Back
Home » ಆರೋಗ್ಯ
ದಿನನಿತ್ಯ ನಾವು ಮಾಡುವ ಈ ಸಣ್ಣಪುಟ್ಟ ತಪ್ಪುಗಳೇ ಶೀತಕ್ಕೆ ಕಾರಣ
Boldsky | 26th Nov, 2019 07:00 PM
 • 1. ನಿದ್ದೆ ಇಲ್ಲದಿರುವಿಕೆ

  ಹೆಚ್ಚು ಸಿನೆಮಾ, ಟಿವಿ, ಮೊಬೈಲ್ ವೀಕ್ಷಣೆ ನಿಮಲ್ಲಿ ಹೆಚ್ಚು ಒತ್ತಡವನ್ನು ಉಂಟುಮಾಡುತ್ತದೆ. ಈ ಮೂಲಕ ನಿಮ್ಮ ನಿದ್ದೆಯ ಸಮಯವನ್ನು ಇವುಗಳು ಕಸಿಯುವುದರಿಂದ ವಿಶ್ರಾಂತಿ ಇಲ್ಲವಾಗುತ್ತದೆ. ಹೀಗೆ ಹೆಚ್ಚಿನ ಒತ್ತಡ ಹಾಗೂ ವಿಶ್ರಾಂತಿ ಇಲ್ಲದೆ ಇರುವುದರಿಂದ ನಿಮ್ಮಲ್ಲಿ ರೋಗ ನಿರೋಧಕ ಶಖಕ್ತಿ ಕುಗ್ಗತ್ತದೆ. ಅದರಲ್ಲಿ ದೇಹಕ್ಕೆ ಅಗತ್ಯ ನಿದ್ದೆ ಇಲ್ಲದೆ ಇದ್ದರೆ ನಿಮ್ಮಲ್ಲಿ ರೋಗನಿರೋಧಕ ಶಕ್ತಿ ಕುಗ್ಗಿ ದೇಹದ ಬಿಳಿ ರಕ್ತಕಣಗಳು, ಟಿ ಸೆಲ್ಸ್ ಹಾಗೂ ಸೋಂಕುಗಳ ವಿರುದ್ಧ ಹೋರಾಡುವ ಆ್ಯಂಟಿಬಾಡೀಸ್ ಕ್ಷಮತೆ ಕಡಿಮೆಯಾಗುತ್ತದೆ ಎನ್ನುತ್ತಾರೆ ತಜ್ಞ ವೈದ್ಯರು.


 • 2. ಕೈತೊಳೆಯುವ ವಿಧಾನ

  ಕೈತೊಳೆಯುವುದು ಕೀಟನಾಶಕಗಳನ್ನು ನಿವಾರಿಸಲೆಂದು. ಆದರೆ, ಕೈತೊಳೆಯುವ ವಿಧಾನವೂ ಇಲ್ಲಿ ಮುಖ್ಯವಾಗುತ್ತದೆ. ತಜ್ಞ ವೈದ್ಯರ ಪ್ರಕಾರ ಕಡಿಮೆ ಗಾಢತೆ ಇರುವ ಸೌಮ್ಯವಾದ ಸೋಪಿನ್ನು ಬಳಸಿ, ಬೆಚ್ಚಗಿನ ನೀರಿನಲ್ಲಿ ಕನಿಷ್ಠ 20 ಸೆಕೆಂಡ್ ಹಾಗೂ ಅದಕ್ಕೂ ಹೆಚ್ಚು ಸಮಯ ತೊಳೆಯುವುದು ಸೂಕ್ತ. ಗೆಚ್ಚು ಗಾಢತೆ ಇರುವ ಸೋಪು ಕೈಗಳಿಗೆ ಅಗತ್ಯವಿಲ್ಲ ಹಾಗೂ ಒಳ್ಳೆಯದಲ್ಲ, ಅಲ್ಲದೇ ಇಂತಹ ಸೋಪುಗಳ ಬಳಕೆಯಿಂದ ಸಹ ಶೀತ ಹರಡುವ ಸಾಧ್ಯತೆ ಇದೆ.


 • 3. ದೇಹಕ್ಕೆ ಅಗತ್ಯ ವ್ಯಾಯಾಮ ಇಲ್ಲದಿರುವುದು

  ದೇಹಕ್ಕೆ ನಿತ್ಯ ಅಗತ್ಯ ವ್ಯಾಯಾಮ ಬೇಕೇಬೇಕು. ನೀವು ಕಚೇರಿಯಲ್ಲಿ ಮೆಟ್ಟಿಲುಗಳನ್ನು ಬಳಸದೇ ಎಲಿವೇಟರ್ ಅಥವಾ ಲಿಫ್ಟ್‌ ನಲ್ಲಿ ಹೋಗುವ ಅಭ್ಯಾಸ ಇದ್ದರೆ, ನಿತ್ಯ ಬೆಳಿಗ್ಗೆ ದೇಹ ದಂಡನೆಗೆ ಸ್ವಲ್ಪವೂ ಸಮಯ ಕೊಡದೇ ಇದ್ದರೆ ನಿಮಗೆ ಶೀತದ ಸಮಸ್ಯೆ ಖಂಡಿತವಾಗಿಯೂ ಇದೆ ಎಂದೇ ಹೇಳಬಹುದು. ಅಗತ್ಯ ವ್ಯಾಯಾಮದಿಂದ ರಕ್ತಪರಿಚಲನೆ, ಶಕ್ತಿ ಹೆಚ್ಚುತ್ತದೆ ಮತ್ತು ಇತರೆ ಅನಾರೋಗ್ಯ ಸಮಸ್ಯೆಗಳಿಂದ ನಮ್ಮನ್ನು ದೂರವಾಗಿಸುತ್ತದೆ. ಅಲ್ಲದೇ ದೈಹಿಕ ವ್ಯಾಯಾಮದಿಂದ ಸೋಂಕಿನ ವಿರುದ್ಧ ಹೋರಾಡಬಲ್ಲ ಬಿಳಿ ರಕ್ತಕಣಗಳ ಪರಿಚಲನೆಗೆ ಹಾಗೂ ದೇಹದ ಬ್ಯಾಕ್ಟೀರಿಯಾಗಳು ಶ್ವಾಸಕೋಶಗಳು ಹಗೂ ವಾಯುಮಾರ್ಗಗಳ ಮೂಲಕ ಹೊರಹೋಗಲು ಕಾರಣವಾಗುತ್ತದೆ, ಇದರಿಂದ ಶೀತದ ಅಪಾಯ ತಪ್ಪಿದಂತಾಗುತ್ತದೆ.


 • 4. ಜನಜಂಗುಳಿ ಇರುವ ಸ್ಥಳಗಳಿಗೆ ಹೆಚ್ಚು ಹೆಚ್ಚು ಹೋಗುವುದು

  ವಾರಾಂತ್ಯ ಎಂದರೆ ಸಾಕು ಹೊರಗಡೆ ಹೋಗುವುದು ಸಾಮಾನ್ಯ ಅಭ್ಯಾಸವಾಗಿದೆ. ಅದರಲ್ಲೂ ಮಾಲ್ ಗಳು, ಮಾರುಕಟ್ಟೆ, ಜನ ಹೆಚ್ಚಿರುವ ಸ್ಥಳಗಳಿಗೆ ಭೇಟಿ ಕೊಡುವುದು ನೆಚ್ಚಿನ ಸಂಗತಿಯಾಗಿದೆ. ಆದರೆ ಇಂತಹ ಸ್ಥಳಗಳಲ್ಲಿ ಹೆಚ್ಚು ಹೆಚ್ಚು ಜೆಮ್ಸ್ ಹಾಗೂ ಶೀತಕ್ಕೆ ಕಾರಣವಾಗುವಂಥ ಕೀಟಾಣುಗಳು ಹರಡುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ಆದಷ್ಟು ಹೆಚ್ಚು ಜನ ಇರುವ ಪ್ರದೇಶಗಳಿಗೆ ಹೋಗದಿರಲು ಅಥವಾ ಹೋದರೂ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲು ಸೂಚಿಸಲಾಗಿದೆ.


 • 5. ಸಮೀಪದಿಂದ ಮಾತನಾಡುವುದು

  ಶೀತ ಅಥವಾ ಜ್ವರದಿಂದ ದೂರ ಇರಬೇಕೆಂದರೆ ಸಾಧ್ಯವಾದಷ್ಟು ಎಲ್ಲರ ಬಳಿ ದೂರದಿಂದಲೇ ಮಾತನಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ. ಅದರಲ್ಲೂ ಜ್ವರ ಹಾಗೂ ಶೀತದಿಂದ ಬಳಲುತ್ತಿರುವವರ ಬಳಿ ಸಾಧ್ಯವಾದಷ್ಟು ಅಂತರವನ್ನೆ ಕಾಯ್ದುಕೊಳ್ಳಿ.


