Back
Home » ಇತ್ತೀಚಿನ
ಒಪ್ಪೋ A52: ಕ್ವಾಡ್‌ ಕ್ಯಾಮೆರಾ ಜೊತೆಗೆ ಆಕರ್ಷಕ ಡಿಸೈನ್‌ ಸ್ಮಾರ್ಟ್‌ಫೋನ್‌!
Gizbot | 4th Jul, 2020 01:23 PM
 • ಬ್ಯಾಟರಿ ಬ್ಯಾಕ್‌ಅಪ್‌

  ಒಪ್ಪೋದ ಹೊಸ A52 ಸ್ಮಾರ್ಟ್‌ಫೋನ್ 18 ಸಾವಿರ ಪ್ರೈಸ್‌ಟ್ಯಾಗ್‌ ರೇಂಜ್‌ನಲ್ಲಿ ಗುರುತಿಸಿಕೊಂಡಿದೆ. ಇನ್ನು ಈ ಸ್ಮಾರ್ಟ್‌ಫೋನ್ 6.5-ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಹೊಂದಿದ್ದು, ಡಿಸ್‌ಪ್ಲೇಯು ಪಂಚ್ ಹೋಲ್ ಮಾದರಿಯನ್ನು ಪಡೆದಿದೆ. ಹಾಗೆಯೇ ಈ ಸ್ಮಾರ್ಟ್‌ಫೋನ್ 5,000mAh ಬ್ಯಾಟರಿ ಬ್ಯಾಕ್‌ಅಪ್‌ ಒಳಗೊಂಡಿದ್ದು, ಅದಕ್ಕೆ ಪೂರಕವಾಗಿ 18W ಸಾಮರ್ಥ್ಯದ ಫಾಸ್ಟ್‌ ಚಾರ್ಜಿಂಗ್ ಸೌಲಭ್ಯವನ್ನು ಹೊಂದಿದೆ. ಇನ್ನು ಒಪ್ಪೋ ಸ್ಮಾರ್ಟ್‌ಪೋನಿನ ಕಾರ್ಯವೈಖರಿಯ ಬಗ್ಗೆ ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯೋಣ ಬನ್ನಿರಿ.


 • ಪಂಚ್‌ಹೋಲ್ ಡಿಸ್‌ಪ್ಲೇ ಮಾದರಿ

  ಒಪ್ಪೋ A52 ಸ್ಮಾರ್ಟ್‌ಫೋನ್‌ 1080x2400 ಪಿಕ್ಸೆಲ್‌ ಸ್ಕ್ರಿನ್ ರೆಸಲ್ಯೂಶನ್‌ ಸಾಮರ್ಥ್ಯದ 6.5 ಇಂಚಿನ ಡಿಸ್‌ಪ್ಲೇಯನ್ನ ಹೊಂದಿದೆ. ಈ ಡಿಸ್‌ಪ್ಲೇಯು ವಾಟರ್ ಡ್ರಾಪ್‌ ನಾಚ್‌ ಶೈಲಿಯೊಂದಿಗೆ ಪಂಚ್‌ಹೋಲ್ ಡಿಸ್‌ಪ್ಲೇ ರಚನೆಯನ್ನು ಪಡೆದಿದೆ. ಡಿಸ್‌ಪ್ಲೇ ಅನುಪಾತವು 19:9 ಆಗಿದೆ. ಡಿಸ್‌ಪ್ಲೇ 405 ppi ಪಿಕ್ಸೆಲ್‌ ಸಾಂದ್ರತೆ ಯನ್ನ ಒಳಗೊಂಡಿದ್ದು, ಓದುವಿಕೆ ಮತ್ತು ಮಲ್ಟಿಮೀಡಿಯಾ ಸ್ಟ್ರೀಮಿಂಗ್‌ಗಾಗಿ ಪೂರಕವಾಗಿದೆ. ಸ್ಕ್ರೀನ್‌ನಿಂದ ಬಾಹ್ಯ ಬಾಡಿಯ ನಡುವಿನ ಅಂತರವು 90.5 ರಷ್ಟಾಗಿದೆ. 'ಐ ಕೇರ್ ಮೋಡ್' ಸೌಲಭ್ಯವನ್ನು ಪಡೆದಿದ್ದು ಬ್ಲೂ ರೇ ಕಡಿಮೆ ಮಾಡುತ್ತದೆ. ಹಾಗೂ TÜV ರೈನ್‌ಲ್ಯಾಂಡ್ ಪ್ರಮಾಣೀಕೃತ ಡಿಸ್‌ಪ್ಲೇ ಇದಾಗಿದೆ. ಕಡಿಮೆ ಬೆಳೆಕಿನಲ್ಲಿ ಆರಾಮವಾಗಿ ವೀಕ್ಷಣೆ ಮಾಡಬಹುದಾಗಿದೆ.


