Back
Home » ಇತ್ತೀಚಿನ
ವಾಟ್ಸಪ್‌ ಬಳಕೆದಾರರ ಖಾತೆಗೆ ಮತ್ತೆ ಕಳ್ಳಗಣ್ಣಿನ ಕಾಟ!
Gizbot | 19th Nov, 2019 09:00 AM
 • ವಾಟ್ಸಪ್‌

  ಹೌದು, ವಾಟ್ಸಪ್‌ ಅಪ್ಲಿಕೇಶನಿನಲ್ಲಿ ಈಗ ಎಂಪಿ4 ಫಾರ್ಮೆಟ್‌ ಫೈಲ್‌ ಮಾದರಿಯಲ್ಲಿ ಹ್ಯಾಕರ್ಸ್‌ಗಳು ಬಳಕೆದಾರರ ಖಾತೆಗೆ ಲಗ್ಗೆ ಇಡುವ ದೋಷಗಳನ್ನು ಸೈಬರ್ ಸೆಕ್ಯುರಿಟಿ ತಜ್ಞರುಗಳು ಹೊರಹಾಕಿದ್ದಾರೆ. ಆಂಡ್ರಾಯ್ಡ್ ಮತ್ತು ಐಓಎಸ್‌ ಮಾದರಿಯ ಆವೃತ್ತಿ ಎರಡರಲ್ಲಿಯೂ ಎಂಪಿ4 ಫಾರ್ಮೆಟ್‌ ಮಾದರಿ ಮೂಲಕ ಹ್ಯಾಕರ್ಸ್‌ಗಳು ಬಳಕೆದಾರರ ವಾಟ್ಸಪ್‌ ಖಾತೆಗೆ ಕಳ್ಳಗಣ್ಣು ಇರಿಸುತ್ತಿದ್ದಾರೆ ಎನ್ನಲಾಗಿದೆ.


 • ಎಂಪಿ4

  ಹ್ಯಾಕರ್ಸ್‌ಗಳು ವಿನ್ಯಾಸ್‌ಗೊಳಿಸಿದ ಎಂಪಿ4 ಮಾದರಿಯ ಫೈಲ್‌ RCE (Remote Code Execution) ಮತ್ತು DoS (Denial of Service) ಸೈಬರ್ ಅಟ್ಯಾಕ್ ಸಾಧ್ಯತೆಗಳನ್ನು ಹೊಂದಿವೆ ಎನ್ನಲಾಗಿದೆ. ಅಪರಿಚಿತ ಮೂಲದಿಂದ ಬಳಕೆದಾರರ ವಾಟ್ಸಪ್ ಖಾತೆಗೆ ಎಂಪಿ4 ಫೈಲ್‌ ಮೆಸೆಜ್ ಬರುವುದು ಒಂದು ವೇಳೆ ಬಳಕೆದಾರರು ಆ ಫೈಲ್‌ ಅನ್ನು ಓಪೆನ್ ಮಾಡಿದರೇ ಮಾಹಿತಿ ಸೋರಿಕೆಯ ಸಾಧ್ಯತೆಗಳಿರುತ್ತದೆ ಎನ್ನಲಾಗಿದೆ.


 • ಸೆಕ್ಯುರಿಟಿ

  ಸೈಬರ್ ಸೆಕ್ಯುರಿಟಿ ತಜ್ಞರು ಗುರುತಿಸಿರುವ ಎಂಪಿ4 ಮಾದರಿಯ ಫೈಲ್ ದೋಷವು, ಆಂಡ್ರಾಯ್ಡ್‌ 2.19.274 ವರ್ಷನ್‌ ಮತ್ತು ಅದಕ್ಕಿಂತಲೂ ಕೆಳಗಿನ ಆವೃತ್ತಿಗಳಲ್ಲಿ ಕಂಡುಬಂದಿದೆ. ಹಾಗೂ ಐಓಎಸ್‌ ಆವೃತ್ತಿಯ ಮಾದರಿಯಲ್ಲಿ ವಾಟ್ಸಪ್ 2.19.100 ವರ್ಷನ್ ಮತ್ತು ಅದಕ್ಕಿಂತ ಕೆಳಗಿನ ಆವೃತ್ತಿಗಳಲ್ಲಿ ಕಂಡುಬಂದಿದೆ ಎಂದಿದ್ದಾರೆ. ಹಾಗೂ ವಿಂಡೊಸ್‌ ಫೋನ್‌ 2.18.368 ವಾಟ್ಸಪ್‌ ಆವೃತ್ತಿಯಲ್ಲಿ ದೋಷ ಗುರುತಿಸಲಾಗಿದೆ.


