Back
Home » ಇತ್ತೀಚಿನ
GOQii ನಿಂದ ಬರಲಿವೆ ಸ್ಮಾರ್ಟ್‌ವಾಚ್‌, ಸ್ಮಾರ್ಟ್‌ಸ್ಕೇಲ್‌!
Gizbot | 6th Dec, 2019 05:01 PM
 • ಪಿಟ್ನೆಸ್‌

  ಹೌದು ಬಾಡಿ ಪಿಟ್ನೆಸ್‌ ಆಧಾರಿತ ಸ್ಮಾರ್ಟ್‌ವಾಚ್‌ಗಳ ತಯಾರಕ ಕಂಪೆನಿ ಆಗಿರೋ GOQii 2020ರಲ್ಲಿ ಪಿಟ್ನೆಸ್‌ ಟ್ರ್ಯಾಕರ್‌, ಜೊತೆಗೆ ಗೂಗಲ್‌ ಮ್ಯಾಪಿಂಗ್‌ ಅವಕಾಶವನ್ನು ಉನ್ನತೀಕರಿಸೋದಾಗಿ ಹೇಳಿಕೊಂಡಿದೆ. ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕಂಪನಿಯು GOQii ಸ್ಮಾರ್ಟ್ ಸ್ಟ್ರೈಡ್, GOQii ಸ್ಮಾರ್ಟ್ ವಾಚ್ ಮತ್ತು GOQii ಸ್ಮಾರ್ಟ್ ತೂಕದ ಸ್ಕೇಲ್ ಅನ್ನು ಘೋಷಣೆ ಮಾಡಿಕೊಂಡಿದೆ. ಇದರ ಮೊದಲ ಹಂತವಾಗಿ GOQii ಸ್ಮಾರ್ಟ್ ಸ್ಟ್ರೈಡ್, ಇದನ್ನು ಸಂಪರ್ಕಿತ ಟ್ರೆಡ್‌ಮಿಲ್ ಆಗಿ ಪರಿಚಯಿಸುವ ಮಾತನ್ನ ಹೇಳಿದೆ.


 • ಟ್ರೆಡ್‌ಮಿಲ್

  ಈ ಟ್ರೆಡ್‌ಮಿಲ್ GOQii Play ಲೈವ್ ಮತ್ತು ಬಾಡಿ ವರ್ಕೌಟ್‌ ಮಾಹಿತಿಯನ್ನ ನೀಡುತ್ತದೆ. ಅಲ್ಲದೆ ವಾಕಿಂಗ್, ಓಟ ಮತ್ತು ಕಾರ್ಡಿಯೋ ಬಗ್ಗೆ ಗಮನಹರಿಸಲು ಇದರಿಂದ ಸಾಧ್ಯವಾಗುತ್ತದೆ. ಇನ್ನು ಇದರಲ್ಲಿ ರಿಯಲ್ ಟೈಮ್ ಕ್ಲಾಸ್‌ಸಿಂಕ್ ಇದ್ದು, ಈ ಟ್ರೆಡ್‌ಮಿಲ್‌ಗಳ ವೇಗವನ್ನು ದೂರದಿಂದಲೇ ಕೋಚ್‌ಗಳು ನಿಯಂತ್ರಿಸಬಹುದಾಗಿದೆ. ಈ ಸಂಪರ್ಕಿತ ಟ್ರೆಡ್‌ಮಿಲ್‌ನ ಮೂಲ ಮಾದರಿಯ ಬೆಲೆ 25,000 ರೂ.ಆಗಿದ್ದು ಬಳಕೆದಾರರು 12 ತಿಂಗಳ GOQii ಕೋಚ್ ಮತ್ತು ಕೇರ್ ತಂಡದ ಚಂದಾದಾರಿಕೆಯನ್ನು ಪಡೆಯಬಹುದಾಗಿದೆ.


