Back
Home » ಇತ್ತೀಚಿನ
ಭಾರತದಲ್ಲಿ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್ ಬಿಡುಗಡೆ!..ವಿಶೇಷತೆ ಏನು ಗೊತ್ತಾ?
Gizbot | 3rd Apr, 2020 02:00 PM
 • ಹೌದು

  ಹೌದು, ಇತ್ತೀಚಿನ ದಿನಗಳಲ್ಲಿ ವೀಡಿಯೋ ಸ್ಟ್ರೀಮಿಂಗ್‌ ಸೇವೆಗೆ ಭಾರಿ ಬೇಡಿಕೆ ಇದೆ. ಭಾರತದಲ್ಲಿಯೂ ಕೂಡ ಇದರ ಜನಪ್ರಿಯತೆ ಕಡಿಮೆ ಆಗಿಲ್ಲ. ಇದೇ ಕಾರಣಕ್ಕೆ ಡಿಸ್ನಿ ಪ್ಲಸ್‌ ತನ್ನ ಸೇವೆಯನ್ನ ಭಾರತದಲ್ಲಿ ಪ್ರಾರಂಭಿಸಲು ಕಾತರಿಸುತ್ತಿತ್ತು. ಆದರಂತೆ ಇದೀಗ ಭಾರತದಲ್ಲಿ ತನ್ನ ಸೇವೆಯನ್ನ ಶುರುಮಾಡಿದೆ. ಸದ್ಯ ಇದು ಎರಡು ವಿಡಿಯೋ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಿಂದ ಉತ್ತಮ ವಿಷಯವನ್ನು ಭಾರತೀಯ ಬಳಕೆದಾರರಿಗೆ ನೀಡುವ ಪ್ರಯತ್ನವನ್ನ ಮಾಡಲಿದೆ. ಹಾಟ್‌ಸ್ಟಾರ್‌ ಮೂಲ ವೇದಿಕೆಗೆ ದಕ್ಕೆ ತಾರದ ರೀತಿಯತಲ್ಲಿ ಡಿಸ್ನಿ ಪ್ಲಸ್‌ ತನ್ನ ಸೇವೆಯನ್ನ ನೀಡಲಿದೆ ಎಂದು ಹೇಳಲಾಗಿದೆ.


 • ಇದಲ್ಲದೆ

  ಸದ್ಯ ಭಾರತದಲ್ಲಿನ ಹಾಟ್‌ಸ್ಟಾರ್ ಬಳಕೆದಾರರು ಡಿಸ್ನಿಯ ಮೂಲ ವಿಷಯಕ್ಕೆ ಹೆಚ್ಚುವರಿಯಾಗಿ ವೇದಿಕೆಯಲ್ಲಿ ಈಗಾಗಲೇ ಲಭ್ಯವಿರುವ ಚಲನಚಿತ್ರಗಳು ಮತ್ತು ಟಿವಿಯನ್ನು ವೀಕ್ಷಿಸಲು ಸಾಧ್ಯವಾಗುತ್ತದೆ. ಇದಲ್ಲದೆ ಡಿಸ್ನಿ + ಹಾಟ್‌ಸ್ಟಾರ್ ಭಾರತಕ್ಕೆ ಉತ್ತಮ ಗುಣಮಟ್ಟದ ಪರಿಣಾಮಕಾರಿಯಾದ ಕಥೆಗಳನ್ನು ನಿಡಲಿದೆ ಎನ್ನುವ ಭರವಸೆಗೆ ನಾವು ಬದ್ಧರಾಗಿರುತ್ತೇವೆ ಎಂದು ಡಿಸ್ನಿ ಪ್ಲಸ್‌ ಹೇಳಿದೆ. ಜೊತೆಗೆ ಈ ವೀಡಿಯೋ ಸ್ಟ್ರೀಮಿಂಗ್‌ ಸೇವೆ ಕೇವಲ ಮನರಂಜನೆ ಮಾತ್ರವಲ್ಲದೆ ಜನರ ಜೀವನದಲ್ಲಿ ಒಂದು ಬದಲಾವಣೆಯನ್ನು ತರಲಿದೆ. ಸವಾಲಿನ ಸಮಯಗಳನ್ನ ಅರ್ಥಪೂರ್ಣವಾಗಿಸುವ ಪ್ರಯತ್ನಕ್ಕೆ ನಾವು ಮು0ದಾಗುತ್ತೇವೆ ಎಂದು ಹೇಳಿಕೊಂಡಿದೆ.


