Back
Home » ಆರೋಗ್ಯ
ಲಾಕ್‌ಡೌನ್‌ನಲ್ಲಿ ಮೈ ತೂಕ ಹೆಚ್ಚದಿರಲು ಈ ಸೆಲೆಬ್ರಿಟಿಗಳು ಸೇವಿಸುವ ಆಹಾರಗಳಿವು
Boldsky | 27th Apr, 2020 06:15 PM
 • ಮಲೈಕಾ ಅರೋರಾ

  ಬಾಲಿವುಡ್‌ ಬೆಡಗಿ ಮಲೈಕಾ ಅರೋರಾ ವಯಸ್ಸಿಗೂ ಅವರ ಮೈಕಟ್ಟಿಗೂ ಸಂಬಂಧವೇ ಇಲ್ಲ. ವಯಸ್ಸು 40 ದಾಟಿದರೂ ಇನ್ನು 25ರ ತರುಣಿಯಂತೆ ಮೈ ಮಾಟ ಇಟ್ಟುಕೊಂಡಿದ್ದಾರೆ. ಒಂದು ಮಗುವಿನ ತಾಯಿ ಆಗಿರುವ ಮಲೈಕಾ ಫಿಟ್ನೆಸ್‌ಗೆ ತುಂಬಾ ಪ್ರಾಮುಖ್ಯತೆ ನೀಡುತ್ತಾರೆ. ಆದ್ದರಿಂದಲೇ ವಯಸ್ಸಾದರೂ ಬಾಲಿವುಡ್‌ನ ಟಾಪ್ ಮಾಡೆಲ್‌ಗಳ ಪಟ್ಟಿಯಲ್ಲಿ ಇನ್ನೂ ಇದ್ದಾರೆ. ಇತ್ತೀಚೆಗಷ್ಟೆ ಮಾಂಸಾಹಾರ ಬಿಟ್ಟಿದ್ದೇನೆ, ಸಸ್ಯಾಹಾರ ಮಾತ್ರ ಸೇವಿಸುವ ವೇಗನ್ ಡಯಟ್ (ಹಾಲಿನ ಉತ್ಪನ್ನಗಳು ಕೂಡ ಬಳಸುವುದಿಲ್ಲ) ಪಾಲಿಸುತ್ತಿರುವುದಾಗಿ ಹೇಳಿದ್ದರು. ಇದೀಗ ಲಾಕ್‌ಡೌನ್‌ ಸಮಯದಲ್ಲಿ ತಾವೇ ಆಹಾರ ತಯಾರಿಸಿ ಮೈ ಫಿಟ್ನೆಸ್‌ ಕಾಪಾಡುತ್ತಿದ್ದಾರೆ. ಅವರು ವೆಜೆಟೇಬಲ್ ಸ್ಟಿವ್ಯೂ ಸೇವಿಸುತ್ತೇನೆ ಎಂದಿದ್ದಾರೆ. ಸ್ಟಿವ್ಯೂ ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿಯೂ ಸಹಕಾರಿ.

  ಸ್ಟಿವ್ಯೂ ಎಂದರೆ ಸ್ವಲ್ಪ ತರಕಾರಿ ಬೇಯಿಸಿ ಅದಕ್ಕೆ ಒರೆಗ್ನೋ ಮುಂತಾದ ಹರ್ಬ್ಸ್ ಹಾಕಿ ತಿನ್ನುವುದು. ಸ್ವಲ್ಪ ಸೂಪ್ ವರ್ಗಕ್ಕೆ ಸೇರಿದ ರೆಸಿಪಿ ಇದಾಗಿದೆ.


 • ಕರಿಷ್ಮಾ ತಾನ್ನಾ

  ಕರಿಷ್ಮಾ ತಾನ್ನಾ ಲಾಕ್‌ಡೌನ್‌ ಸಮಯದಲ್ಲಿ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೋವೊಂದನ್ನು ಪೋಸ್ಟ್ ಮಾಡಿ ಆರೋಗ್ಯಕರ ಜ್ಯೂಸ್‌ ಕುಡಿಯುವುದು ಒಳ್ಳೆಯದು. ಅದರಲ್ಲೂ ಪ್ರತಿದಿನ ಬ್ರೇಕ್‌ಪಾಸ್ಟ್‌ಗೆ ಮುನ್ನ ಹಸಿರು ಜ್ಯೂಸ್‌ ಕುಡಿಯುವುದು ಒಳ್ಳೆಯದು ಎಂದು ಹೇಳಿದ್ದಾರೆ.

  ಸೌತೆಕಾಯಿ, ನೆಲ್ಲಿಕಾಯಿ, ನಿಂಬೆರಸ ಇವುಗಳ ಜ್ಯೂಸ್‌ ತೂಕ ಇಳಿಕೆಗೆ ತುಂಬಾ ಸಹಕಾರಿ ಎಂದಿದ್ದಾರೆ.


 • ಅಲಿಯಾ ಭಟ್

  ಅಲಿಯಾ ರುಚಿಕರವಾದ ಆಹಾರ ಸೇವಿಸಲು ಬಯಸುತ್ತಾರೆ. ಅದೇ ಸಮಯದಲ್ಲೂ ಫಿಟ್ನೆಸ್ ಕಡೆಗೂ ಗಮನ ನೀಡುತ್ತಾರೆ. ಅವರು ಇತ್ತೀಚೆಗೆ ಸಬ್ಜಾ ಬೀಜದಿಂದ ಪುಡ್ಡಿಂಗ್ ಮಾಡುವ ಪೋಟೋ ಶೇರ್ ಮಾಡಿದ್ದರು. ಸಬ್ಜಾ ಬೀಜ ಮೈ ಕೊಬ್ಬು ಕರಗಿಸುವಲ್ಲಿ ತುಂಬಾ ಪರಿಣಾಮಕಾರಿಯಾದ ಆಹಾರವಾಗಿದೆ. ಇದನ್ನು ರಾತ್ರಿ ನೆನೆಹಾಕಿ ಬೆಳಗ್ಗೆ ಕುಡಿಯಬಹುದು.


 • ಶಿಲ್ಪಾ ಶೆಟ್ಟಿ

  ಶಿಲ್ಪಾ ಶೆಟ್ಟಿ ಫಿಟ್ನೆಸ್‌ ಕಡೆಗೆ ಎಷ್ಟು ಮಹತ್ವ ಕೊಡುತ್ತಾರೆ ಎನ್ನುವುದು ಅವರನ್ನು ಬಲ್ಲ ಎಲ್ಲರಿಗೂ ಗೊತ್ತು. ಫಿಟ್ನೆಸ್ ಕುರಿತ ಅನೇಕ ವೀಡಿಯೋಗಳನ್ನು ತಮ್ಮ ಯೂಟ್ಯೂಬ್ ಚಾನಲ್‌ ಹಾಗೂ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ. ಲಾಕ್‌ಡೌನ್ ಸಮಯದಲ್ಲಿ ಹುರಿಗಡಲೆಯ ಹಿಟ್ಟಿನ ಪಾನಕ(ಸತ್ತು ಡ್ರಿಂಕ್ಸ್) ಕುಡಿಯುವಂತೆ ಸಲಹೆ ನೀಡಿದ್ದಾರೆ. ಇದರಲ್ಲಿ ಪ್ರೊಟೀನ್ ಅಧಿಕವಿರುತ್ತದೆ ಹಾಗೂ ಬೇಗನೆ ಹಸಿವು ಕೂಡ ಉಂಟಾಗುವುದಿಲ್ಲ. ಇದು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ ಹಾಗೂ ತೂಕ ಇಳಿಕೆಗೂ ಸಹಕಾರಿ.


 • ಆಯುಷ್ಮಾನ್ ಖುರಾನಾ

  ಆಯುಷ್ಮಾನ್ ಖುರಾನಾ ಕೂಡ ಫಿಟ್ನೆಸ್‌ ಹಾಗೂ ಆರೋಗ್ಯಕ್ಕಾಗಿ ತಾವು ಸತ್ತು ಶೇಕ್(ಹುರಿಗಡಲೆ ಪುಡಿಯ ಶೇಕ್) ಕುಡಿಯುವುದಾಗಿ ಹೇಳಿದ್ದರು. ಸತ್ತುವನ್ನು ಮಜ್ಜಿಗೆ ಜೊತೆ ಮಿಶ್ರ ಮಾಡಿ ಕುಡಿಯುತ್ತೇನೆ. ಇದು ರುಚಿಯ ಜೊತೆಗೆ ದೇಹಕ್ಕೆ ಬೇಕಾದ ಪ್ರೊಟೀನ್ ಕೊಡುತ್ತದೆ. ಲಾಕ್‌ಡೌನ್‌ನಲ್ಲಿ ಕುಡಿಯಲು ಯೋಗ್ಯವಾದ ರೆಸಿಪಿ ಎಂದಿದ್ದಾರೆ.

  ನೀವು ಕೂಡ ಈ ಸೆಲೆಬ್ರಿಟಿಗಳ ಟಿಪ್ಸ್ ಪಾಲಿಸಿದರೆ ಲಾಕ್‌ಡೌನ್‌ನಿಂದಾಗಿ ದಪ್ಪಗಾದೆ ಎಂದು ಹೇಳುವ ಪ್ರಮೇಯವೇ ಬರುವುದಿಲ್ಲ, ಏನಂತೀರಾ?
ಲಾಕ್‌ಡೌನ್‌ನಿಂದಾಗಿ ಎಲ್ಲರೂ ಮನೆಯಲ್ಲಿಯೇ ಸಮಯ ಕಳೆಯುವಂತಾಗಿದೆ. ಮಾಲ್‌, ರೆಸ್ಟೋರೆಂಟ್‌ ಬಿಡಿ ಜಿಮ್, ಜುಂಬಾ ಡ್ಯಾನ್ಸ್, ಯೋಗ ಕ್ಲಾಸ್‌ಗಳಿಗೆ ಹೋಗಿ ಸ್ವಲ್ಪ ಹೊತ್ತು ವರ್ಕೌಟ್ ಮಾಡೋಣ ಎಂದರೆ ಅದು ಸಾಧ್ಯವಿಲ್ಲ ಎನ್ನುವುದು ಕೆಲವರ ಸಮಸ್ಯೆ.

