Back
Home » ಇತ್ತೀಚಿನ
ವೊಡಾಫೋನಿನ ಈ ಪ್ಯಾಕ್‌ನಲ್ಲಿ ಡಬಲ್ ಡೇಟಾ ಪ್ರಯೋಜನ ಲಭ್ಯ!
Gizbot | 27th May, 2020 04:57 PM
 • ವೊಡಾಫೋನ್

  ಹೌದು, ವೊಡಾಫೋನ್ ಟೆಲಿಕಾಂ ತನ್ನ 98ರೂ. ಆಡ್-ಆನ್ ಡೇಟಾ ಪ್ಯಾಕ್‌ ಅನ್ನು ಇತ್ತೀಚೆಗೆ ಪರಿಷ್ಕರಿಸಿದ್ದು, ಪ್ರಯೋಜನ ಡಬಲ್ ಮಾಡಿದೆ. ವೊಡಾಫೋನಿನ ಈ ಆಡ್‌ ಆನ್ ಡೇಟಾ ಯೋಜನೆಯಲ್ಲಿ ಮೊದಲು ಒಟ್ಟು 6GB ಡೇಟಾ ಸೌಲಭ್ಯ ಲಭ್ಯವಾಗುತ್ತಿತ್ತು. ಆದ್ರೆ ಈಗ ಒಟ್ಟು 12GB ಡೇಟಾ ಪ್ರಯೋಜನೆ ಗ್ರಾಹಕರಿಗೆ ಸಿಗಲಿದೆ. ಅಂದಹಾಗೆ ಈ ಆಡ್‌ ಆನ್ ಪ್ಯಾಕ್ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದುಕೊಂಡಿದೆ. ಮುಂದೆ ಓದಿರಿ


 • ವೊಡಾಫೋನ್ 98ರೂ. ಪ್ಲ್ಯಾನಿನಲ್ಲಿ ಡಬಲ್ ಡೇಟಾ

  ಹೆಚ್ಚಿನ ಡೇಟಾ ಅನುಕೂಲಕ್ಕಾಗಿ ವೊಡಾಫೋನ್ ಆಡ್‌ ಆನ್‌ ಡೇಟಾ ಯೋಜನೆಗಳನ್ನು ಪರಿಚಯಿಸಿದೆ. ಅವುಗಳಲ್ಲಿ ವೊಡಾಫೋನ್ 98ರೂ. ಬೆಲೆಯ ಪ್ಯಾಕ್‌ ಈಗ ಪರಿಷ್ಕರಣೆ ಆಗಿದ್ದು, ಒಟ್ಟು 12GB ಡೇಟಾ ಪ್ರಯೋಜನ ಒಳಗೊಂಡಿದೆ. ಈ ಪ್ಲ್ಯಾನ್ 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದ್ದು, ಈ ಅವಧಿಯಲ್ಲಿ ಯಾವುದೇ ಉಚಿತ ಎಸ್‌ಎಮ್‌ಎಸ್‌, ಉಚಿತ ವಾಯಿಸ್‌ ಕರೆ ಸೌಲಭ್ಯಗಳು ದೊರೆಯುವುದಿಲ್ಲ. ಡೇಟಾ ಮಾತ್ರ ಲಭ್ಯವಾಗುತ್ತದೆ.


 • ಪ್ಯಾನ್‌ ಲಭ್ಯತೆ

  ಆಂಧ್ರಪ್ರದೇಶ, ಬಿಹಾರ, ಚೆನ್ನೈ, ದೆಹಲಿ, ಗುಜರಾತ್, ಹಿಮಾಚಲ ಪ್ರದೇಶ, ಹರಿಯಾಣ, ಜಮ್ಮು ಮತ್ತು ಕಾಶ್ಮೀರ, ಕರ್ನಾಟಕ, ಕೇರಳ, ಕೋಲ್ಕತಾ, ಮಹಾರಾಷ್ಟ್ರ ಮತ್ತು ಗೋವಾ, ಮಧ್ಯಪ್ರದೇಶ ಮತ್ತು ಮುಂಬೈ ಸೇರಿದಂತೆ ಹಲವಾರು ವಲಯಗಳಲ್ಲಿ ಆಪರೇಟರ್ ಈ ಪ್ರಸ್ತಾಪವನ್ನು ಸಕ್ರಿಯಗೊಳಿಸಿದೆ. ಹೆಚ್ಚುವರಿಯಾಗಿ, ಒಡಿಶಾ, ಪಂಜಾಬ್, ತಮಿಳುನಾಡು, ಯುಪಿ ಪೂರ್ವ, ಯುಪಿ ಪಶ್ಚಿಮ ಮತ್ತು ಪಶ್ಚಿಮ ಬಂಗಾಳದ ಬಳಕೆದಾರರಿಗೂ ಡಬಲ್ ಡೇಟಾ ಕೊಡುಗೆ ಅನ್ವಯಿಸುತ್ತದೆ.


