Back
Home » ಇತ್ತೀಚಿನ
ಚೀನಾದಲ್ಲಿ ಭಾರತೀಯ ವೆಬ್‌ಸೈಟ್‌ಗಳ ವಿಪಿಎನ್‌ ಎಂಟ್ರಿಗೆ ನಿರ್ಬಂಧ!
Gizbot | 30th Jun, 2020 06:10 PM
 • ವೆಬ್‌ಸೈಟ್‌

  ಹೌದು, ಬೀಜಿಂಗ್‌ನ ರಾಜತಾಂತ್ರಿಕ ವರದಿಗಳ ಪ್ರಕಾರ ಚೀನಾದ ಕಮ್ಯೂನಿಸ್ಟ್‌ ಸರ್ಕಾರ ಭಾರತದ ವೆಬ್‌ಸೈಟ್‌ಗಳಿಗೆ ನಿರ್ಬಂದ ವಿಧಿಸಿದೆ ಎನ್ನಲಾಗ್ತಿದೆ. ಚೀನಾದಲ್ಲಿ ಭಾರತೀಯ ಪತ್ರಿಕೆಗಳು ಮತ್ತು ಟಿವಿ ಚಾನೆಲ್‌ಗಳು ಚೀನೀ ಕಮ್ಯುನಿಸ್ಟ್ ಪ್ರಚಾರ ತಾಣಗಳಿಂದ ಪೀಪಲ್ಸ್ ಲಿಬರೇಶನ್ ಆರ್ಮಿ ಕುರಿತು ಯಾವುದೇ ವರದಿಗಳನ್ನು ಮಾಡಬೇಕಿದ್ದರೂ , ವರ್ಚುವಲ್ ಪ್ರೈವೇಟ್ ನೆಟ್‌ವರ್ಕ್ (VPN) ಸರ್ವರ್ ಇಲ್ಲದೆ ಪ್ರವೇಶಿಸಲು ಸಾಧ್ಯವಾಗದ ರೀತಿ ನಿರ್ಬಂದ ಹೇರಲಾಗಿದೆ ಎನ್ನಲಾಗ್ತಿದೆ.


 • ಸರ್ಕಾರ

  ಭಾರತ ಸರ್ಕಾರ ಭಾರತದ ಸಾರ್ವಭೌಮತ್ವಕ್ಕೆ ದಕ್ಕೆ ಹಾಗೂ ಸುರಕ್ಷತೆಯ ದೃಷ್ಟಿಯಿಂದ ಚೀನಾದ 59 ಆಪ್‌ಗಳನ್ನ ರದ್ದು ಮಾಡಿರೋದು ನಿಜಕ್ಕು ಚೀನಾಗೆ ಊಹಿಸಲಾಗದ ಆಘಾತವಾಗಿದೆ. ಏಕೆಂದರೆ ಚೀನಾದ ಬಹುಪಾಲು ಆಪ್‌ಗಳು ಭಾರತದಲ್ಲಿ ಸಾಕಷ್ಟು ಜನಪ್ರಿಯತೆಯನ್ನ ಹೊಂದಿದ್ದವು. ಅದರಲ್ಲು ಟಿಕ್‌ಟಾಕ್‌, ಶೇರ್‌ಇಟ್‌ ನಂತಹ ಜನಪ್ರಿಯ ಆಪ್‌ಗಳು ಭಾರತೀಯ ಬಳಕೆದಾರರ ನೆಚ್ಚಿನ ಆಪ್‌ಗಳಲ್ಲಿ ಒಂದಾಗಿದ್ದವು. ಸದ್ಯ ಈ ಎಲ್ಲಾ ಆಪ್‌ಗಳನ್ನ ಬ್ಯಾನ್‌ ಮಾಡಿರೋದು ಚೀನಾಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.


 • ಚೀನಾ ಆಪ್‌

  ಇದೀಗ ಚೀನಾ ಆಪ್‌ಗಳಿಗೆ ಸರ್ಕಾರ ಬ್ಯಾನ್‌ ಮಾಡಿದ್ದರೆ. ಇತ್ತ ಸೊಶೀಯಲ್‌ ಮಿಡಿಯಾದಲ್ಲಿ ಚೀನಾ ಪ್ರಾಡಕ್ಟ್‌ಗಳ ಬಾಯ್ಕಾಟ್‌ ಅಭಿಯಾನ ಟ್ರೆಂಡ್‌ ಆಗುತ್ತಿದೆ. ದಿನೇ ದಿನೇ ಸಾಕಷ್ಟು ಬೆಂಬಲವನ್ನ ಪಡೆದುಕೊಳ್ಳುತ್ತಿ್ದು, ಚೀನಾದ ವಸ್ತುಗಳನ್ನ ಭಾರತದಲ್ಲಿ ಖರೀದಿಸುವವರ ಸಂಖ್ಯೆ ಇಳಿಮುಖವಾಗುತ್ತಿದೆ. ಇದೆಲ್ಲವನ್ನ ಸೂಕ್ಷ್ಮವಾಗಿ ಗಮನಿಸಿರುವ ಚೀನಾ ಸರ್ಕಾರ ಇದೀಗ ಭಾರತದ ವೆಬ್‌ಸೈಟ್‌ಗಳಿಗೆ ತನ್ನ ದೇಶದಲ್ಲಿ ನಿರ್ಬಂದ ಹೇರಿದೆ. ಈ ಮೂಲಕ ಭಾರತದ ನಿರ್ಧಾರಕ್ಕೆ ತನ್ನ ದೇಶದಲ್ಲಿ ವೆಬ್‌ಸೈಟ್‌ ನಿರ್ಬಂಧಿಸುವ ಮೂಲಕ ಉದ್ದಟತನ ಮೆರೆದಿದೆ.


 • ವೆಬ್‌ಸೈಟ್‌

  ಸದ್ಯ ಚೀನಾದ ಪತ್ರಿಕೆಗಳು ಮತ್ತು ವೆಬ್‌ಸೈಟ್‌ಗಳು ಭಾರತದಲ್ಲಿ ಪ್ರವೇಶವನ್ನು ಮುಂದುವರಿಸುತ್ತಿದ್ದರೂ, ಚೀನಾದಲ್ಲಿ ಮಾತ್ರ ಭಾರತೀಯ ಮೂಲದ ನ್ಯೂಸ್‌ ವೆಬ್‌ಸೈಟ್‌ಗಳನ್ನ ಪ್ರವೇಶಿಸಬೇಕಾದರೆ ಜನರು ವರ್ಚುವಲ್ ಪ್ರೈವೇಟ್ ನೆಟ್‌ವರ್ಕ್ (ವಿಪಿಎನ್) ಸರ್ವರ್‌ನೊಂದಿಗೆ ಮಾತ್ರ ಭಾರತೀಯ ಮಾಧ್ಯಮ ವೆಬ್‌ಸೈಟ್‌ಗಳನ್ನು ಪ್ರವೇಶಿಸಬಹುದಾಗಿದೆ. ಸದ್ಯ ಈಗಿನಂತೆ ಭಾರತೀಯ ಟಿವಿ ಚಾನೆಲ್‌ಗಳನ್ನು ಸಹ ಐಪಿ ಟಿವಿ ಮೂಲಕ ಪ್ರವೇಶಿಸಬೇಕಾಗಿದ್ದು, ಎಕ್ಸ್‌ಪ್ರೆಸ್‌ವಿಪಿಎನ್ ಕಳೆದ ಎರಡು ದಿನಗಳಿಂದ ಕಾರ್ಯನಿರ್ವಹಿಸುತ್ತಿಲ್ಲ ಎಂದು ಹೇಳಲಾಗಿದೆ.
ಭಾರತ ಸರ್ಕಾರ ಚೀನಾ ಮೂಲದ 59 ಆಪ್‌ಗಳನ್ನ ಭಾರತದಲ್ಲಿ ಬ್ಯಾನ್‌ ಮಾಡಿದೆ. ಈ ಮೂಲಕ ನೆರೆ ರಾಷ್ಟ್ರ ಚೀನಾಗೆ ಭರ್ಜರಿ ಹೊಡೆತವನ್ನೇ ನೀಡಿದೆ. ಯಾವಾಗ ಭಾರತ ಸರ್ಕಾರ ಚೀನಾದ ಆಪ್‌ಗಳನ್ನ ಬ್ಯಾನ್‌ ಮಾಡಿ ಆದೇಶ ಹೊರಡಿಸಿತು ಆಗಲೇ ಚೀನಾ ಸರ್ಕಾರ ಪತರುಗುಟ್ಟಿ ಹೋದಂತೆ ಕಾಣುತ್ತಿದೆ. ಭಾರತ ಸರ್ಕಾರದ ದಿಟ್ಟ ಹೆಜ್ಜೆಗೆ ಪ್ರತಿಕಾರವಾಗಿ ಚೀನಾ ಸರ್ಕಾರ ಚೀನಾದಲ್ಲಿ ಭಾರತೀಯ ವೆಬ್‌ಸೈಟ್‌ಗಳಿಗೆ ಕಡಿವಾಣ ಹಾಕಿದೆ ಎನ್ನಲಾಗ್ತಿದೆ.

 
ಹೆಲ್ತ್