Back
Home » ಇತ್ತೀಚಿನ
ಶಿಯೋಮಿ ಕಂಪೆನಿಯ ಮಿ ಸ್ಮಾರ್ಟ್ ಕ್ಯಾಮೆರಾ PTZ ಮತ್ತು PTZ ಪ್ರೊ ಬಿಡುಗಡೆ!
Gizbot | 6th Apr, 2020 01:45 PM
 • ಹೌದು

  ಹೌದು, ಭಿನ್ನ ಮಾದರಿಯ ಪ್ರಾಡಕ್ಟ್‌ಗಳಿಗೆ ಹೆಸರಾದ ಶಿಯೋಮಿ ಕಂಪೆನಿ ತನ್ನ ಹೊಸ ಸ್ಮಾರ್ಟ್‌ ಕ್ಯಾಮೆರಾಗಳನ್ನ ಬಿಡುಗಡೆ ಮಾಡಿದೆ. ಚೀನಾದಲ್ಲಿ ನಡೆದ ಮಿ ಫೆಸ್ಟಿವಲ್‌ ಕಾರ್ಯಕ್ರಮದ ಅಂಗವಾಗಿ ಎರಡು ಹೊಸ ಸೆಕ್ಯೂರಿಟಿ ಕ್ಯಾಮೆರಾಗಳನ್ನು ಲಾಂಚ್‌ ಮಾಡಿದ್ದು, ಇವುಗಳನ್ನ ಮಿ ಸ್ಮಾರ್ಟ್ ಕ್ಯಾಮೆರಾ PTZ ಮತ್ತು PTZ ಪ್ರೊ ಎಂದು ಹೆಸರಿಸಲಾಗಿದೆ. ಇನ್ನು ಈ ಎರಡು ಸ್ಮಾರ್ಟ್‌ ಕ್ಯಾಮೆರಾಗಳು ಮಿ ಬ್ರಾಂಡ್ ಅಡಿಯಲ್ಲಿ ಮಾರುಕಟ್ಟೆಗೆ ಲಾಂಚ್‌ ಆಗಿದ್ದು,ಈಗಾಗಲೇ ಲಭ್ಯವಿರುವ ಸ್ಮಾರ್ಟ್ ಸೆಕ್ಯುರಿಟಿ ಕ್ಯಾಮೆರಾಗಳಿಗಿಂತ ಭಿನ್ನವಾಗಿವೆ ಎನ್ನಲಾಗಿದೆ. ಹಾಗಾದ್ರೆ ಈ ಸ್ಮಾರ್ಟ್‌ ಕ್ಯಾಮೆರಾಗಳ ವಿಶೇಷತೆ ಹಾಗೂ ವಿನ್ಯಾಸ ಹೇಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಯೋಣ ಬನ್ನಿರಿ.


 • ಕ್ಯಾಮೆರಾ

  ಮಿ ಸ್ಮಾರ್ಟ್ ಕ್ಯಾಮೆರಾ PTZ ಮತ್ತು PTZ ಪ್ರೊ ಎರಡೂ ಕೂಡ ಹೊಸ ಸ್ಮಾರ್ಟ್ ಫೀಚರ್ಸ್‌ಗಳನ್ನ ಹೊಂದಿರುವ ಸೆಕ್ಯೂರಿಟಿ ಕ್ಯಾಮೆರಾಗಳಾಗಿವೆ. ನಿಮ್ಮ ಕ್ಯಾಮೆರಾವನ್ನು ದೂರದಿಂದಲೇ ಮೇಲ್ವಿಚಾರಣೆ ಮಾಡಲು ಈ ಕ್ಯಾಮೆರಾಗಳನ್ನು ಬಳಸಬಹುದಾಗಿದೆ. ಅಂದರೆ ನೀವು ಅಥವಾ ನಿಮ್ಮ ಮನೆ ಸ್ಮಾರ್ಟ್ ಆಗಿರುವುದರಿಂದ, ಕ್ಯಾಮೆರಾಗಳು ನಿಮ್ಮ ಮನೆಗೆ ಯಾರಾದರೂ ಅಕ್ರಮ ಪ್ರವೇಶವನ್ನು ಮಾಡಿದಾಗ ಅಥವಾ ನೋಡಿದಾಗ ಮನೆಯ ಮಾಲೀಕರನ್ನು ಎಚ್ಚರಿಸುತ್ತವೆ. ಜೊತೆಗೆ ಮನೆಯ ಮಾಲೀಕರಿಗೆ ನೇರವಾಗಿ ವಿಷಯ ತಲುಪುವ ವ್ಯವಸ್ಥೆಯನ್ನು ಸಹ ಒಳಗೊಂಡಿದೆ.


