Back
Home » ಇತ್ತೀಚಿನ
ಬಜೆಟ್‌ ಬೆಲೆಯ ಹೊಸ ಶಿಯೋಮಿ ಫೋನ್‌ಗಳು ಈಗ ಇನ್ನಷ್ಟು ಅಗ್ಗ!
Gizbot | 12th Nov, 2019 12:30 PM
 • ಶಿಯೋಮಿ

  ಹೌದು, ಶಿಯೋಮಿ ಕಂಪನಿಯು ಇತ್ತೀಚಿಗೆ ಬಿಡುಗಡೆ ಆಗಿರುವ ಪ್ರಮುಖ ಆರು ಸ್ಮಾರ್ಟ್‌ಫೋನ್‌ಗಳ ಬೆಲೆಯಲ್ಲಿ ಕಡಿತ ಮಾಡಿದೆ. ಹೀಗಾಗಿ ಬಜೆಟ್‌ ದರದಲ್ಲಿದ್ದ ಫೋನ್‌ಗಳು ಈಗ ಇನ್ನಷ್ಟು ಅಗ್ಗದಲ್ಲಿ ಸಿಗಲಿವೆ. ರೆಡ್ಮಿ ಕೆ20, ರೆಡ್ಮಿ ಕೆ20 ಪ್ರೊ, ರೆಡ್ಮಿ, ನೋಟ್ 7 ಪ್ರೊ, ರೆಡ್ಮಿ ನೋಟ್ 7S, ರೆಡ್ಮಿ Y3 ಮತ್ತು ರೆಡ್ಮಿ 7 ಸ್ಮಾರ್ಟ್‌ಫೋನ್‌ಗಳು ಬೆಲೆ ಇಳಿಕೆ ಲಿಸ್ಟ್‌ನಲ್ಲಿ ಕಾಣಿಸಿಕೊಂಡಿರುವ ಮೇನ್‌ ಫೋನ್‌ಗಳು. ಹಾಗಾದರೇ ಡಿಸ್ಕೌಂಟ್ ಪಡೆದ ಶಿಯೋಮಿಯ ಸ್ಮಾರ್ಟ್‌ಫೋನ್‌ಗಳ ಫೀಚರ್ ಮತ್ತು ಬೆಲೆಯ ಬಗ್ಗೆ ಮುಂದೆ ನೋಡೋಣ ಬನ್ನಿರಿ.


 • ಶಿಯೋಮಿ ರೆಡ್ಮಿ ಕೆ20 ಪ್ರೊ

  ಶಿಯೋಮಿಯ ರೆಡ್ಮಿ ಕೆ20 ಪ್ರೊ ಸ್ಮಾರ್ಟ್‌ಫೋನ್ ಬೆಲೆಯಲ್ಲಿಯೂ ಸಹ ಡಿಸ್ಕೌಂಟ್‌ ಆಗಿದೆ. 27,999ರೂ.ಗಳಿಗೆ ಲಭ್ಯವಿದ್ದ 6GB+128GB ವೇರಿಯಂಟ್‌ ಇದೀಗ 25,999ರೂ.ಗಳಿಗೆ ಸಿಗಲಿದೆ. ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 855 ಪ್ರೊಸೆಸರ್‌ ಹೊಂದಿದ್ದು, 4,000mAh ಬ್ಯಾಟರಿ ಬಾಳಿಕೆಯನ್ನು ಪಡೆದಿದೆ.


 • ಶಿಯೋಮಿ ರೆಡ್ಮಿ ಕೆ20

  ಶಿಯೋಮಿಯ ರೆಡ್ಮಿ ಕೆ20 ಸ್ಮಾರ್ಟ್‌ಫೋನ್ ಬೆಲೆಯಲ್ಲಿಯೂ ಇಳಿಕೆ ಆಗಿದೆ. 6GB+64GB ವೇರಿಯಂಟ್‌ 21,999ರೂ.ಗಳಿಗೆ ಲಾಂಚ್ ಆಗಿತ್ತು ಆದ್ರೀಗ 19,999ರೂ.ಗಳಿಗೆ ಸಿಗಲಿದೆ. ಹಾಗೆಯೇ 6GB+128GB ವೇರಿಯಂಟ್‌ 23,999ರೂ.ಗಳಿಗೆ ಬಿಡುಗಡೆ ಆಗಿತ್ತು. ಇದೀಗ 22,999ರೂ,ಗಳಿಗೆ ಲಭ್ಯ.


 • ಶಿಯೋಮಿ ರೆಡ್‌ಮಿ ನೋಟ್‌ 7 ಪ್ರೊ

  ಶಿಯೋಮಿ ರೆಡ್‌ಮಿ ನೋಟ್‌ 7 ಪ್ರೋ ಸ್ಮಾರ್ಟ್‌ಫೋನ್‌ ಬೆಲೆಯಲ್ಲಿ ಕಡಿತವಾಗಿದೆ. 4GB+64GB ವೇರಿಯಂಟ್‌ 13,999ರೂ.ಗಳಿಗೆ ಲಾಂಚ್ ಆಗಿತ್ತು. ಈಗ 11,999ರೂ.ಗಳಿಗೆ ದೊರೆಯಲಿದೆ. ಇನ್ನು 15,999ರೂ.ಗಳಿದ್ದ 6GB+64GB ವೇರಿಯಂಟ್‌ ಬೆಲೆಯು ಇದೀಗ 13,999ರೂ.ಗಳಾಗಿದೆ. ಹಾಗೆಯೇ 6GB+128GB ವೇರಿಯಂಟ್‌ 2,000ರೂ. ಇಳಿಕೆ ಕಂಡಿದೆ.


