Back
Home » ಇತ್ತೀಚಿನ
ಸುರಕ್ಷತೆಯ ದೃಷ್ಟಿಯಿಂದ ಪ್ಲೇ ಸ್ಟೋರ್‌ನಲ್ಲಿ 11 ಆಪ್‌ಗಳನ್ನ ಕಿತ್ತೆಸೆದ ಗೂಗಲ್‌ !
Gizbot | 13th Jul, 2020 02:00 PM
 • ಗೂಗಲ್‌

  ಹೌದು, ಸರ್ಚ್‌ ಇಂಜಿನ್‌ ದೈತ್ಯ ಗೂಗಲ್‌ ತನ್ನ ಪ್ಲೇ ಸ್ಟೋರ್‌ನಿಂದ 11 ಅಪ್ಲಿಕೇಶನ್‌ಗಳನ್ನ ಕಿತ್ತೆಸೆದಿದೆ. ಅದರಲ್ಲೂ ಆಂಡ್ರಾಯ್ಡ್ ಮಾಲ್ವೇರ್‌ಗಳಲ್ಲಿ ಒಂದಾದ ಜೋಕರ್‌ ಮತ್ತೇ ಗೂಗಲ್ ಪ್ಲೇ ಸ್ಟೋರ್‌ಗೆ ಮರಳಿದೆ. ಈ ಜೋಕರ್‌ ಮಾಲ್ವೇರ್‌ ಹನ್ನೊಂದು ಅಪ್ಲಿಕೇಶನ್‌ಗಳಲ್ಲಿ ಕಂಡುಬಂದಿದ್ದು, ಆ ಎಲ್ಲಾ ಅಪ್ಲಿಕೇಶನ್‌ಗಳನ್ನ ಗೂಗಲ್‌ ಪ್ಲೇ ಸ್ಟೋರ್‌ನಿಂದ ಕಿತ್ತು ಹಾಕಲಾಗಿದೆ. ಅಲ್ಲದೆ ಭದ್ರತಾ ಸಂಶೋಧನಾ ಸಂಸ್ಥೆ ಚೆಕ್ ಪಾಯಿಂಟ್ ಹೇಳುವಂತೆ, ಜೋಕರ್ ಮಾಲ್‌ವೇರ್‌ನ ಪ್ರಮುಖ ಪ್ರಕಾರಗಳಲ್ಲಿ ಒಂದಾಗಿದೆ, ಅದು ಅದರ ಕೋಡ್‌ನಲ್ಲಿನ ಸಣ್ಣ ಬದಲಾವಣೆಗಳ ಪರಿಣಾಮವಾಗಿ ಗೂಗಲ್ ಪ್ಲೇ ಸ್ಟೋರ್‌ಗೆ ಹೋಗುತ್ತದೆ. ಇದು ಪ್ಲೇ ಸ್ಟೋರ್‌ನ ಸುರಕ್ಷತೆಗೆ ದಕ್ಕೆ ತರಲಿದೆ ಎನ್ನಲಾಗ್ತಿದೆ. ಇದಲ್ಲದೆ ಗೂಗಲ್‌ ಪ್ಲೇ ಸ್ಟೋರ್‌ನಿಂದ ಯಾವೆಲ್ಲಾ ಅಪ್ಲಿಕೇಶನ್‌ಗಳನ್ನ ಕಿತ್ತುಹಾಕಲಾಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿದುಕೊಳ್ಳೋಣ ಓದಿರಿ.


