Back
Home » Business
ಶ್ರೀಲಂಕಾದಲ್ಲೂ ಶುರುವಾಯಿತು ಪಿವಿಆರ್ ಸಿನಿಮಾಸ್
Good Returns | 8th Nov, 2019 05:26 PM

ಪಿವಿಆರ್ ಸಿನಿಮಾಸ್ ಅಂತರರಾಷ್ಟ್ರೀಯ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ. ಶ್ರೀಲಂಕಾದ ರಾಜಧಾನಿ ಕೊಲಂಬೋದಲ್ಲಿರುವ ಒನ್ ಗಾಲೆ ಫೇಸ್ ಮಾಲ್ ನಲ್ಲಿ ಪಿವಿಆರ್ ಲಂಕಾ ಶುಕ್ರವಾರ ಆರಂಭವಾಗಿದೆ. ಒಟ್ಟು ಒಂಬತ್ತು ಸ್ಕ್ರೀನ್ ಗಳು ಇದ್ದು, ಶಾಂಗ್ರಿ ಲಾ ಗ್ರೂಪ್ ಜತೆಗೆ ಸೇರಿ ಇದನ್ನು ಆರಂಭಿಸಲಾಗಿದೆ.

ಶಾಂಗ್ರಿಲಾ ಗ್ರೂಪ್ ಮಾಮೂಲಿ ಚಿತ್ರಮಂದಿರಗಳನ್ನು ನಡೆಸುತ್ತದೆ. ಶ್ರೀಲಂಕಾ ರುಪಾಯಿಯಲ್ಲಿ ಹೇಳುವುದಾದರೆ ಐನೂರು ರುಪಾಯಿ ದರ ವಿಧಿಸುತ್ತದೆ. ಎರಡನೆ ದುಬಾರಿ ಫಾರ್ಮಾಟ್ ಅನ್ನು PVR LUXE ಎನ್ನಲಾಗುತ್ತದೆ. ಅದಕ್ಕೆ 1300 ಲಂಕನ್ ರುಪಾಯಿ ಟಿಕೆಟ್ ದರ ಇರುತ್ತದೆ. ಪಿವಿಆರ್ ಪ್ಲೇಹೌಸ್ ಕೂಡ ಇದ್ದು, ಈ ಆಡಿಟೋರಿಯಂ ಅನ್ನು ಯುವಜನರಿಗೆ ಮತ್ತು ಅವರ ಕುಟುಂಬಕ್ಕೆ ಮೀಸಲಿರಿಸಲಾಗಿದೆ.

'ಬಿಜಲಿ'ಯಂಥ ಡೀಲ್, ಪಿವಿಆರ್ ಸಿನಿಮಾಸ್ ಷೇರುಗಳು ಏರಿಳಿತ

ಪಿವಿಆರ್ ನ ಅಧ್ಯಕ್ಷ ಹಾಗೂ ಮ್ಯಾನೇಜಿಂಗ್ ಡೈರೆಕ್ಟರ್ ಕೂಡ ಆಗಿರುವ ಅಜಯ್ ಬಿಜ್ಲಿ ಮಾತನಾಡಿ, ದಕ್ಷಿಣ ಭಾರತೀಯರಂತೆಯೇ ಶ್ರೀಲಂಕನ್ನರು ಕೂಡ ಹಲವು ಭಾಷೆಯ ಸಿನಿಮಾಗಳನ್ನು ನೋಡುತ್ತಾರೆ. ಇಂಗ್ಲಿಷ್ ಹೊರತು ಪಡಿಸಿ ಸಿಂಹಳೀಸ್, ತಮಿಳು ಹಾಗೂ ಸಬ್ ಟೈಟಲ್ ಗಳ ಜತೆಗೆ ಹಿಂದಿ ಸಿನಿಮಾಗಳನ್ನು ನೋಡುತ್ತಾರೆ ಎಂದಿದ್ದಾರೆ.

ಭಾರತೀಯ ಸಿನಿಮಾಗಳ ಮಾರುಕಟ್ಟೆಯೂ ವಿಸ್ತಾರವಾಗಿದೆ. ಜಾಗತಿಕ ಮಟ್ಟದಲ್ಲಿ ಪಿವಿಆರ್ ಮಲ್ಟಿಪ್ಲೆಕ್ಸ್ ಆರಂಭಿಸುವ ಗುರಿ ಇದೆ. ಆದರೆ ಸದ್ಯಕ್ಕೆ ಶ್ರೀಲಂಕಾದಲ್ಲಿ ಮಾತ್ರ ಕಾರ್ಯ ನಿರ್ವಹಣೆ ಇರುತ್ತದೆ. ಕೊಲಂಬೋದಲ್ಲೇ ಇನ್ನಷ್ಟು ಕಡೆ, ಕ್ಯಾಂಡಿ, ಗಾಲೆಯಲ್ಲೂ ಆರಂಭವಾಗಲಿದೆ ಎಂದು ಬಿಜ್ಲಿ ಹೇಳಿದ್ದಾರೆ.

ಕೊಲಂಬೋದಲ್ಲಿ ಪಿವಿಆರ್ ನ ಮಲ್ಟಿಪ್ಲೆಕ್ಸ್ ಎರಡು ಅಂತಸ್ತುಗಳಲ್ಲಿ 38,454 ಚದರಡಿ ವ್ಯಾಪಿಸಿದ್ದು, ಒಟ್ಟು 1,176 ವೀಕ್ಷಕರಿಗೆ ಸೀಟಿಂಗ್ ವ್ಯವಸ್ಥೆ ಇದೆ. ಸದ್ಯಕ್ಕೆ ಪಿವಿಆರ್ ಭಾರತ, ಶ್ರೀಲಂಕಾ ಸೇರಿದಂತೆ 70 ನಗರಗಳಲ್ಲಿ 171 ಕಡೆ ಇದ್ದು, 809 ಸ್ಕ್ರೀನ್ ಗಳನ್ನು ಹೊಂದಿದೆ.

   
 
ಹೆಲ್ತ್