 • ಬ್ಯುಸಿನೆಸ್‌ ಆಪ್‌

  ಹಾಗೆಯೇ ವಾಟ್ಸಪ್‌ ಬ್ಯುಸಿನೆಸ್‌ ಆಪ್‌ನ ಕೆಲವು ಆವೃತ್ತಿಗಳು ದೋಷಕ್ಕೆ ಗುರಿಯಾಗುವ ಹಂತದಲ್ಲಿವೆ ಎನ್ನಲಾಗಿದೆ. ಆಂಡ್ರಾಯ್ಡ್‌ ಆವೃತ್ತಿಯಲ್ಲಿ ವಾಟ್ಸಪ್‌ 2.19.104 ವರ್ಷನ್ ಹಾಗೂ ಐಓಎಸ್‌ ವಾಟ್ಸಪ್ 2.18.368 ವರ್ಷನ್‌ ಮಾದರಿಗಳಲ್ಲಿ ಸಹ ಎಂಪಿ4 ಫೈಲ್ ಮಾದರಿಯ ದೋಷಗಳು ಕಂಡುಬಂದಿವೆ ಎಂದಿದ್ದಾರೆ. ಎಂಪಿ4 ಹ್ಯಾಕ್/ದೋಷ ವಾಟ್ಸಪ್‌ ಖಾತೆಗೆ ಲಗ್ಗೆ ಇಡಬಾರದೆಂದರೇ ವಾಟ್ಸಪ್‌ ಅಪ್‌ಡೇಟ್ ಮಾಡಬೇಕು. ಹೊಸ ಆವೃತ್ತಿಗೆ ನಿಮ್ಮ ವಾಟ್ಸಪ್‌ ಖಾತೆಯನ್ನು ಅಪ್‌ಡೇಟ್ ಮಾಡಿಕೊಳ್ಳುವುದು ಉತ್ತಮ ಎಂದು ಹೇಳಿದ್ದಾರೆ.
ಅತೀ ಹೆಚ್ಚಿನ ಸಕ್ರಿಯ ಬಳಕೆದಾರರನ್ನು ಹೊಂದಿರುವ ವಾಟ್ಸಪ್‌, ಅತ್ಯುತ್ತಮ ಮೆಸೆಜ್‌ ಪ್ಲಾಟ್‌ಫಾರ್ಮ್ ಆಗಿದೆ. ವಾಟ್ಸಪ್‌ನಲ್ಲಿ ವಿಡಿಯೊ, ಫೋಟೊ, ಸೇರಿದಂತೆ ಕರೆಗಳನ್ನು ಸಹ ಮಾಡಬಹುದಾಗಿದೆ. ಆದ್ರೆ ಇತ್ತೀಚಿಗೆ ವಾಟ್ಸಪ್ ಸಂಸ್ಥೆಯು ಬಳಕೆದಾರರ ಮಾಹಿತಿ ಸೋರಿಕೆಯಿಂದ (ಪೆಗಾಸಾಸ್‌-ಹ್ಯಾಕ್‌) ಸುದ್ದಿಯಾಗಿತ್ತು. ಆ ಘಟನೆ ಮರೆಯುವ ಮುನ್ನವೇ ವಾಟ್ಸಪ್‌ನಲ್ಲಿ ಇದೀಗ ಮತ್ತೊಂದು ಸಮಸ್ಯೆ ಎದುರಾಗಿದೆ.

 
ಹೆಲ್ತ್