 • ಗೂಗಲ್‌

  ಸದ್ಯ ಗೂಗಲ್‌ ತನ್ನ ಪ್ಲೇ ಸ್ಟೊರ್‌ನಲ್ಲಿ ಕೆಲವು ಆಪ್‌ಗಳಿಂದ ಗ್ರಾಹಕರಿಗೆ ಅನ್ಯಾಯವಾಗುತ್ತಿರುವುದನ್ನು ಪತ್ತೆ ಹಚ್ಚಿದೆ. ಅದರಲ್ಲೂ ಬಳಕೆದಾರರ ಗಮನಕ್ಕೆ ಬಾರದೇಯೆ ಅವರಿಂದ ಬಿಲ್ಲಿಂಗ್‌ ಮಾಡುತ್ತಿರುವ ಕೆಲವು ಅಪ್ಲಿಕೇಶನ್‌ಗಳನ್ನ ಇದೀಗ ಕಿತ್ತೆಸೆಯಲಾಗಿದೆ. ಸದ್ಯ ಹನ್ನೊಂದು ಅಪ್ಲಿಕೇಶನ್‌ಗಳನ್ನ ತೆಗೆದುಹಾಕಲಾಗಿದ್ದು, ಇವುಗಳಲ್ಲಿ ಜೋಕರ್‌ ಮಾಲ್ವೇರ್‌ ಕಂಡುಬಂದಿದೆ. ಈ ಹಿಂದಿನ ಹ್ಯಾಕರ್‌ಗಳು ಗೂಗಲ್‌ನಿಂದ ಪತ್ತೆಹಚ್ಚುವುದನ್ನು ತಪ್ಪಿಸಲು ಪಿಸಿ ಬೆದರಿಕೆ ಭೂದೃಶ್ಯದಿಂದ ಹಳೆಯ ತಂತ್ರವನ್ನು ಅಳವಡಿಸಿಕೊಂಡಿದ್ದಾರೆ. ದುರುದ್ದೇಶಪೂರಿತ ಮಾಲ್ವೇರ್‌ಗಳಿಂದ ಬಳಕೆದಾರರಿಗೆ ತೊಂದರೆ ಆಗಲಿದೆ.


 • ಗೂಗಲ್‌

  ಅಲ್ಲದೆ ಈ ಮಾಲ್ವೇರ್‌ಗಳು ಇತರೆ ಆಪ್‌ಗಳನ್ನ ಮರೆ ಮಾಡುವ ಮೂಲಕ ತಮ್ಮ ಚಮತ್ಕಾ ತೊರುತ್ತದೆ. ಅಲ್ಲದೆ ಬಳಕೆದರರ ಅಕೌಂಟ್‌ಗಳನ್ನ ಹ್ಯಾಕ್‌ ಮಾಡಲು ಸುಲಭ ದಾರಿ ಮಾಡಿಕೊಡಲಿವೆ. ಇದೇ ಕಾರಣಕ್ಕೆ ಇವುಗಳನ್ನ ತೆಗೆದುಹಾಕಲಾಗಿದೆ. ಇದಲ್ಲದೆ ಕಾನೂನುಬದ್ಧ ಅಪ್ಲಿಕೇಶನ್‌ಗಳನ್ನೇ ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಕಾಣದಂತೆ ಮಾರೆ ಮಾಡುವ ಈ ಅಪ್ಲಿಕೇಶನ್‌ಗಳು ಒಮ್ಮೆ ಇನ್‌ಸ್ಟಾಲ್‌ ಆದ ನಂತರ, ಬಳಕೆದಾರರು ತಿಳಿಯದೆ ಪ್ರೀಮಿಯಂ ಸೇವೆಗಳಿಗೆ ಚಂದಾದಾರರಾಗುವಂತೆ ಮಾಡಿ ಬಿಡುತ್ತವೆ. ಇದರಿಂದ ಬಳಕೆದಾರರು ತಮ್ಮ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್‌ಗಳಿಂದ ಹಣವನ್ನು ಕಡಿತಗೊಳಿಸಿದಾಗ ಅವರಿಗೆ ಬಿಲ್ಲಿಂಗ್ ವಂಚನೆ ತಿಳಿಯಲಿದೆ.


 • ಗೂಗಲ್‌

  ಇದೇ ಕಾರಣಕ್ಕೆ ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಈಗಾಗಲೇ ಸುಮಾರು 500,000 ಬಾರಿ ಡೌನ್‌ಲೋಡ್ ಮಾಡಲಾದ 11 ಜೋಕರ್-ಸೋಂಕಿತ ಅಪ್ಲಿಕೇಶನ್‌ಗಳನ್ನು ಗೂಗಲ್ ಇತ್ತೀಚೆಗೆ ತೆಗೆದುಹಾಕಿದೆ. ಈ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಿದ ಬಳಕೆದಾರರು ಸಹ ಅವುಗಳನ್ನುಡಿಲಿಟ್‌ ಮಾಡುವುದು ಉತ್ತಮ ಎಂದು ಹೇಳಲಾಗ್ತಿದೆ. ಸದ್ಯ ಗೂಗಲ್‌ ತನ್ನ ಪ್ಲೇ ಸ್ಟೋರ್‌ನಿಂದ ಕಿತ್ತು ಹಾಕಿದ ಅಪ್ಲಿಕೇಶನ್‌ಗಳ ