Back
Home » ಇತ್ತೀಚಿನ
ಡಿಸೆಂಬರ್ 1 ರಿಂದ ಮೊಬೈಲ್ ಬಳಕೆದಾರರು ಬೆಚ್ಚಿಬೀಳುವುದು ಗ್ಯಾರಂಟಿ!..ಏಕೆ ಗೊತ್ತಾ?
Gizbot | 20th Nov, 2019 11:56 AM
 • ವೊಡಾಫೋನ್ ಐಡಿಯಾ

  ಹೌದು, ವೊಡಾಫೋನ್ ಐಡಿಯಾ ಲಿಮಿಟೆಡ್ ಮತ್ತು ಭಾರ್ತಿ ಏರ್‌ಟೆಲ್ ಪರವಾಗಿ ಕಂಪನಿಗಳು ತಮ್ಮ ಸೇವಾ ಸುಂಕ ಯೋಜನೆಗಳನ್ನು ಡಿಸೆಂಬರ್ 1 ರಿಂದ ಹೆಚ್ಚಿಸಲಿರುವುದು ಖಚಿತವಾಗಿದೆ. ಆದರೆ, ಜಿಯೋ ಮಾತ್ರ ಈ ವರೆಗೂ ಸರ್ಕಾರ ಒಪ್ಪಿದರೆ ಮಾತ್ರ ದರ ಹೆಚ್ಚಿಸುವುದಾಗಿ ತಿಳಿಸಿದೆ. ಜಿಯೋವಿನ ನಡೆ ಏನೇ ಆದರೂ ಅದು ಟೆಲಿಕಾಂ ಬೆಲೆಗಳನ್ನು ಹೆಚ್ಚಿಸುವುದನ್ನು ತಡೆಯಲು ಸಾಧ್ಯವಿಲ್ಲ. ಡಿಸೆಂಬರ್ 1 ರಿಂದ ದೇಶದ ಟೆಲಿಕಾಂನಲ್ಲಿ ಶೇ.30-40 ರಷ್ಟು ದರ ಏರಿಕೆಯಾಗುವ ಸಾಧ್ಯತೆ ನಿಶ್ಚಿತವಾಗಿದೆ ಎಂದು ಟೆಲಿಕಾಂ ಕ್ಷೇತ್ರದ ತಜ್ಞರು ಅಂದಾಜಿಸಿದ್ದಾರೆ.


 • ತಜ್ಞರ ಪ್ರಕಾರ

  ಟೆಲಿಕಾಂ ಕ್ಷೇತ್ರದ ತಜ್ಞರ ಪ್ರಕಾರ, ಟೆಲಿಕಾಂನಲ್ಲಿನ ಬೆಲೆಗಳು ಶೇ.30-40 ರಷ್ಟು ದರ ಏರಿಕೆಯಾಗುವ ಸಾಧ್ಯತೆಯಿದೆ. ಟೆಲಿಕಾಂ ಕ್ಷೇತ್ರದಲ್ಲಿ ತಂತ್ರಜ್ಞಾನ ಬದಲಾವಣೆ ಆಗುತ್ತಲೇ ಇರುತ್ತದೆ. ಹೀಗಾಗಿ ಹೊಸತನಕ್ಕೆ ತೆರೆಯಬೇಕಾದರೆ ಕೋಟ್ಯಂತರ ರೂ. ಹಣ ಹೂಡಬೇಕಾಗುತ್ತದೆ. ನಷ್ಟದಲ್ಲಿದ್ದುಕೊಂಡು ಹೂಡಿಕೆ ಮಾಡಲು ಸಾಧ್ಯವಿಲ್ಲ. ಹೀಗಾಗಿ ದರ ಏರಿಕೆ ಅನಿವಾರ್ಯ ಎಂದು ಬಹುತೇಕ ಕಂಪನಿಗಳು ತಮ್ಮ ನಿರ್ಧಾರವನ್ನು ಸ್ಪಷ್ಟಪಡಿಸಿದೆ. ಇದಕ್ಕೆ ಸರ್ಕಾರ ಕೂಡ ಸಹಮತ ವ್ಯಕ್ತಪಡಿಸಿರುವುದರಿಂದ ಟೆಲಿಕಾಂ ಬೆಲೆಗಳು ಹೆಚ್ಚಳವಾಗುತ್ತವೆ ಎಂದು ತಿಳಿಸಿದ್ದಾರೆ.


 • ಜಿಯೋಗೆ ಸ್ಪರ್ಧೆ

  ದೇಶದ ಮಾರುಕಟ್ಟೆಯಲ್ಲಿ ಜಿಯೋಗೆ ಸ್ಪರ್ಧೆ ನೀಡಲು ಮೂರು ವರ್ಷಗಳಿಂದ ದರವನ್ನು ಇಳಿಸಿದ್ದ ಟೆಲಿಕಾಂ ಕಂಪನಿಗಳು ಭಾರೀ ನಷ್ಟವನ್ನು ಅನುಭವಿಸಿವೆ. ವೊಡಾಫೋನ್ ಐಡಿಯಾ ಸೆಪ್ಟೆಂಬರಿಗೆ ಅಂತ್ಯಗೊಂಡ ದ್ವಿತೀಯ ತ್ರೈಮಾಸಿಕದಲ್ಲಿ 50,921 ರೂ. ಕೋಟಿಗಳ ದಾಖಲೆಯಷ್ಟು ನಷ್ಟವನ್ನು ಅನುಭವಿಸಿದ್ದರೆ, ಭಾರ್ತಿ ಏರ್ಟೆಲ್ ಕೂಡ 23,045 ಕೋಟಿ ರೂ. ನಷ್ಟ ಅನುಭವಿಸಿದೆ. ಇವೆಲ್ಲದರ ಪರಿಣಾಮದಿಂದಾಗಿ ಈ ಟೆಲಿಕಾಂ ಕಂಪೆನಿಗಳು ಬೆಲೆಗಳನ್ನು ಹೆಚ್ಚಿಸುತ್ತಿವೆ. ಇದಕ್ಕೆ ಸರ್ಕಾರ ಕೂಡ ಸಹಮತ ವ್ಯಕ್ತಪಡಿಸಿ ಸಹಾಯಮಾಡಲು ಮುಂದಾಗಿದೆ.


 • ಏರ್‌ಟೆಲ್

  ವೊಡಾಫೋನ್ ಐಡಿಯಾ ಮತ್ತು ಏರ್‌ಟೆಲ್ ಕಂಪೆನಿಗಳು ನಷ್ಟದಿಂದ ಹೊರಬರಲು ಹೆಚ್ಚು ಆದಾಯ ಬೇಕಿದೆ. ಆದರೆ, ಜಿಯೋ ನೀಡುತ್ತಿರುವ ಕಡಿಮೆ ಬೆಲೆಯ ಯೋಜನೆಗಳಿಂದಾಗಿ ಆ ಕಂಪೆನಿಗಳು ಹೆಚ್ಚು ಆದಾಯ ಗಳಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ, ಜಿಯೋ ಕೂಡ ದರಗಳನ್ನು ಹೆಚ್ಚಿಸುವಂತೆ ಮಾಡಲು ಸರ್ಕಾರ ಮುಂದಾಗಿದೆ ಎಂದು ಹೇಳಲಾಗುತ್ತಿವೆ. ಹೀಗೆ ಮಾಡಿದರೆ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಕಂಪೆನಿಗಳು ನಷ್ಟದಿಂದ ಮೇಲೆದ್ದು ದೇಶದ ಟೆಲಿಕಾಂ ಸ್ಥಿರವಾಗಬಹುದು ಎಂದು ಸರ್ಕಾರ ಯೋಜಿಸಿದೆ ಎಮದು ಹೇಳಲಾಗುತ್ತಿದೆ.