 • ಕಂಫರ್ಟ್ ಹಿಡಿಕೆ

  ಒಪ್ಪೋ A52 ಸ್ಮಾರ್ಟ್‌ಫೋನ್‌ ರಚನೆಯು ಕಂಫರ್ಟ್‌ ಅನಿಸಲಿದ್ದು, ಒನ್-ಹ್ಯಾಂಡ್ ಬಳಕೆಗೆ ಗ್ರೀಪ್ ನೀಡುತ್ತದೆ. 192ಗ್ರಾಂ ತೂಕವನ್ನು ಹೊಂದಿದ್ದು, 8.9mmನಷ್ಟು ತೀಕ್ನೆಸ್‌ ಅನ್ನು ಪಡೆದಿದೆ. ಹಾಗೆಯೇ ಸ್ಕ್ರೀನ್‌ನಿಂದ ಬಾಹ್ಯ ಬಾಡಿಯ ನಡುವಿನ ಅಂತರವು ಶೇ. 90.5% ಆಗಿದ್ದು, ಆರಾಮದಾಯಕ ನಿರ್ವಹಣೆಗೆ ಸಫೋರ್ಟ್‌ ನೀಡುತ್ತದೆ. ಇನ್ನು ಈ ಫೋನ್ ಟ್ವಿನ್‌ಲೈಟ್‌ ಬ್ಲ್ಯಾಕ್ ಹಾಗೂ ಸ್ಟ್ರೀಮ್ ವೈಟ್ ಬಣ್ಣಗಳ ಆಯ್ಕೆಯನ್ನು ಪಡೆದಿದೆ. ಸೈಡ್-ಮೌಂಟೆಡ್ ಫಿಂಗರ್ಪ್ರಿಂಟ್ ಸ್ಕ್ಯಾನರ್ ನಿರ್ವಹಣೆ ಇದ್ದು, ಪವರ್ ಬಟನ್ ಮತ್ತು ಬಯೋಮೆಟ್ರಿಕ್ ಸ್ಕ್ಯಾನರ್‌ನ ಸಹ ಒದಗಿಸಲಾಗಿದೆ.


 • 6GB RAM ಮತ್ತು 128GB RAM

  ಒಪ್ಪೋ A52 ಸ್ಮಾರ್ಟ್‌ಫೋನ್‌ 6GB RAM ಮತ್ತು 128GB RAM ಸಾಮರ್ಥ್ಯದ ಆಯ್ಕೆಯನ್ನು ಪಡೆದಿದೆ. ಹೆಚ್ಚಿನ ಮೆಮೊರಿ ಬೇಡುವ ಹಾಗೂ ಮಲ್ಟಿಮೀಡಿಯಾ ಕೆಲಸಗಳು ಸುಗಮವಾಗಿ ನಡೆಯುತ್ತವೆ. ಹಾಗೆಯೇ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 665 ಪ್ರೊಸೆಸರ್ ಇದರಲ್ಲಿ ಕಾರ್ಯನಿರ್ವಹಿಸಲಿದೆ ಮತ್ತು ಆಂಡ್ರಾಯ್ಡ್ 10 ಆಧಾರಿತ ಆಪರೇಟಿಂಗ್ ಸಿಸ್ಟಮ್ ಬೆಂಬಲವು ಪಡೆದಿದೆ. Chrome ನಲ್ಲಿ 10 ಕ್ಕಿಂತ ಹೆಚ್ಚು ಸಕ್ರಿಯ ಟ್ಯಾಬ್‌ಗಳನ್ನು ಹೊಂದಬಹುದು ಮತ್ತು ವೀಡಿಯೊಗಳನ್ನು ವೀಕ್ಷಣೆಗೆ ಪೂರಕವಾಗಿದೆ. Instagram ನಲ್ಲಿ ಚಿತ್ರಗಳನ್ನು ಪೋಸ್ಟ್ ಮಾಡಲು, YouTube ನಲ್ಲಿ ವೀಡಿಯೊಗಳನ್ನು ಪ್ಲೇ ಮಾಡಲು ಮತ್ತು ಯಾವುದೇ ಕಾರ್ಯಕ್ಷಮತೆ ಮಂದಗತಿಯಿಲ್ಲದೆ Google ನಕ್ಷೆಗಳೊಂದಿಗೆ ನ್ಯಾವಿಗೇಟ್ ಮಾಡಲು ಇನ್ನೂ ಸಾಕಷ್ಟು ಮೆಮೊರಿ ಸಂಪನ್ಮೂಲಗಳನ್ನು ಹೊಂದಬಹುದು. ಬಾಹ್ಯವಾಗಿ 256GB ವರೆಗೆ ಮೆಮೊರಿ ವಿಸ್ತರಿಸಲು ಅವಕಾಶ ನೀಡಲಾಗಿದೆ.