 • ಇತರೆ ಡೇಟಾ ಆಡ್‌ ಆನ್ ಪ್ಲ್ಯಾನ್

  ವೊಡಾಫೋನ್‌ ಒಟ್ಟು ಮೂರು ಡೇಟಾ ಆಡ್‌ ಆನ್ ಯೋಜನೆಗಳನ್ನು ಹೊಂದಿದ್ದು, ಅವುಗಳು 16ರೂ, 48ರೂ ಮತ್ತು 98ರೂ ಬೆಲೆಯಲ್ಲಿವೆ. ಆರಂಭಿಕ 16ರೂ, ಡೇಟಾ ಆಡ್‌ ಆನ್ ಪ್ಯಾಕ್‌ ಒಂದು ದಿನದ ವ್ಯಾಲಿಡಿಟಿ ಅವಧಿಯನ್ನು ಪಡೆದಿದ್ದು, 1GB ಡೇಟಾ ಪ್ರಯೋಜನ ಒದಗಿಸುತ್ತದೆ. ಹಾಗೂ 48ರೂ. ಡೇಟಾ ಆಡ್‌ ಆನ್ ಪ್ಯಾಕ್ 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದ್ದು, ಒಟ್ಟು 3GB ಡೇಟಾ ಪ್ರಯೋಜನ ನೀಡುತ್ತದೆ.


 • ವೊಡಾಫೋನ್ ಎಸ್‌ಎಮ್‌ಎಸ್‌ ಪ್ಯಾಕ್‌

  ಹೆಚ್ಚುವರಿ ಡೇಟಾ ಅನುಕೂಲಕ್ಕಾಗಿ ಡೇಟಾ ಪ್ಯಾಕ್‌ನಂತೆ ಮೆಸೆಜ್ ಸೌಲಭ್ಯಕ್ಕಾಗಿ 36ರೂ, 12ರೂ ಮತ್ತು 26ರೂ ಬೆಲೆಯ ಮೂರು ಎಸ್‌ಎಮ್‌ಎಸ್‌ ಆಡ್‌ ಆನ್‌ ಪ್ಯಾಕ್‌ ಆಯ್ಕೆಗಳನ್ನು ಹೊಂದಿದೆ. 36ರೂ. ಪ್ಯಾಕ್‌ನಲ್ಲಿ ಒಟ್ಟು 350 ಎಸ್‌ಎಮ್‌ಎಸ್‌ ಲಭ್ಯವಾಗುತ್ತವೆ (28 ದಿನಗಳ ವ್ಯಾಲಿಡಿಟಿ). 12ರೂ. ಪ್ಯಾಕ್‌ನಲ್ಲಿ 120 ಎಸ್‌ಎಮ್‌ಎಸ್‌ ದೊರೆಯುತ್ತವೆ(10 ದಿನಗಳ ವ್ಯಾಲಿಡಿಟಿ). ಹಾಗೂ 26ರೂ. ಪ್ಯಾಕ್‌ನಲ್ಲಿ 250ಎಸ್‌ಎಮ್‌ಎಸ್‌ಗಳು ಲಭ್ಯವಿದ್ದು, 28 ದಿನಗಳ ವ್ಯಾಲಿಡಿಟಿ ಇರುತ್ತದೆ.
ವೊಡಾಫೋನ್ ಇತ್ತೀಚಿಗೆ ಹಲವು ಆಕರ್ಷಕ ಪ್ರೀಪೇಯ್ಡ್‌ ಪ್ಲ್ಯಾನ್‌ಗಳನ್ನು ಪರಿಚಯ ಮಾಡಿದೆ. ಅವುಗಳಲ್ಲಿ ಡಬಲ್ ಡೇಟಾ ಪ್ರಯೋಜನದ ಕೆಲವು ಪ್ಲ್ಯಾನ್‌ಗಳು ಗ್ರಾಹಕರನ್ನು ಹೆಚ್ಚಾಗಿ ಆಟ್ರ್ಯಾಕ್ಟ್ ಮಾಡಿವೆ. ಹಾಗೆಯೇ ಸಂಸ್ಥೆಯು ಕೆಲವು ಹೆಚ್ಚುವರಿ ಡೇಟಾ ಆಡ್‌-ಆನ್‌ ಪ್ಲ್ಯಾನ್‌ಗಳನ್ನು ಹೊಂದಿದೆ. ಆ ಪೈಕಿ ಇದೀಗ ಆಡ್‌-ಆನ್ ಡೇಟಾ ಪ್ಲ್ಯಾನ್‌ವೊಂದರಲ್ಲಿ ಡಬಲ್ ಡೇಟಾ ಪ್ರಯೋಜನವನ್ನು ಘೋಷಿಸಿದೆ.

 
ಹೆಲ್ತ್