 • ಟ್ಯಾರಿಫ್ ಪ್ಲ್ಯಾನ್

  ಡಿಸೆಂಬರ್ 1 ರಿಂದ ಟ್ಯಾರಿಫ್ ಪ್ಲ್ಯಾನ್​ ಹೆಚ್ಚಿಸುವುದಾಗಿ ತಿಳಿಸಿರುವ ಟೆಲಿಕಾಂ ಕಂಪೆನಿಗಳು, ದರಗಳಲ್ಲಿ ಯಾವ ರೀತಿಯ ಬದಲಾವಣೆಗಳನ್ನು ತರುತ್ತಿರುವುದಾಗಿ ತಿಳಿಸಿಲ್ಲ. ಆದರೆ, ಟೆಲಿಕಾಂನಲ್ಲಿನ ಬೆಲೆಗಳು ಶೇ.30-40 ರಷ್ಟು ದರ ಏರಿಕೆಯಾಗುವ ಸಾಧ್ಯತೆಯಿದೆ ಎಂದು ತಜ್ಞರು ಅಂದಾಜಿಸಿದ್ದಾರೆ. ಅಂದರೆ, ಇದೀಗ 300 ರೂ.ಗೆ ಸಿಗುತ್ತಿರುವ ಯೋಜನೆಗಳ ಬೆಲೆ 50೦ ರೂ. ವರೆಗೆಗೆ ಏರಿಕೆಯಾಗಬಹುದು ಅಥವಾ ಇದೀಗ ಮೂರು ತಿಂಗಳು ಲಭ್ಯವಿರುವ ಯೋಜನೆಗಳ ವ್ಯಾಲಿಡಿಟಿ ಪ್ಲ್ಯಾನ್‌ಗಳು ಎರಡು ತಿಂಗಳಿಗೆ ಇಳಿಯಬಹುದು ಎಂದು ಹೇಳಲಾಗುತ್ತಿದೆ.
ಕಳೆದ ಮೂರು ವರ್ಷಗಳಿಂದ ಇಲ್ಲಿಯವರೆಗೂ ಅಗ್ಗವಾಗಿ ಡೇಟಾ ಮತ್ತು ಉಚಿತ ಕರೆಗಳನ್ನು ಬಳಸುತ್ತಿದ್ದವರಿಗೆ ಶಾಕಿಂಗ್ ನ್ಯೂಸ್ ಇದಾಗಿದ್ದು, ಡಿಸೆಂಬರ್ ಆರಂಭದಿಂದ ಟೆಲಿಕಾಂ ಕಂಪನಿಗಳು ಡೇಟಾ ಮತ್ತು ಕರೆ ದರಗಳನ್ನು ಶೇ.30 ರಿಂದ 40 ರಷ್ಟು ಏರಿಸಲಿವೆ ಎನ್ನಲಾಗಿದೆ. ಟೆಲಿಕಾಂ ಕಂಪನಿಗಳಾದ ಏರ್‌ಟೆಲ್, ಐಡಿಯಾ ವೊಡಾಫೋನ್ ನಂತರ ಇದೀಗ ರಿಲಯನ್ಸ್ ಜಿಯೋ ಕೂಡ ತನ್ನ ಟ್ಯಾರಿಫ್ ಬೆಲೆಗಳನ್ನು ಏರಿಸುವುದು ಬಹುತೇಕ ಖಚಿತವಾಗಿದ್ದು, ಡಿಸೆಂಬರ್ 1 ರಿಂದ ದೇಶದ ಟೆಲಿಕಾಂನಲ್ಲಿ ಮಹತ್ತರ ಬದಲಾವಣೆಯೇ ಆಗಲಿದೆ ಎಂದು ಹೇಳಲಾಗುತ್ತಿದೆ.

 
ಹೆಲ್ತ್