 • 6. ಉಗುರು ಕಚ್ಚುವ ಕೆಟ್ಟ ಚಾಳಿ

  ಉಗುರು ಕಚ್ಚುವುದು ಹಾಗೂ ಕೈಯಿಂದ ಮುಖವನ್ನು ಸ್ಪರ್ಶಿಸುವುದರಿಂದ ಮೂಗು, ಬಾಯಿ ಮತ್ತು ಕಣ್ಣುಗಳ ಮೂಲಕ ಸಣ್ಣ ಸಣ್ಣ ಬ್ಯಾಕ್ಟೀರಿಯಾಗಳು ದೇಹಕ್ಕೆ ಸೇರುವ ಸಾಧ್ಯತೆ ಇದೆ. ಅಲ್ಲದೇ ಉಗುರುಗಳ ಒಳಗೆ ಜೆಮ್ಸ್ ಗಳು ಹೆಚ್ಚು ಆಶ್ರಯ ಪಡೆಯುತ್ತದೆ, ಉಗುರು ಕಚ್ಚುವ ಅಭ್ಯಾಸವಿದ್ದವರಿಗೆ ಸೋಂಕುಗಳ ಶೀಘ್ರ ದೇಹದೊಳಗೆ ಪ್ರವೇಶಿಸಿ ಶೀತದ ಜತೆಗೆ ಸಾಕಷ್ಟು ಅನಾರೋಗ್ಯಗಳನ್ನು ತಂದೊಡ್ಡುತ್ತದೆ.


 • 7. ಜಿಮ್ ನಲ್ಲಿ ಸ್ವಚ್ಛತೆ

  ಹೋದಕಡೆ ಎಲ್ಲಾ ಸ್ವಚ್ಚತೆ ಬಯಸುವುದು ತಪ್ಪೇ, ಆದರೆ ಕೆಲವೆಡೆ ಶುದ್ಧತೆ ತುಂಬಾ ಪ್ರಾಮುಖ್ಯತೆ ವಹಿಸುತ್ತದೆ ಅದರಲ್ಲೂ ಜಿಮ್‌. ಜಿಮ್‌ ನಲ್ಲಿ ಬಳಸುವ ಥ್ರೆಡ್‌ಮಿಲ್ ಹಾಗೂ ಇತರ ಉಪಕರಣಗಳನ್ನು ಹಿಂದೆ ಯಾರೂ ಬಳಸಿದ್ದಾರೆ, ಅವರು ಎಷ್ಟು ಶುದ್ಧರು ಅವರಿಗೆ ಸೋಂಕು ಇತ್ತೇ ಇವುಗಳನ್ನು ಪತ್ತೆ ಮಾಡಲು ಆಗುವುದಿಲ್ಲ. ಆದರೆ ನಮ್ಮ ಕಾಳಜಿಯನ್ನು ನಾವೇ ಮಾಡಿಕೊಂಡು, ನಾವುಬಸುವ ಜಿಮ್‌ ಸಲಕರಣೆಗಳನ್ನು ಆಲ್ಕೋಹಾಲ್ ಅಂಶವಿರುವ ವೈಪ್ ನಿಂದ ಸ್ವಚ್ಚಗೊಳಿಸಿ ಬಳಸುವುದು ಉತ್ತಮ. ಪ್ರತಿ ಬಾರಿ ತಿನ್ನುವಾಗಲೂ ಕೈಗಳನ್ನು ಶುದ್ಧವಾಗಿ ತೊಳೆಯಿರಿ, ಜಿಮ್‌ಗೆ ಹೋಗುವಾಗ ನಿಮ್ಮದೇ ಪ್ರತ್ಯೇಕ ವಾಟರ್ ಬಾಟಲ್ ಕೊಂಡೊಯ್ಯಿರಿ.