 • 5000mAh ಬ್ಯಾಟರಿ

  ಒಪ್ಪೋ A52 ಸ್ಮಾರ್ಟ್‌ಫೋನ್‌ 5000mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್ ಅನ್ನು ಹೊಂದಿದ್ದು, ಇದರೊಂದಿಗೆ 18W ಫಾಸ್ಟ್‌ ಚಾರ್ಜಿಂಗ್ ಸೌಲಭ್ಯವನ್ನು ಪಡೆದಿದೆ. ಒಮ್ಮೆ ಪೂರ್ಣ ಚಾರ್ಜ್ ಮಾಡಿದರೇ ದೀರ್ಘಾವಧಿ ಬ್ಯಾಕ್‌ಅಪ್ ಸಾಮರ್ಥ್ಯ ಒದಗಿಸಲಿದೆ. ಹಾಗೆಯೇ ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್‌ಸ್ಪಾಟ್‌, ವೈಫೈ, ಬ್ಲೂಟೂತ್‌, ಸೌಲಭ್ಯಗಳನ್ನು ಒಳಗೊಂಡಿದೆ.


 • ಗೇಮಿಂಗ್‌ ವಿಶೇಷ

  ಒಪ್ಪೋ A52 ಸ್ಮಾರ್ಟ್‌ಫೋನ್‌ ಗೇಮ್‌ ಪ್ರಿಯರಿಗೆ ಹೆಚ್ಚು ಖುಷಿ ನೀಡುವ ಸೌಲಭ್ಯ ಒಳಗೊಂಡಿದೆ. ಈ ಫೋನಿನಲ್ಲಿ ಆಂತರಿಕ 'ಹೈಪರ್ ಬೂಸ್ಟ್' ತಂತ್ರಜ್ಞಾನವಿದೆ, ಇದು ಸಂಪನ್ಮೂಲಗಳನ್ನು ಸಮರ್ಥವಾಗಿ ಹಂಚುವ ಮೂಲಕ ಸಿಪಿಯು-ಜಿಪಿಯು ಸಂಸ್ಕರಣಾ ವೇಗ ಮತ್ತು ರಾಮ್ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ. ಒಟ್ಟಾರೆ ಸಿಸ್ಟಮ್‌ನ ಕಾರ್ಯಕ್ಷಮತೆಯ ಮೇಲೆ ಯಾವುದೇ ಪರಿಣಾಮ ಬೀರದಂತೆ ಹ್ಯಾಂಡ್‌ಸೆಟ್ ಹಿನ್ನೆಲೆಯಲ್ಲಿ ಆಟದ ಗ್ರಾಫಿಕ್ಸ್ ಮತ್ತು ಸಕ್ರಿಯ ಅಪ್ಲಿಕೇಶನ್‌ಗಳನ್ನು ಉತ್ತಮವಾಗಿ ನಿರ್ವಹಿಸಲು ಅನುವು ಮಾಡಿಕೊಡುತ್ತದೆ. Asphalt 9, Injustice 2, PUBG ಮತ್ತು Call Of Duty ಆಟಗಳಿಗೆ ಸಪೋರ್ಟ್ ಹೊಂದಿದೆ.


