Back
Home » ಇತ್ತೀಚಿನ
BBMP: ಕೊರೊನಾ ಪರಿಣಾಮ ಸಾರ್ವಜನಿಕರಿಗೆ ಆನ್‌ಲೈನ್ ಮೂಲಕ ದೂರು ಸಲ್ಲಿಸಲು ಸೂಚನೆ!
Gizbot | 8th Jul, 2020 05:20 PM
 • ಬೆಂಗಳೂರು ನಗರ

  ಬೆಂಗಳೂರು ನಗರದಲ್ಲಿ ಕೊರೊನಾ ವ್ಯಾಪಕವಾಗುತ್ತಿರುವ ಹಿನ್ನಲೆಯಲ್ಲಿ ಬಿಬಿಎಂಪಿ ಕೇಂದ್ರ ಕಚೇರಿಗೆ 9/7/2020 ರಿಂದ 24/7/2020 ವರೆಗೆ ಸಾರ್ವಜನಿಕ ಪ್ರವೇಶವನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಹೀಗಾಗಿ ಸಾರ್ವಜನಿಕರು ತಮ್ಮ ಕೆಲಸಗಳನ್ನು ಸಾಧ್ಯವಾಗದಷ್ಟು ಪಾಲಿಕೆಯ ಅಧಿಕೃತ ಆನ್‌ಲೈನ್‌ ತಾಣಗಳನ್ನು ಬಳಕೆ ಮಾಡಬೇಕು ಎಂದು ಟ್ವಿಟ್ಟನಲ್ಲಿ ಅವರು ಹೇಳಿದ್ದಾರೆ.

  ಕೊರೊನಾ ವೈರಸ್‌ ಹೆಮ್ಮಾರಿ ಹರಡುವುದನ್ನು ನಿಯಂತ್ರಣಸಲು ಸರ್ಕಾರ ಲಾಕ್‌ಡೌನ್ ಅಸ್ತ್ರ ಬಳಸಲಾಗಿದೆ. ಅಗಾಗ್ಯೂ ಕೊರೊನಾ ತನ್ನ ಅಟ್ಟಹಾಸ ಕಡಿಮೆ ಮಾಡಿಲ್ಲ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಸೂಚನೆಗಳ ಪಾಲನೆ ಜೊತೆಗೆ ರಾಜ್ಯದಲ್ಲಿ ಸಂಡೇ ಲಾಕ್‌ಡೌನ್ ಘೋಷಿಸಿದೆ. ಇದರೊಂದಿಗೆ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿದೆ.


 • ಸೇವೆ

  ಸಾರ್ವಜನಿಕರ ಅನುಕೂಲಕ್ಕಾಗಿ ಸಕಾಲ ಯೋಜನೆಯಡಿ / ಆನ್‌ಲೈನ್‌ಯಲ್ಲಿ ಹಲವಾರು ಸೇವೆಗಳನ್ನು ಒದಗಿಸಲಾಗುತ್ತದೆ. ಈ ಆನ್‌ಲೈನ್ ಸೇವೆಗಳನ್ನು ಸಾರ್ವಜನಿಕರು ಹೆಚ್ಚಿನ ಪ್ರಮಾಣದಲ್ಲಿ ಉಪಯೋಗಿಸಿಕೊಳ್ಳಬಹುದಾಗಿರುತ್ತದೆ.


 • ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ

  ಸಾರ್ವಜನಿಕರು ತಮ್ಮ ಕುಂದುಕೊರತೆಗಳ ಬಗ್ಗೆ ಅಹವಾಲುಗಳನ್ನು ಸಲ್ಲಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಛೇರಿಯ ದ್ವಾರದ ಬಳಿ ಇಡಲಾಗಿರುವ Drop ಬಾಕ್ಸ್‌ನಲ್ಲಿ ಸಲ್ಲಿಸಬಹುದಾಗಿರುತ್ತದೆ. ಹಾಗೆಯೇ ಪಾಲಿಕೆಯ ಅಧಿಕೃತ ಆನ್‌ಲೈನ್ ತಾಣಗಳ ಮೂಲಕ ಸಹ ಸಲ್ಲಿಸಬಹುದಾಗಿರುತ್ತದೆ.

  ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಛೇರಿಯ ಅಧಿಕೃತ ಆನ್‌ಲೈನ್‌ ತಾಣಗಳ ವಿಳಾಸಗಳು

  * www.bbmp.sahaya.in
  * Facebook: https://www.facebook.com/bbmp.comm1/
  * Twitter:@bbmpcomm
  * Email: contactusbbmp@gmail.com
  * Whatsapp: 9480685700
ರಾಜ್ಯದಲ್ಲಿ ಕೊರೊನಾ ವೈರಸ್‌ ಪ್ರಕರಣಗಳು ಹೆಚ್ಚಾಗುತ್ತಿದ್ದು, ಮುಖ್ಯವಾಗಿ ಬೆಂಗಳೂರು ನಗರ ಕೊರೊನಾ ಕೇಕೆಗೆ ನಲುಗಿ ಹೋಗಿದೆ. ಕೊರೊನಾ ಗಣನೀಯವಾಗಿ ಹೆಚ್ಚಾಗುತ್ತಿರುವುದರಿಂದ ಬಿಬಿಎಂಪಿ ಕೇಂದ್ರ ಕಚೇರಿಗೆ 9/7/2020 ರಿಂದ 24/7/2020 ವರೆಗೆ ಸಾರ್ವಜನಿಕ ಪ್ರವೇಶವನ್ನು ನಿಷೇಧಿಸಲಾಗಿದೆ ಎಂದು ಬಿಬಿಎಂಪಿ ಮೇಯರ್ ಗೌತಮ್ ಕುಮಾರ ಟ್ವಿಟ್ ಮಾಡಿದ್ದಾರೆ.

 
ಹೆಲ್ತ್