Back
Home » ಇತ್ತೀಚಿನ
ಶಿಯೋಮಿಯ ಟಾಪ್‌ 5 48ಎಂಪಿ ಕ್ಯಾಮೆರಾ ಫೋನ್‌ಗಳು!
Gizbot | 6th Apr, 2020 09:00 AM
 • ಸೆನ್ಸಾರ್ ಕ್ಯಾಮೆರಾ

  ಹೌದು, ಸದ್ಯ ಹೈ ಎಂಡ್‌ ಸೆನ್ಸಾರ್ ಕ್ಯಾಮೆರಾ ಟ್ರೆಂಡಿಂಗ್‌ನಲ್ಲಿದೆ. ಈ ನಿಟ್ಟಿನಲ್ಲಿ ಶಿಯೋಮಿ ಸಂಸ್ಥೆಯು ತನ್ನ ಹೊಸ ಸ್ಮಾರ್ಟ್‌ಫೋನ್‌ಗಳಲ್ಲಿ 48ಎಂಪಿ ಹಾಗೂ 64ಎಂಪಿ ಸೆನ್ಸಾರ್ ಕ್ಯಾಮೆರಾ ಫೀಚರ್‌ ಅನ್ನು ನೀಡುತ್ತಿದೆ. ರೆಡ್ಮಿ ನೋಟ್ 7 ಸ್ಮಾರ್ಟ್‌ಫೋನ್ ಸರಣಿಯಿಂದ ಶುರುವಾದ ಶಿಯೋಮಿಯ ಹೈ ಎಂಡ್ ಸೆನ್ಸಾರ್ ಕ್ಯಾಮೆರಾ ಪರಂಪರೆ ಇತ್ತೀಚಿನ ರೆಡ್ಮಿ ನೋಟ್ 9 ಸರಣಿಯವರೆಗೂ ಮುಂದುವರೆದಿದೆ. ಹಾಗಾದರೆ 48ಎಂಪಿ ಕ್ಯಾಮೆರಾ ಹೊಂದಿರುವ ಶಿಯೋಮಿ ಟಾಪ್‌ 5 ಸ್ಮಾರ್ಟ್‌ಫೋನ್‌ಗಳು ಯಾವುವು ಎಂಬುದನ್ನು ಈ ಲೇಖನದಲ್ಲಿ ನೋಡೋಣ ಬನ್ನಿರಿ.


 • ರೆಡ್ಮಿ ನೋಟ್ 9 ಪ್ರೊ

  ಶಿಯೋಮಿ ಸಂಸ್ಥೆಯು ಹೊಸದಾಗಿ ಬಿಡುಗಡೆ ಮಾಡಿರುವ ಈ ರೆಡ್ಮಿ ನೋಟ್ 9 ಪ್ರೊ ಫೋನಿನ ಪ್ರಮುಖ ಹೈಲೈಟ್ಸ್‌ ಎಂದರೇ ಕ್ಯಾಮೆರಾ, ಪ್ರೊಸೆಸರ್ ಮತ್ತು ಬ್ಯಾಟರಿ ಆಗಿದೆ. ಈ ಫೋನ್ ಕ್ವಾಡ್‌ ಕ್ಯಾಮೆರಾ ಸೆಟ್‌ಅಪ್‌ ಹೊಂದಿದ್ದು, ಮುಖ್ಯ ಕ್ಯಾಮೆರಾವು 48ಎಂಪಿ ಸೆನ್ಸಾರ್ ಹೊಂದಿದೆ. ಹಾಗೂ ಸೆಲ್ಫಿಗಾಗಿ ಮುಂಭಾಗದಲ್ಲಿ 16ಎಂಪಿ ಸೆನ್ಸಾರ್ ಕ್ಯಾಮೆರಾ ಸೌಲಭ್ಯವನ್ನು ಪಡೆದಿದೆ.


 • ರೆಡ್ಮಿ ನೋಟ್ 8

  ರೆಡ್ಮಿನೋಟ್ 8 ಸರಣಿಯು ಸಹ ಸಿಕ್ಕಾಪಟ್ಟೆ ಟ್ರೆಂಡ್ ಹುಟ್ಟು ಹಾಕಿದ್ದು, ಈ ಸರಣಿಯು ರೆಡ್ಮಿ ನೋಟ್ 8 ಮತ್ತು ರೆಡ್ಮಿ ನೋಟ್ 8 ಪ್ರೊ ಮಾಡೆಲ್‌ಗಳನ್ನು ಒಳಗೊಂಡಿದೆ. ಅವುಗಳಲ್ಲಿ ರೆಡ್ಮಿ ನೋಟ್ 8 ಸ್ಮಾರ್ಟ್‌ಫೋನ್ 48ಎಂಪಿ ಸೆನ್ಸಾರ್ ಕ್ಯಾಮೆರಾವನ್ನು ಪಡೆದಿದೆ. ಜೊತೆಗೆ ಬಿಗ್ ಬ್ಯಾಟರಿ, ವೇಗದ ಪ್ರೊಸೆಸರ್ ಹಾಗೂ ಡಿಸೈನ್‌ನಿಂದ ಆಕರ್ಷಕವಾಗಿದೆ.