 • ಎರಡು

  ಇನ್ನು ಈ ಎರಡು ಮಾದರಿಗಳ ನಡುವಿನ ವ್ಯತ್ಯಾಸ ಎಂದರೆ ಕ್ಯಾಮೆರಾ ಕಾನ್ಫಿಗರೇಶನ್ ಮತ್ತು ವಿನ್ಯಾಸದಲ್ಲಿ ಕಾಣಬಹುದಾಗಿದೆ. ಮಿ ಸ್ಮಾರ್ಟ್ ಕ್ಯಾಮೆರಾ PTZ f/ 1.4 ಲೆನ್ಸ್‌ ಹೊಂದಿರುವ 3 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿದೆ. ಜೊತೆಗೆ ಈ ಸ್ಮಾರ್ಟ್ ಕ್ಯಾಮೆರಾ ಕಡಿಮೆ ಬೆಳಕಿನಲ್ಲಿಯೂ ಅತ್ಯುತ್ತಮ ವಿಡಿಯೋ ರೆಕಾರ್ಡಿಂಗ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಜೊತೆಗೆ ಸಂಪೂಣ ಕಲರ್‌ಫುಲ್‌ ವೀಡಿಯೊವನ್ನು ಸೆರೆಹಿಡಿಯುತ್ತದೆ. ಇನ್ನು ಈ ಕ್ಯಾಮೆರಾವೂ 2k ವೀಡಿಯೊಗಳನ್ನು ರೆಕಾರ್ಡ್ ಮಾಡುವ ಸಾಮರ್ಥ್ಯ ಹೊಂದಿದೆ. ಅಲ್ಲದೆ ಕಳ್ಳತನದ ಸಂದರ್ಭದಲ್ಲಿ ಇದು ಹೆಚ್ಚು ರೆಸಲ್ಯೂಶನ್ ಹೊಂದಿರುವ ವೀಡಿಯೊವನ್ನು ಸೆರೆಹಿಡಿಯುತ್ತದೆ.


 • ಇದಲ್ಲದೆ

  ಇದಲ್ಲದೆ ಮಿ ಸ್ಮಾರ್ಟ್‌ ಕ್ಯಾಮೆರಾ PTZ ಕ್ಯಾಮೆರಾ ಸ್ವತಃ 6P ಲೆನ್ಸ್ ಹೊಂದಿದ್ದು, 360 ಡಿಗ್ರಿ ವ್ಯೂವ್‌ ವ್ಯವಸ್ಥೆಯನ್ನ ಒಳಗೊಂಡಿದೆ. ಇನ್ನು ಮಿ ಸ್ಮಾರ್ಟ್ ಕ್ಯಾಮೆರಾ PTZ ಪ್ರೊ 3 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿದೆ. ಜೊತೆಗೆ AI ಟೆಕ್ನಾಲಜಿಯನ್ನ ಹೊಂದಿದ್ದು, ಇದರ ಮೂಲಕ ಮಾನವ ಪತ್ತೆಹಚ್ಚುವಿಕೆಯನ್ನು ಬೆಂಬಲಿಸುತ್ತದೆ. ಜೊತೆಗೆ ಈ ಕ್ಯಾಮೆರಾ ಕೂಡ 360 ಡಿಗ್ರಿ ಕ್ಷೇತ್ರದ ವೀಕ್ಷಣೆ ಯನ್ನ ಹೊಂದಿದೆ. ಅಲ್ಲದೆ ಪನೋರಮಾ ಸ್ವೀಪ್ ಫೀಚರ್ಸ್‌ ಅನ್ನು ಸಹ ಒಳಗೊಂಡಿದೆ.