 • 8. ವೈನ್ ಸೇವನೆ

  ಒಂದು ಗ್ಲಾಸ್ ಗಿಂತ ಹೆಚ್ಚು ವೈನ್‌ ಸೇವಿಸಿದರೆ ಶೀಘ್ರ ನಿದ್ರೆಗೆ ಜಾರಬಹುದು. ಆದರೆ ಈ ನಿದ್ರೆ ಗಾಢ ನಿದ್ದೆಯಾಗದೆ ಮಧ್ಯೆ ಮತ್ತೆ ಎಚ್ಚರಗೊಳಿಸುತ್ತದೆ. ಕಾರಣ ವೈನ್ ಗಾಢ ನಿದ್ರೆಗೆ ಅನುಕೂಲವಾಗುವ ಆರ್‌ಇಎಂ ಭಾಗವನ್ನು ತಡೆಯುತ್ತದೆ. ಇದರಿಂದ ಆಗಾಗ್ಗೆ ಎಚ್ಚರಗೊಳಿಸುತ್ತದೆ, ಈ ವೇಳೆ ನಿಮ್ಮ ಹೃದಯ ಬಡಿತವೂ ಹೆಚ್ಚಿರುತ್ತದೆ, ಇದರಿಂದ ನಂತರ ಮತ್ತೆ ನಿದ್ರೆ ಮಾಡುವುದು ಸಹ ಕಷ್ಟವಾಗುತ್ತದೆ. ಈ ಕಾರಣ ಸಹ ನಿಮ್ಮ ಶೀತಕ್ಕೆ ಕಾರಣವಾಗುತ್ತೆ ಎನ್ನುತ್ತಾರೆ ತಜ್ಞ ವೈದ್ಯರು.


 • 9. ನೀರಿನ ಕೊರತೆ

  ನೀವು ದೇಹಕ್ಕೆ ಅಗತ್ಯವಾದಷ್ಟು ಅಂದರೆ ದಿನಕ್ಕೆ ಕನಿಷ್ಠ ಐದು ಲೀಟರ್ನೀರು ಸೇವಿಸುತ್ತೀದ್ದೀರಾ? ಹಾಗಿದ್ದರೆ ನಿಮ್ಮಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿರುತ್ತದೆ. ಆದರೆ ನೀವು ಕಡಿಮೆ ಸೇವಿಸುವವರಾದರೆ ಮಾತ್ರ ಸಮಸ್ಯೆಗಳು ಕಟ್ಟಿಟ್ಟಬುತ್ತಿ. ಇದು ನಿಮ್ಮ ದೈಹಿಕ ಶಕ್ತಿ, ನಿದ್ರೆ, ದೇಹದ ಸಾಮರ್ಥ್ಯ, ದೇಹದಲ್ಲಿ ನೀರಿನ ಕೊರತೆ ಸೇರಿದಂತೆ ಸಾಕಷ್ಟು ಸಮಸ್ಯೆಗಳು ಎದುರಾಗುತ್ತದೆ. ಈ ಎಲ್ಲಾ ಸಮಸ್ಯೆಗಳು ರೋಗನಿರೋಧಕ ಶಕ್ತಿಯನ್ನು ಕುಗ್ಗಿಸುತ್ತದೆ. ಇದು ಸರ್ವೇಸಾಮಾನ್ಯವಾಗಿ ಶೀತ, ಜ್ವರಕ್ಕೆ ಕಾರಣವಾಗುತ್ತದೆ.


 • 10. ಕಚೇರಿಯಲ್ಲಿ ಡೆಸ್ಕ್‌ನಲ್ಲೇ ಕುಳಿತು ತಿನ್ನುವುದು

  ಕಚೇರಿಯಲ್ಲಿ ಡೆಸ್ಕ್‌ನಲ್ಲಿ ಕುಳಿತು ತಿನ್ನುವುದು ಕೆಟ್ಟ ಅಭ್ಯಾಸ. ಇದು ದೇಹದ ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ ಅಲ್ಲದೆ, ಸ್ವಚ್ಛತೆಯನ್ನು ಹಾಳುಮಾಡುತ್ತದೆ. ನಿತ್ಯ ಡೆಸ್ಕ್ ನಲ್ಲೇ ಕುಳಿತು ಆಹಾರ ಸೇವಿಸುವುದರಿಂದ ನಾವೇ ನಿತ್ಯ ಬಳಸುವ ಕಂಪ್ಯೂಟರ್, ಕೀಬೋರ್ಡ್ ಗಳ ಮೇಲೆ, ಸುತ್ತಮುತ್ತಲೂ ಬ್ಯಾಕ್ಟಿರಿಯಾ ಹುಟ್ಟಕೊಳ್ಳಲು ನಾವೇ ಅನುವುಮಾಡಿಕೊಟ್ಟಂತಾಗುತ್ತದೆ. ಇಂತಹ ಸಣ್ಣಪುಟ್ಟ ನಿರ್ಲಕ್ಷ್ಯ ಶೀತ ಸೇರಿದಂತೆ ದೊಡ್ಡ-ದೊಡ್ಡ ಕಾಯಿಲೆಗಳಿಗೆ ಕಾರಣವಾಗುತ್ತದೆ.