ಇನ್ನು ಕೆಲವರು ಮೊದಲೆಲ್ಲಾ ಸಮಯವಿಲ್ಲ ಎಂದು ವರ್ಕೌಟ್ ಹಾಗೂ ಆಹಾರಕ್ರಮದ ಕಡೆ ಗಮನ ಕೊಡುತ್ತಿರಲಿಲ್ಲ. ಇದೀಗ ಸಾಕಷ್ಟು ಸಮಯವಿದ್ದರೂ ಆಹಾರಕ್ರಮ, ವ್ಯಾಯಾಮ ಕಡೆ ಗಮನ ನೀಡುವುದು ಬಿಟ್ಟು ಅಯ್ಯೋ ಈ ಲಾಕ್‌ಡೌನ್‌ನಿಂದಾಗಿ ಒಮದು ರೌಂಡ್‌ ದಪ್ಪಗಾಗಿದ್ದೇನೆ ಎಂದು ದಪ್ಪಗಾಗುತ್ತಿರುವುದಕ್ಕೆ ಲಾಕ್‌ಡೌನೇ ಕಾರಣ ಎಂದು ದೂರುತ್ತಿದ್ದಾರೆ.

ಈ ಎರಡೂ ಗುಂಪಿಗಿಂತ ಭಿನ್ನವಾದ ಒಂದು ಗುಂಪು ಇದೆ. ಅವರನ್ನು ಫಿಟ್ನೆಸ್‌ ಫ್ರೀಕ್ ಎಂದು ಕರೆದರೂ ತಪ್ಪಾಗಲಾರದು. ಏಕೆಂದರೆ ಇವರು ಏನೇ ಪರಿಸ್ಥಿತಿ ಬರಲಿ ತಮ್ಮ ದೇಹದ ಮೈತೂಕದ ಕಡೆಗೆ ತುಂಬಾ ಗಮನ ನೀಡುತ್ತಾರೆ. ಅಂಥವರಿಗೆ ಲಾಕ್‌ಡೌನ್ ಸಮಯದಲ್ಲಿ ಫಿಟ್ನಿಸ್‌ಗಾಗಿ ಸೆಲೆಬ್ರಿಟಿಗಳು ಪಾಲಿಸುವ ಟ್ರಿಕ್ಸ್ ತುಂಬಾ ಪ್ರಯೋಜನಕ್ಕೆ ಬರುತ್ತವೆ.

ಈ ಲಾಕ್‌ಡೌನ್‌ನಲ್ಲಿ ಸೆಲೆಬ್ರಿಟಿಗಳು ತಮ್ಮ ಮೈ ಫಿಟ್ನೆಸ್ ಕಡೆ ಗಮನ ನೀಡಲೇಬೇಕು. ತಿಂದು ದಪ್ಪಗಾಗಿ ಕೂತರೆ ಲಾಕ್‌ಡೌನ್‌ ಮುಗಿದ ಮೇಲೆ ಕೈಯಲ್ಲಿರುವ ಪ್ರಾಜೆಕ್ಟ್‌ಗಳು ಇಲ್ಲವಾಗಬಹುದು. ಆದ್ದರಿಂದ ಪ್ರತಿಯೊಬ್ಬರು ಮನೆಯಲ್ಲಿಯೇ ವರ್ಕೌಟ್ ಮಾಡ್ತಾ ಇದ್ದಾರೆ. ಇನ್ನು ಕೆಲವೊಂದು ಸೆಲೆಬ್ರಿಟಿಗಳು ತಾವು ಸೇವಿಸುವ ಆಹಾರಕ್ರಮದ ಬಗ್ಗೆಯೂ ಹೇಳಿಕೊಂಡಿದ್ದಾರೆ.

ಈ ಲಾಕ್‌ಡೌನ್‌ ಸಮಯದಲ್ಲಿ ಆಕರ್ಷಕ ಮೈತೂಕ ಪಡೆಯಬೇಕೆಂದು ನೀವು ಬಯಸುವುದಾದರೆ ಬಾಲಿವುಡ್‌ ಸೆಲೆಬ್ರಿಟಿಗಳು ಫಿಟ್ನೆಸ್‌ ಕಾಪಾಡಲು ತಾವೇನು ಮಾಡುತ್ತಿದ್ದೇವೆ ಎಂಬ ಆಹಾರಕ್ರಮ ಸೀಕ್ರೆಟ್ ಹೇಳಿಕೊಂಡಿದ್ದೇವೆ ನೋಡಿ:

 
ಹೆಲ್ತ್