 • ಸ್ಮಾರ್ಟ್‌ವಾಚ್‌

  GOQii ತನ್ನ ಸ್ಮಾರ್ಟ್‌ವಾಚ್‌ಗಳಾದ GOQii VitalPro ಮತ್ತು GOQii RunGPS Pro ಎಂಬ ಎರಡು ಹೊಸ ಆವೃತ್ತಿಗಳನ್ನ ಬಿಡುಗಡೆ ಮಾಡಿದೆ. ಬಳಕೆದಾರರ ವೈಯಕ್ತಿಕ ಆದ್ಯತೆಗೆ ತಕ್ಕಂತೆ ವಿಶೇಷವಾಗಿ ಇವುಗಳನ್ನ ವಿನ್ಯಾಸ ಮಾಡಲಾಗಿದ್ದು ಫಿಟ್ನೆಸ್‌ ಆಧಾರಿತ ಸ್ಮಾರ್ಟ್‌ ವಾಚ್‌ಗಳಾಗಿವೆ. ಲಭ್ಯವಿರುತ್ತವೆ. ವೈಟಲ್‌ಪ್ರೊ ಸ್ಮಾರ್ಟ್‌ವಾಚ್‌ ಇಸಿಜಿ ಮಾನಿಟರಿಂಗ್ ನೀಡಿದರೆ ರನ್‌ಜಿಪಿಎಸ್ ಪ್ರೊ ಇಸಿಜಿ ಮಾನಿಟರಿಂಗ್ ಮತ್ತು ಜಿಪಿಎಸ್ ಕ್ರಿಯಾತ್ಮಕತೆಯನ್ನು ನೀಡುತ್ತದೆ. ಈ ಸ್ಮಾರ್ಟ್ ವಾಚ್‌ಗಳು 6,999 ರೂ.ಬೆಲೆ ಹೊಂದಿದ್ದು ಮಾರ್ಚ್ 2020 ರ ವೇಳೆಗೆ ಲಭ್ಯವಿರುತ್ತದೆ.


 • ಸ್ಮಾರ್ಟ್ ಸ್ಕೇಲ್

  ಇನ್ನು ಕಂಪನಿಯ ಮೂರನೇ ಉತ್ಪನ್ನವು ಸ್ಮಾರ್ಟ್ ಸ್ಕೇಲ್ ಆಗಿದ್ದು ಅದು ಬಿಎಂಐ, ಬಾಡಿ ಮಿನರಲ್ ಕಂಟೆಂಟ್, ಮಸಲ್ ಮಾಸ್, ಬಾಡಿ ಫ್ಯಾಟ್, ಬಾಡಿ ವಾಟರ್ ಪರ್ಸಂಟೇಜ್‌, ಬಿಎಂಆರ್, ಫ್ಯಾಟ್‌ ಲೆವೆಲ್‌ ಮತ್ತು ಮೂಳೆಗಳ ಸ್ನಾಯುಗಳನ್ನು ಅಳೆಯಬಲ್ಲದು. ಈ ಸ್ಮಾರ್ಟ್ ಸ್ಕೇಲ್ ಜನವರಿ 2020 ರಿಂದ ಲಭ್ಯವಿರುತ್ತವೆ. ಹಾಗೂ ಇದರ ಬೆಲೆ 3,999 ರೂ ಎನ್ನಲಾಗಿದೆ. ಜೊತೆಗೆ GOQii ಬಜಾಜ್ ಅಲಿಯಾನ್ಸ್ ಜನರಲ್ ಇನ್ಶುರೆನ್ಸ್ ಜೊತೆ ಸಹಭಾಗಿತ್ವವನ್ನು ಹೊಂದಿದ್ದು GOQii ಬಳಕೆದಾರರಿಗೆ ಮೂರು ತಿಂಗಳ ಪ್ರೀಮಿಯಂ ಅನ್ನು ಸಹ ಘೋಷಣೆ ಮಾಡಿದೆ.
ತಂತ್ರಜ್ಞಾನ ಮುಂದುವರೆದಂತೆ ಇಂದು ಮನುಷ್ಯ ಬಳಸುವ ಬಹುತೇಕ ವಸ್ತುಗಳು ಸ್ಮಾರ್ಟ್‌ಆಗುತ್ತಿವೆ. ಈ ಹಿಂದೆ ಸಮಯವನ್ನ ಮಾತ್ರ ಅರಿಯಲು ಉಪಯೋಗವಾಗ್ತಿದ್ದ ವಾಚ್‌ ಇಂದು ಮನುಷ್ಯನ ಆರೋಗ್ಯವನ್ನು ತಿಳಿಸುವಷ್ಟರ ಮಟ್ಟಿಗೆ ಸ್ಮಾರ್ಟ್‌ ಆಗಿದೆ. ಈಗಾಗ್ಲೆ ಬಾಡಿ ಫಿಟ್ನೆಸ್‌ ಆಧಾರಿತ ಸ್ಮಾರ್ಟ್‌ವಾಚ್‌ಗಳು ಮಾರುಕಟ್ಟೆಗೆ ಲಗ್ಗೆ ಹಾಕಿವೆ. ಇದೀಗ ಸ್ಮಾರ್ಟ್‌ವಾಚ್‌ರ ತಯಾರಕ ಕಂಪೆನಿಗಳಲ್ಲಿ ಒಂದಾದ GOQii ತನ್ನ ಹೊ ಆವೃತ್ತಿಯ ಸ್ಮಾಟ್‌ವಾಚ್‌ ಮಾದರಿಗಳ ಬಗ್ಗೆ ಘೊಷಣೆ ಮಾಡಿದೆ.

 
ಹೆಲ್ತ್