 • ಆಡಿಯೋ ಸ್ಪೆಷಲ್

  ಒಪ್ಪೋ A52 ಸ್ಮಾರ್ಟ್‌ಫೋನ್‌ ಗೇಮಿಂಗ್, ಆಡಿಯೊ ಮತ್ತು ವಿಡಿಯೋ ಪ್ಲೇಬ್ಯಾಕ್ ಅನುಭವವು ಮೇಲಿನ ಮತ್ತು ಕೆಳಭಾಗದಲ್ಲಿರುವ ಅಲ್ಟ್ರಾ-ಲೈನ್ ಡ್ಯುಯಲ್ ಸ್ಪೀಕರ್‌ಗಳ ಮೂಲಕ ಜೋರಾಗಿ ಮತ್ತು ಸ್ಪಷ್ಟವಾದ ಆಡಿಯೊವನ್ನು ಪಂಪ್ ಮಾಡುವ ಮೂಲಕ ತಲ್ಲೀನವಾಗುವಂತೆ ಮಾಡುತ್ತದೆ. ಡ್ಯುಯಲ್-ಸ್ಪೀಕರ್ ಸೆಟಪ್ ಮಲ್ಟಿಮೀಡಿಯಾ ಪ್ಲೇಬ್ಯಾಕ್ಗಾಗಿ ತಲ್ಲೀನಗೊಳಿಸುವ ಸರೌಂಡ್ ಧ್ವನಿಯನ್ನು ಉತ್ಪಾದಿಸುತ್ತದೆ. ಆಡಿಯೊ ಅನುಭವವನ್ನು ವರ್ಧಿಸಲು 'ಎನ್‌ಕೋ ಡಬ್ಲ್ಯು 11' ವೈರ್‌ಲೆಸ್ ಇಯರ್‌ಫೋನ್‌ಗಳಲ್ಲಿ ನಿಮ್ಮ ಕೈಗಳನ್ನು ಸಹ ನೀವು ಪಡೆಯಬಹುದು. ಟೈಟಾನಿಯಂ-ಲೇಪಿತ ಡಯಾಫ್ರಾಮ್ನೊಂದಿಗೆ 8 ಎಂಎಂ ಡೈನಾಮಿಕ್ ಸ್ಪೀಕರ್ ನಿಂದ ನಡೆಸಲ್ಪಡುವ ಡಬ್ಲ್ಯು 11 ಬಾಸ್-ಥಂಪಿಂಗ್ ಆಡಿಯೊವನ್ನು ಪ್ರಾಚೀನ ಧ್ವನಿ ಗುಣಮಟ್ಟದೊಂದಿಗೆ ಉತ್ಪಾದಿಸುತ್ತದೆ.


 • ಕ್ವಾಡ್‌ ಲೆನ್ಸ್‌ ಕ್ಯಾಮೆರಾ

  ಈ ಸ್ಮಾರ್ಟ್‌ಫೋನಿನ ಪ್ರಮುಖ ಆಕರ್ಷಣೆ ಕ್ವಾಡ್-ಲೆನ್ಸ್ ಕ್ಯಾಮೆರಾ ಸೆಟ್‌ಅಪ್ ಪಡೆದಿರುವುದು. ಸಿ-ಆಕಾರದ ಕ್ಯಾಮೆರಾ ಮಾಡ್ಯೂಲ್ ರಚನೆ ಇದ್ದು, ಮುಖ್ಯ ಕ್ಯಾಮೆರಾವು 12 ಎಂಪಿ ಅಲ್ಟ್ರಾ ಹೆಚ್‌ಡಿ ಸೆನ್ಸಾರ್ ಪಡೆದಿದೆ. ಸೆಕೆಂಡರಿ ಕ್ಯಾಮೆರಾವು 8 ಎಂಪಿ ಅಲ್ಟ್ರಾ-ವೈಡ್ ಆಂಗಲ್ ಲೆನ್ಸ್‌ನೊಂದಿಗೆ 119.1 ° ಫೀಲ್ಡ್-ಆಫ್-ವ್ಯೂನೊಂದಿಗೆ ಜೋಡಿಸಲ್ಪಟ್ಟಿದೆ. ಹಾಗೆಯೇ ತೃತೀಯ ಹಾಗೂ ನಾಲ್ಕನೇ ಕ್ಯಾಮೆರಾಗಳು 2 ಎಂಪಿ ಸೆನ್ಸಾರ್‌ ಬಲವನ್ನು ಪಡೆದಿವೆ. ಇನ್ನು ಸೆಲ್ಫಿಗಾಗಿ 16ಎಂಪಿ ಸಾಮರ್ಥ್ಯದ ಸೆನ್ಸಾರ್ ಒದಗಿಸಲಾಗಿದೆ. ಬ್ಯೂಟಿಫಿಕೇಶನ್ ಮೋಡ್ ಆಯ್ಕೆ ನೀಡಲಾಗಿದೆ. ಅಲ್ಟ್ರಾ ಲೈಟ್ ಮೋಡ್ 2.0 ಆಯ್ಕೆ ಸಹ ಇದೆ. ಕಡಿಮೆ ಬೆಳಕಿನಲ್ಲಿಯೂ ಉತ್ತಮ ಫೋಟೊ ಮೂಡಿಬರಲು ಸಹಾಯಕ.


