Back
Home » ಇತ್ತೀಚಿನ
ಗೂಗಲ್‌ ಮ್ಯಾಪ್ಸ್‌ನ ಹಿಸ್ಟರಿ ಸ್ವಯಂಚಾಲಿತ ಡಿಲೀಟ್‌ ಹೇಗೆ..?
Gizbot | 11th Dec, 2019 06:25 PM
 • ಸ್ವಯಂಚಾಲಿತ

  ಇದರಿಂದ ನೀವು ಯಾವ ಸಮಯದಲ್ಲಿ ಎಲ್ಲಿದ್ದೀರಿ ಎಂಬುದನ್ನು ಸುಲಭವಾಗಿ ತಿಳಿಯಬಹುದು. ಇದನ್ನು ಸ್ವಯಂಚಾಲಿತವಾಗಿ ಅಳಿಸುವುದು ಹೇಗೆ ಎಂಬುದನ್ನು ಮುಂದೆ ನೋಡಿ.


 • ಗೂಗಲ್‌

  ನಿಮ್ಮ ಇಡೀ ಪ್ರವಾಸದ ಅಥವಾ ಪ್ರಯಾಣದ ಡೇಟಾವನ್ನು ಗೂಗಲ್‌ ತನ್ನ ಸರ್ವರ್‌ಗಳಲ್ಲಿ ವರ್ಷಗಳಿಂದ ಸೇವ್‌ ಮಾಡುತ್ತಾ ಬರುತ್ತಿತ್ತು. ಇದರಿಂದ ಕೋಟ್ಯಾಂತರ ಬಳಕೆದಾರರ ವಿವರಣಾತ್ಮಕ ಪ್ರಯಾಣದ ಲಾಗ್‌ ಗೂಗಲ್‌ ಮನೆ ಸೇರುವುದರಿಂದ ಸರ್ವರ್‌ಗೂ ಹೊರೆಯಾಗುತ್ತಿತ್ತು. ಆದ್ದರಿಂದ, ಗೂಗಲ್‌ ಪ್ರತಿ 18 ತಿಂಗಳಿಗೊಮ್ಮೆ ಅಥವಾ ಪ್ರತಿ 3 ತಿಂಗಳಿಗೊಮ್ಮೆ ನಿಮ್ಮ ಉಳಿಸಿದ ಸ್ಥಳದ ದಿನಾಂಕವನ್ನು ಸ್ವಯಂಚಾಲಿತವಾಗಿ ಅಳಿಸುವ ವೈಶಿಷ್ಟ್ಯವನ್ನು ಹೊರತಂದಿದೆ. ಅದಕ್ಕಿಂತ ಹಳೆಯದನ್ನು ಸ್ವಯಂಚಾಲಿತವಾಗಿ ಅಳಿಸಲಾಗುತ್ತದೆ.


 • ಸ್ವಯಂಚಾಲಿತವಾಗಿ ಲಾಗ್‌ ಅಳಿಸಲು ಮುಂದಿನ ಪ್ರಕ್ರಿಯೆ ಅನುಸರಿಸಿ.

  - ಐಫೋನ್ ಅಥವಾ ಆಂಡ್ರಾಯ್ಡ್‌ನಲ್ಲಿ ಗೂಗಲ್ ಮ್ಯಾಪ್ಸ್‌ ಒಪನ್‌ ,ಆಡಿ.

  - ಅಪ್ಲಿಕೇಶನ್‌ನ ಮೇಲಿನ ಎಡಭಾಗದಲ್ಲಿರುವ ಮೆನು ಬಾರ್ ಟ್ಯಾಪ್ ಮಾಡಿ.

  - "ನಿಮ್ಮ ಟೈಮ್‌ಲೈನ್" ಆಯ್ಕೆಮಾಡಿ.

  - ಪರದೆಯ ಬಲಭಾಗದಲ್ಲಿರುವ ಮೂರು ಚುಕ್ಕೆಗಳನ್ನು ಟ್ಯಾಪ್ ಮಾಡಿ.

  - "ಸೆಟ್ಟಿಂಗ್ಸ್‌ ಮತ್ತು ಗೌಪ್ಯತೆ" ಆಯ್ಕೆಮಾಡಿ.

  - "ಸ್ಥಳ ಇತಿಹಾಸವನ್ನು ಸ್ವಯಂಚಾಲಿತವಾಗಿ ಅಳಿಸಿ" ಆಯ್ಕೆಮಾಡಿ.

  - "ಕೀಪ್‌ ಅನ್‌ಟಿಲ್‌ ಐ ಡಿಲೀಟ್‌ ಮ್ಯಾನುವಲಿ" ಆಯ್ಕೆಯಿಂದ "ಕೀಪ್‌ ಫಾರ್‌ 18 ಮೊಂಥ್ಸ್" ಅಥವಾ "ಕೀಪ್‌ ಫಾರ್‌ 3 ಮೊಂಥ್ಸ್" ಎಂಬುದಕ್ಕೆ ಬದಲಾಯಿಸಿ.


 • ಲಾಗ್‌ ಅಳಿಸುವುದು

  ಪ್ರತಿ 3 ತಿಂಗಳ ನಂತರ ಲಾಗ್‌ ಅಳಿಸುವುದು ಒಳ್ಳೆಯದು. ಅದಕ್ಕಿಂತಲೂ ಹೆಚ್ಚು ಕಾಲ ನಿಮ್ಮ ಹಿಸ್ಟರಿಯನ್ನು ಸೇವ್‌ ಮಾಡಲುಹೆಚ್ಚಿನ ಕಾರಣಗಳಿಲ್ಲ, ಆದರೂ, ನಿಮಗೆ ಸರಿ ಎನಿಸಿದರೆ 18 ತಿಂಗಳುಗಳನ್ನು ಆಯ್ಕೆ ಮಾಡಬಹುದು. ಈಗ, ನೀವು ಹೊಂದಿಸಿದ ಸಮಯಕ್ಕಿಂತ ಹಳೆಯ ಲಾಗ್‌ನ್ನು ಸ್ವಯಂಚಾಲಿತವಾಗಿ ಅಳಿಸಲಾಗುತ್ತದೆ.
ನೀವು ಗೂಗಲ್‌ ಮ್ಯಾಪ್ಸ್‌ನ್ನು ಸರಿಯಾಗಿ ಕನ್ಫಿಗರ್ ಮಾಡದಿದ್ದರೆ, ನೀವು ವಾಕಿಂಗ್‌, ಡ್ರೈವಿಂಗ್‌ ಅಥವಾ ಪ್ರಪಂಚದಲ್ಲಿ ಎಲ್ಲಿಯಾದರೂ ಹೋಗಿ, ನಿಮ್ಮ ಎಲ್ಲಾ ವಿವರಣಾತ್ಮಕ ಲಾಗ್‌ ಸ್ವಯಂಚಾಲಿತವಾಗಿ ಸೇವ್‌ ಆಗುತ್ತದೆ.

 
ಹೆಲ್ತ್