 • 11. ಕಚೇರಿಯಿಂದ ಬಂದಾಕ್ಷಣ ಬಟ್ಟೆ ಬದಲಾಯಿಸದೇ ಇರುವುದು

  ನಿಮಗೆ ಅಚ್ಚರಿಯಾಗಬಹುದು, ಬೆಳಿಗ್ಗೆಯಿಂದ ಸಂಜೆವರೆಗೂ ಕಚೇರಿ ಯಲ್ಲಿ ಕಳೆಯುವ ಸಮಯದಲ್ಲಿ ಹಾಗೂ ಕಚೇರಿಯಿಂದ ಮನೆಗೆ ಹೋಗುವ ವೇಳೆಗಾಗಲೇ ನಿಮ್ಮ ಬಟ್ಟೆಗಳ ಮೇಲೆ ಸಾಕಷ್ಟು ಅಪಾಯಕಾರಿ ಜೆರ್ಮ್ಸಗಳು ಸೇರಿರುತ್ತವೆ. ಇವು ನಿಮ್ಮ ದೇಹ ಸೇರುವ ತವಕದಲ್ಲಿರುತ್ತದೆ, ಆದ್ದರಿಂದ ನೀವು ಮನೆ ಸೇರುತ್ತಿದ್ದಂತೆ ಬಟ್ಟೆಗಳನ್ನು ಬದಲಿಸಿ. ಅಲ್ಲದೇ, ಮನೆಯಲ್ಲಿ ಶೀತ ಹಾಗೂ ಜ್ವರದಿಂದ ಬಳಲುತ್ತಿರುವವರು ಬಳಸುತ್ತಿರುವ ಬೆಡ್‌ಶೀಟ್‌ಗಳನ್ನು ಆಗಾಗ್ಗೆ ಬದಲಾಯಿಸಿ ಹಾಗೂ ಅವರು ಬಳಸಿದ ಬಟ್ಟೆಗಳನ್ನು ಆದಷ್ಟು ಮುಟ್ಟದಿರುವುದೇ ಉತ್ತಮ.
ಆಗಿಂದಾಗೆ ಜ್ವರ ಬರುವುದು ಅಥವಾ ಸದಾ ಶೀತದ ಕಿರಿಕಿರಿ ಉಂಟಾಗುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ನಮಗೇ ಗೊತ್ತಿಲ್ಲದಂತೆ ನಮ್ಮ ಜೀವನಶೈಲಿಯ ಕಾರಣದಿಂದಾಗಿ ಶೀತ ಬೆಂಬಿಡದ ಭೂತದಂತೆ ನಮ್ಮ ಹೆಗಲೇರಿರುತ್ತದೆ. ಇದಕ್ಕಾಗೇ ಆಹಾರದಲ್ಲಿ ಪಥ್ಯ ಅನುಸರಿಸಿ ಸಾಕಷ್ಟು ಕಾಳಜಿ ವಹಿಸಿದ್ದರೂ ಶೀತ ಮಾತ್ರ ನಾ ನಿನ್ನ ಬಿಟ್ಟಿರಲಾರೆ ಎಂದು ಹಿಂಸಿಸುತ್ತದೆ.

ಆದರೆ ಹೀಗೆ ಕಾಡುವ ಶೀತಕ್ಕೆ ನಾವು ನಿತ್ಯ ಮಾಡುವ ಸಣ್ಣಪುಟ್ಟ ತಪ್ಪುಗಳೇ ಕಾರಣ ಎಂದರೆ ತಪ್ಪಾಗಲಾರದು. ನಮ್ಮ ಎಂಥ ಕ್ಷುಲ್ಲಕ ತಪ್ಪುಗಳು ಶೀತಕ್ಕೆ ಕಾರಣವಾಗುತ್ತದೆ, ನಮ್ಮ ಜೀವನಶೈಲಿಗೆ ಯಾವೆಲ್ಲಾ ವಿಷಯಗಳಲ್ಲಿ ಬದಲಾಯಿಸಿಕೊಳ್ಳಬೇಕು ಮುಂದೆ ಲೇಖನದಲ್ಲಿ ತಿಳಿಯೋಣ.

 
ಹೆಲ್ತ್