 • ಎರಡು

  ಅಲ್ಲದೆ ಈ ಎರಡು ಕ್ಯಾಮೆರಾಗಳಲ್ಲಿ PTZ ಪ್ರೊ ಬ್ಲೂಟೂತ್ ಗೇಟ್‌ವೇ ಕಾರ್ಯಗಳನ್ನು ಹೊಂದಿದೆ. ಜೊತೆಗೆ ಇದು ಡ್ಯುಯಲ್ ಬ್ಯಾಂಡ್ ವೈಫೈ ಅನ್ನು ಸಹ ಬೆಂಬಲಿಸುತ್ತದೆ. ಇನ್ನು ಮಿ ಸ್ಮಾರ್ಟ್ ಕ್ಯಾಮೆರಾ PTZ ಬೆಲೆ RMB 199 ( ಅಂದಾಜು 2,150 ರೂ.) ಮತ್ತು ಮಿ ಸ್ಮಾರ್ಟ್ ಕ್ಯಾಮೆರಾ PTZ ಪ್ರೊ RMB 249 (ಸುಮಾರು 2,700 ರೂ.) ಬೆಲೆಯನ್ನ ಒಳಗೊಂಡಿದೆ. ಸದ್ಯ ಇದು ಚೀನಾ ಮಾರುಕಟ್ಟೆಯಲ್ಲಿ ಲಬ್ಯವಿದ್ದು, ಶೀಘ್ರದಲ್ಲೇ ಭಾರತಕ್ಕೆ ಎಂಟ್ರಿ ಕೊಡುವ ಸಾದ್ಯತೆ ಇದೆ.
ಚೀನಾದ ಜನಪ್ರಿಯ ಕಂಪೆನಿ ಶಿಯೊಮಿ ಸ್ಮಾರ್ಟ್‌ಫೋನ್‌ ವಲಯ ಮಾತ್ರವಲ್ಲದೆ ಇತರೆ ಎಲೆಕ್ಟ್ರಾನಿಕ್ಸ್‌ ಪ್ರಾಡಕ್ಟ್‌ಗಳ ಮಾರುಕಟ್ಟೆಯಲ್ಲೂ ಪ್ರಸಿಧ್ದಿಯನ್ನ ಪಡೆದುಕೊಂಡಿದೆ. ಟೆಕ್‌ ಮಾರುಕಟ್ಟೆಯಲ್ಲಿ ವಿಶೇಷ ಹಾಗೂ ವಿಶಿಷ್ಟ ಸ್ಮಾರ್ಟ್‌ ಡಿವೈಸ್‌ಗಳನ್ನ ಪರಿಚಯಿಸುವಲ್ಲಿ ಸೈ ಎನಿಸಿಕೊಂಡಿರುವ ಶಿಯೋಮಿ ಸ್ಮಾರ್ಟ್‌ಕ್ಯಾಮೆರಾಗಳನ್ನ ಪರಿಚಯಿಸುವಲ್ಲಿಯೂ ಮುಂದೆ ಇದೆ. ಈಗಾಗಲೇ ಹಲವು ಸ್ಮಾರ್ಟ್‌ ಕ್ಯಾಮೆರಾಗಳನ್ನ ಪರಿಚಯಿಸಿದೆ. ಇದೀಗ ತನ್ನ ಮಿ ಫೆಸ್ಟಿವಲ್‌ ಅಂಗವಾಗಿ ಎರಡು ಹೊಸ ಮಾದರಿಯ ಸ್ಮಾರ್ಟ್‌ ಕ್ಯಾಮೆರಾಗಳನ್ನ ಪರಿಚಯಿಸಿದೆ.

   
 
ಹೆಲ್ತ್