 • ಹಾಟ್‌ಸ್ಟಾರ್‌ನ

  ಇನ್ನು ಹಾಟ್‌ಸ್ಟಾರ್‌ನ ತಂತ್ರಜ್ಞಾನದ ಮೂಲಕ ವಿತರಿಸಲಾದ ಡಿಸ್ನಿಯ ವಿಡಿಯೋ ಸ್ಟ್ರೀಮಿಂಗ್‌ ಸೇವೆ ವೀಕ್ಷಕರಿಗೆ ಆರಾಮ, ಸಂತೋಷ ಮತ್ತು ಸ್ಫೂರ್ತಿಯ ಕ್ಷಣಗಳನ್ನು ಕಂಡುಹಿಡಿಯಲು ಸಹಾಯ ಮಾಡುತ್ತದೆ ಎಂದು ನಾವು ಭಾವಿಸುತ್ತೇವೆ "ಎಂದು ವಾಲ್ಟ್ ಡಿಸ್ನಿ ಕಂಪನಿ ಎಪಿಎಸಿ ಅಧ್ಯಕ್ಷ ಮತ್ತು ಸ್ಟಾರ್ ಮತ್ತು ಡಿಸ್ನಿ ಇಂಡಿಯಾದ ಅಧ್ಯಕ್ಷ ಉದಯ್ ಶಂಕರ್ ಹೇಳಿದ್ದಾರೆ. ಇನ್ನು ಇಂದಿನಿಂದ ಹಾಟ್‌ಸ್ಟಾರ್ ಮೂರು ಹಂತಗಳಲ್ಲಿ ಬಳಕೆದಾರರಿಗೆ ಲಬ್ಯವಾಗಲಿದೆ.


 • ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್ ವಿಐಪಿ

  ಈ ಹಿಂದೆ ಹಾಟ್‌ಸ್ಟಾರ್‌ನ ವಿಐಪಿ ಸೇವೆಗೆ ವರ್ಷಕ್ಕೆ 365 ರೂಗಳಿಗೆ ಲಭ್ಯವಿತ್ತು. ಆದರೆ ಇದೀಗ ಡಿಸ್ನಿ + ಹಾಟ್‌ಸ್ಟಾರ್ ವಿಐಪಿ ಚಂದಾದಾರರಿಗೆ ವರ್ಷಕ್ಕೆ 399 ರೂ. ಅನ್ನು ನಿಗದಿ ಪಡಿಸಲಾಗಿದೆ. ಈ ಶ್ರೇಣಿಯಲ್ಲಿ, ಚಂದಾದಾರರು ಮಾರ್ವೆಲ್ ಸಿನೆಮ್ಯಾಟಿಕ್ ಯೂನಿವರ್ಸ್, ಸೂಪರ್ ಹೀರೋಗಳ ಚಲನಚಿತ್ರಗಳು ಮತ್ತು ಹಾಟ್ಸ್ಟಾರ್ ವಿಐಪಿ ವಿಷಯದ ಜೊತೆಗೆ ಜನಪ್ರಿಯ ಡಿಸ್ನಿ ಚಲನಚಿತ್ರಗಳಾದ ದಿ ಲಯನ್ ಕಿಂಗ್ ಮತ್ತು ಫ್ರೋಜನ್ II ನಿಂದ ಚಲನಚಿತ್ರಗಳು ಮತ್ತು ಇತರೆ ಪ್ರದರ್ಶನಗಳನ್ನು ಪಡೆಯಲಿದ್ದಾರೆ.


 • ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್ ಪ್ರೀಮಿಯಂ

  ಈ ಹಿಂದೆ ವರ್ಷಕ್ಕೆ ಹಾಟ್‌ಸ್ಟಾರ್‌ ಪ್ರಿಮಿಯಂ ಸೇವೆಗೆ ವಾರ್ಷಿಕವಾಗಿ 999 ರೂಗಳನ್ನ ನಿಗಧಿ ಪಡಿಸಲಾಗಿತ್ತು. ಆದರೆ ಇದೀಗ ಡಿಸ್ನಿ + ಹಾಟ್‌ಸ್ಟಾರ್ ಪ್ರೀಮಿಯಂ ಚಂದಾದಾರರಿಗೆ ವರ್ಷಕ್ಕೆ 1,499 ರೂ ಅನ್ನು ನಿಗಧಿ ಪಡಿಸಲಾಗಿದೆ. ಈ ಶ್ರೇಣಿಯಲ್ಲಿ, ಚಂದಾದಾರರು ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ 29 ಡಿಸ್ನಿ + ಒರಿಜಿನಲ್ಸ್, ಎಚ್‌ಬಿಒ, ಫಾಕ್ಸ್ ಮತ್ತು ಶೋಟೈಮ್‌ನಂತಹ ಸ್ಟುಡಿಯೋಗಳಿಂದ ಇತ್ತೀಚಿನ ಅಮೇರಿಕನ್ ಕಾರ್ಯಕ್ರಮಗಳನ್ನ ನೋಡುವ ಅವಕಾಶವನ್ನ ಪಡೆದುಕೊಳ್ಳಲಿದ್ದಾರೆ.


