಮಕ್ಕೆ ಸಾರ್ವಜನಿಕರು ಗೊಂದಲಕ್ಕೆ ಸಿಲುಕಿದ್ದರು. ಗುಪ್ತವಾಗಿ ಹಣವನ್ನ ಕೂಡಿಟ್ಟಿದ್ದ ಕಾಳಧನಿಕರು ಚಿಂತಾಕ್ರಾಂತರಾಗಿದ್ದರು.
ಆರಂಭದಲ್ಲಿ ಜನರು ಇದನ್ನು ಸ್ವಾಗತಿಸಿದರು. ಎಟಿಎಂಗಳಲ್ಲಿ ಹಣಕ್ಕಾಗಿ ಸರತಿ ಸಾಲಿನಲ್ಲಿ ನಿಂತರು. ಬ್ಯಾಂಕ್ಗಳಲ್ಲಿ ಡೆಪಾಸಿಟ್ ಮಾಡಲು ಜನರು ಸಾಲುಗಟ್ಟಿದರು. ಕಪ್ಪುಹಣದ ವಿರುದ್ಧ ಇದು ನಿರ್ಣಾಯಕ ಸಮರ ಎಂಬ ಕಾರಣಕ್ಕೆ ಪ್ರಧಾನಿಗೆ ಬೆಂಬಲವಾಗಿದ್ದರು.
ಜೊತೆಗೆ 500 ರು. 1000 ರು. ಮುಖಬೆಲೆಯ ನೋಟುಗಳು ರದ್ದಿ ಪೇಪರ್ ಆಗಲಿವೆ ಎಂಬುದು ಕಾಳಧನಿಕರಿಗೆ ನಡುಕವನ್ನೇ ಸೃಷ್ಟಿಸಿತ್ತು. ಮತ್ತೊಂದೆಡೆ ಅಪನಗದೀಕರಣ ದೇಶದ ಆರ್ಥಿಕ ಕುಂಠಿತಕ್ಕೂ ಕಾರಣವಾಯಿತು ಎಂಬ ಆರೋಪ ಕೂಡ ವ್ಯಕ್ತವಾಗಿತ್ತು.