 • ರೆಡ್ಮಿ ಕೆ20 ಪ್ರೊ

  ಶಿಯೋಮಿ ಫ್ಲ್ಯಾಗ್‌ಶಿಪ್ ಫೋನ್ ಎಂದೆ ಗುರುತಿಸಿಕೊಂಡಿರುವ 'ರೆಡ್ಮಿ ಕೆ20 ಪ್ರೊ' ಫೋನ್ ಸಹ ಪ್ರೊಸೆಸರ್, ಡಿಸೈನ್, ಬ್ಯಾಟರಿ, ಹಾಗೂ ಕ್ಯಾಮೆರಾ ಫೀಚರ್ಸ್‌ಗಳಿಂದ ಗ್ರಾಹಕರನ್ನು ಸೆಳೆದಿದೆ. ಈ ಫೋನ್ ಸಹ 48ಎಂಪಿ ಸೆನ್ಸಾರ್ ಕ್ಯಾಮೆರಾವನ್ನು ಒಳಗೊಂಡಿದೆ.


 • ರೆಡ್ಮಿ ನೋಟ್ 7 ಪ್ರೊ

  ಮೊಬೈಲ್ ಮಾರುಕಟ್ಟೆಯಲ್ಲಿ ಹೊಸ ಟ್ರೆಂಡ್ ಬರೆದ ರೆಡ್ಮಿ ನೋಟ್ 7 ಪ್ರೊ ಫೋನಿಗೆ ಇಂದಿಗೂ ಡಿಮ್ಯಾಂಡ್ ಕಡಿಮೆ ಆಗಿಲ್ಲ. ಈ ಫೋನ್ ಡ್ಯುಯಲ್ ಕ್ಯಾಮೆರಾ ಸೆಟ್‌ಅಪ್ ಪಡೆದಿದ್ದು, ಮುಖ್ಯ ಕ್ಯಾಮೆರಾವು 48ಎಂಪಿ ಕ್ಯಾಮೆರಾ ಸೆನ್ಸಾರ್ ಒಳಗೊಂಡಿದೆ. ಹಾಗೂ 4000mAh ಬ್ಯಾಟರಿ ಬಾಳಿಕೆಯನ್ನು ಪಡೆದಿದೆ.


 • ರೆಡ್ಮಿ ನೋಟ್ 7s

  ಶಿಯೋಮಿಯು ಹಲವು ಸ್ಮಾರ್ಟ್‌ಫೋನ್‌ಗಳು ಅತ್ಯುತ್ತಮ ಕ್ಯಾಮೆರಾ ಹೊಂದಿವೆ. ಅವುಗಳ ಕೆಲವು ಫೋನ್‌ಗಳು ತಮ್ಮ ಖದರ್ ಉಳಿಸಿಕೊಂಡಿವೆ. ಆ ಪೈಕಿ ರೆಡ್ಮಿ ನೋಟ್ 7s ಸ್ಮಾರ್ಟ್‌ಫೋನ್ ಸಹ ಒಂದು. ಈ ಫೋನ್ ಸಹ 48ಎಂಪಿ ಕ್ಯಾಮೆರಾವನ್ನು ಒಳಗೊಂಡಿದ್ದು, ಮಾರುಕಟ್ಟೆಯಲ್ಲಿ ಸದ್ದು ಮಾಡಿದೆ.
ಪ್ರಸ್ತುತ ಸ್ಮಾರ್ಟ್‌ಫೋನ್ ಮಾರುಕಟ್ಟೆ ಪೈಪೋಟಿಯಲ್ಲಿದ್ದು, ಕಂಪನಿಗಳು ಬಜೆಟ್‌ ಬೆಲೆಯಲ್ಲಿ ಬೆಸ್ಟ್ ಫೀಚರ್ಸ್‌ಗಳನ್ನು ಪರಿಚಯಿಸುತ್ತ ಸಾಗಿವೆ. ಚೀನಾ ಮೂಲದ ಶಿಯೋಮಿ ಕಂಪನಿಯು ಅಗ್ಗದ ಪ್ರೈಸ್‌ಟ್ಯಾಗ್‌ನಲ್ಲಿ ಫೋನ್‌ಗಳ ಲಾಂಚ್‌ ಮಾಡಿ ಗ್ರಾಹಕರಿಂದ ಸೈ ಎನಿಸಿಕೊಂಡಿದೆ. ಶಿಯೋಮಿಯ ಇತ್ತೀಚಿನ ಎಲ್ಲ ಹೊಸ ಸ್ಮಾರ್ಟ್‌ಫೋನ್‌ಗಳಲ್ಲಿ ಅಧಿಕ ಪಿಕ್ಸಲ್ ಸಾಮರ್ಥ್ಯದ ಕ್ಯಾಮೆರಾ ಫೀಚರ್ ಕಾಮನ್ ಆಗಿದೆ.

   
 
ಹೆಲ್ತ್