 • ಜಾಹೀರಾತು

  ಇನ್ನು ಬಳಕೆದಾರರು ಈಗಾಗಲೇ ಹಾಟ್‌ಸ್ಟಾರ್ ಯೋಜನೆಗೆ ಚಂದಾದಾರರಾಗಿದ್ದರೆ, ಅವರ ಹಾಟ್‌ಸ್ಟಾರ್ ಖಾತೆಯನ್ನು ಸ್ವಯಂಚಾಲಿತವಾಗಿ ಅನುಗುಣವಾದ ಹೊಸ ಚಂದಾದಾರಿಕೆ ಯೋಜನೆಗೆ ಅಪ್‌ಗ್ರೇಡ್ ಮಾಡಲಾಗುತ್ತದೆ. ಮತ್ತು ಅವರು ತಮ್ಮ ಚಂದಾದಾರಿಕೆಯನ್ನು ನವೀಕರಿಸಿದಾಗ ಅವರಿಗೆ ಹೊಸ ದರಗಳನ್ನು ವಿಧಿಸಲಾಗುತ್ತದೆ. ಎಲ್ಲಾ ಹೊಸ ಚಂದಾದಾರರು ಹೊಸ ದರಗಳನ್ನು ಪಾವತಿಸಬೇಕಾಗುತ್ತದೆ. ಇದಲ್ಲದೆ ನವೀಕರಿಸಿದ ಪ್ಲಾಟ್‌ಫಾರ್ಮ್ ಪ್ರತ್ಯೇಕ ಡಿಸ್ನಿ + ವಿಭಾಗವನ್ನು ಹೊಂದಿದ್ದು ಅದು ಬಳಕೆದಾರರಿಗೆ ಡಿಸ್ನಿ, ಪಿಕ್ಸರ್, ಮಾರ್ವೆಲ್, ಸ್ಟಾರ್ ವಾರ್ಸ್ ಮತ್ತು ನ್ಯಾಷನಲ್ ಜಿಯಾಗ್ರಫಿಕ್‌ನಿಂದ ವಿಷಯವನ್ನು ಸುಲಭವಾಗಿ ನ್ಯಾವಿಗೇಟ್ ಮಾಡಲು ಸಹಾಯ ಮಾಡುತ್ತದೆ. ಪೋಷಕರು ತಮ್ಮ ಮಕ್ಕಳಿಗೆ ವಯಸ್ಸಿಗೆ ಸೂಕ್ತವಾದ ವಿಷಯವನ್ನು ಪ್ರವೇಶಿಸಲು ಮಕ್ಕಳು-ಸುರಕ್ಷಿತ ಮೋಡ್ ಮೂಲಕ ನ್ಯಾವಿಗೇಟ್ ಮಾಡಲು ಸಾಧ್ಯವಾಗುತ್ತದೆ.
ಅಮೆರಿಕ ಮೂಲದ ದಿ ವಾಲ್ಟ್‌ ಡಿಸ್ನಿ ಕಂಪೆನಿಯ ಡಿಸ್ನಿ ಪ್ಲಸ್‌ ಕೊನೆಗೂ ಭಾರತದಲ್ಲಿ ತನ್ನ ಕಾರ್ಯಾಚರಣೆಯನ್ನ ಶುರುಮಾಡಿದೆ. ಡೈರೆಕ್ಟ್‌-ಟು- ಕನ್ಸೂಮರ್‌ & ಇಂಟರ್‌ ನ್ಯಾಷನಲ್‌ ವಿಭಾಗದ ಒಡೆತನದಲ್ಲಿರುವ ಡಿಸ್ನಿ ಪ್ಲಸ್‌ ಈಗಾಗಲೇ ಭಾರತದಲ್ಲಿ ಶುರುವಾಗಿದೆ. ಈಗಾಗಲೇ ಭಾರತದಲ್ಲಿ ದಿ ವಾಲ್ಟ್‌ ಡಿಸ್ನಿ ಒಡೆತನದ ಹಾಟ್‌ಸ್ಟಾರ್‌ ಪ್ರಖ್ಯಾತಿಯನ್ನ ಪಡೆದಿರೊದ್ರಿಂದ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ಜೊತೆಗೆ ಕಾರ್ಯಾಚರಣೆ ಮಾಡಲಿದೆ ಎಂದು ಹೇಳಲಾಗಿತ್ತು. ಅದರಂತೆ ಇದೀಗ ಹಾಟ್‌ಸ್ಟಾರ್‌ ಡಿಸ್ನಿಪ್ಲಸ್‌ ಆಗಿ ಬದಲಾಗಿದೆ. ಕೇವಲ ಹಾಟ್‌ಸ್ಟಾಟರ್‌ ಆಗಿ ಇದ್ದ ವೀಡಿಯೋ ಸ್ಟ್ರೀಮಿಂಗ್‌ ಸೇವೆ ಇನ್ಮುಂದೆ ಹಾಟ್‌ಸ್ಟಾರ್‌ ಡಿಸ್ನಿ ಪ್ಲಸ್ ಆಗಿ ದೊರೆಯಲಿದೆ.

   
 
ಹೆಲ್ತ್