 • ಶಿಯೋಮಿ ರೆಡ್‌ಮಿ ನೋಟ್‌ 7S

  ಜನಪ್ರಿಯ ಶಿಯೋಮಿ ರೆಡ್‌ಮಿ ನೋಟ್‌ 7S ಫೋನ್‌ ಪ್ರೈಸ್‌ನಲ್ಲಿಯೂ ಇಳಿಕೆ ಆಗಿದೆ. 10,999ರೂ.ಗಳಿಗೆ ಲಾಂಚ್‌ ಆಗಿದ್ದ 3GB+32GB ವೇರಿಯಂಟ್‌ ಸ್ಮಾರ್ಟ್‌ಫೋನ್ ಈಗ 9,999ರೂ.ಗಳಿಗೆ ಲಭ್ಯ. ಹಾಗೆಯೇ 4GB+64GB ವೇರಿಯಂಟ್‌ ಸ್ಮಾರ್ಟ್‌ಫೋನ್ ಕೇವಲ 11,999ರೂ.ಗಳಿಗೆ ದೊರೆಯುತ್ತದೆ.


 • ಶಿಯೋಮಿ ರೆಡ್‌ಮಿ Y3

  ಅಗ್ಗದ ಪ್ರೈಸ್‌ಟ್ಯಾಗ್‌ನ ಶಿಯೋಮಿ ರೆಡ್‌ಮಿ Y3 ಸ್ಮಾರ್ಟ್‌ಫೋನ್‌ ಪ್ರೈಸ್‌ಟ್ಯಾಗ್‌ನಲ್ಲಿಯೂ ಇದೀಗ ಇನ್ನಷ್ಟು ಡಿಸ್ಕೌಂಟ್‌ ಲಭಿಸಿದೆ. ಈ ಸ್ಮಾರ್ಟ್‌ಫೋನ್‌ 3GB+32GB ವೇರಿಯಂಟ್‌ 9,999ರೂ.ಗಳಿಗೆ ಲಭ್ಯವಿತ್ತು. ಆದ್ರೆ ಇದೀಗ ಕೇವಲ 8,999ರೂ.ಗಳಿಗೆ ಖರೀದಿಸಬಹುದಾಗಿದೆ.


 • ಶಿಯೋಮಿ ರೆಡ್‌ಮಿ 7

  ಇತ್ತೀಚಿನ ಶಿಯೋಮಿ ರೆಡ್‌ಮಿ 7 ಸ್ಮಾರ್ಟ್‌ಫೋನ್‌ಗೂ ಬೆಸ್ಟ್ ಡಿಸ್ಕೌಂಟ್‌ ಲಭಿಸಿದೆ. 7,999ರೂ.ಗಳಿಗೆ 2GB+32GB ವೇರಿಯಂಟ್‌ ಲಾಂಚ್‌ ಆಗಿತ್ತು. ಪ್ರಸ್ತುತ ಡಿಸ್ಕೌಂಟ್‌ನಿಂದಾಗಿ 7,499ರೂ.ಗಳಿಗೆ ಲಭ್ಯವಾಗಲಿದೆ. ಹಾಗೆಯೇ 3GB+32GBರೂ ವೇರಿಯಂಟ್‌ ಸ್ಮಾರ್ಟ್‌ಫೋನ್ 500ರೂ. ಡಿಸ್ಕೌಂಟ್‌ ಪಡೆದಿದ್ದು, ಸದ್ಯ 8,499ರೂ.ಗಳಿಗೆ ಸಿಗಲಿದೆ.
ಚೀನಾ ಮೂಲದ ಶಿಯೋಮಿ ಕಂಪನಿಯು ಬಜೆಟ್‌ ಬೆಲೆಯಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿ ಗ್ರಾಹಕರನ್ನು ಆಕರ್ಷಿಸಿದೆ. ಹಾಗೆಯೇ ಅತ್ಯುತ್ತಮ ಫ್ಲ್ಯಾಗ್‌ಶಿಫ್‌ ಮಾದರಿಯ ಸ್ಮಾರ್ಟ್‌ಫೋನ್‌ಗಳನ್ನು ಇತ್ತೀಚಿಗೆ ಬಿಡುಗಡೆ ಮಾಡಿದೆ. ಆದ್ರೆ ಇದೀಗ ಶಿಯೋಮಿಯು ಗ್ರಾಹಕರಿಗೆ ಖುಷಿ ಸಮಾಚಾರ್ ನೀಡಿದ್ದು, ತನ್ನ ಜನಪ್ರಿಯ ಸ್ಮಾರ್ಟ್‌ಫೋನ್‌ಗಳ ಬೆಲೆಯಲ್ಲಿ ಭರ್ಜರಿ ಡಿಸ್ಕೌಂಟ್‌ ಘೋಷಿಸಿದೆ.

 
ಹೆಲ್ತ್