 • ಬೆಲೆ, ಲಭ್ಯತೆ ಹಾಗೂ ಆಫರ್

  ಒಪ್ಪೋ A52 ಸ್ಮಾರ್ಟ್‌ಫೋನ್‌ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಂತಹ ಆನ್‌ಲೈನ್ ಸೈಟ್‌ಗಳಲ್ಲಿ 6 ಜಿಬಿ + 128 ಜಿಬಿ ವೇರಿಯಂಟ್ ಕೇವಲ 16,990ರೂ. ಆಗಿದೆ. ಮುಂದಿನ ದಿನಗಳಲ್ಲಿ 4 + 128 ಜಿಬಿ ಮತ್ತು 8 + 128 ಜಿಬಿ ಸ್ಟೋರೇಜ್ ಆಯ್ಕೆಯಲ್ಲಿಯೂ ಲಭ್ಯವಾಗಲಿದೆ. ಇನ್ನು ಗ್ರಾಹಕರು ಬ್ಯಾಂಕ್ ಆಫ್ ಬರೋಡಾ ಕ್ರೆಡಿಟ್ ಕಾರ್ಡ್‌ಗಳು ಮತ್ತು ಫೆಡರಲ್ ಬ್ಯಾಂಕ್ ಡೆಬಿಟ್ ಕಾರ್ಡ್‌ಗಳಲ್ಲಿ 5% ಕ್ಯಾಶ್‌ಬ್ಯಾಕ್ ಪಡೆಯಬಹುದು. ಕ್ರೆಡಿಟ್ ಕಾರ್ಡ್ ಇಎಂಐ ಮತ್ತು ಡೆಬಿಟ್ ಕಾರ್ಡ್ ಇಎಂಐ ವಹಿವಾಟಿನಲ್ಲಿ ನೀವು 6 ತಿಂಗಳವರೆಗೆ ಯಾವುದೇ ವೆಚ್ಚದ ಇಎಂಐ ಪ್ರಯೋಜನಗಳನ್ನು ಸಹ ಪಡೆಯಬಹುದು. ಇದಲ್ಲದೆ, ಬಜಾಜ್ ಫಿನ್‌ಸರ್ವ್, ಐಡಿಎಫ್‌ಸಿ ಫಸ್ಟ್ ಬ್ಯಾಂಕ್, ಹೋಮ್ ಕ್ರೆಡಿಟ್, ಎಚ್‌ಡಿಬಿ ಫೈನಾನ್ಷಿಯಲ್ ಸರ್ವೀಸಸ್, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್ ಗ್ರಾಹಕರಿಗೆ ಈ ಫೋನ್ ಖರೀದಿಯಲ್ಲಿ ಹಲವಾರು ಆಕರ್ಷಕ ಇಎಂಐ ಆಯ್ಕೆಗಳಿವೆ.
ಒಪ್ಪೊ ಕಂಪನಿಯು ಈಗಾಗಲೇ ಹಲವು ಶ್ರೇಣಿಯಲ್ಲಿ ಸ್ಮಾರ್ಟ್‌ಫೋನ್ ಪರಿಚಯಿಸಿದೆ. ಅವುಗಳಲ್ಲಿ ಬಹುತೇಕ ಸ್ಮಾರ್ಟ್‌ಫೋನ್‌ಗಳು ಗ್ರಾಹಕರ ಕೈಗೆಟಕುವ ದರವನ್ನು ಹೊಂದಿರುವುದು ಪ್ರಮುಖ ಆಕರ್ಷಣೆ ಆಗಿದೆ. ಇದರೊಂದಿಗೆ ಹೊಸ ಅಪ್‌ಡೇಟ್ ಓಎಸ್‌, ಪ್ರೊಸೆಸರ್ ಸೇರಿದಂತೆ ವಿಶೇಷ ಫೀಚರ್ಸ್‌ಗಳು ಆಕರ್ಷಕಣೆಯ ಇನ್ನೊಂದು ಭಾಗವಾಗಿವೆ. ಇದೇ ರೀತಿಯಲ್ಲಿ ಸಂಸ್ಥೆಯು ಇದೀಗ ಒಪ್ಪೋ A52 ಸ್ಮಾರ್ಟ್‌ಫೋನ್ ಹೊಸದಾಗಿ ಘೋಷಿಸಿದೆ.

 
ಹೆಲ್ತ್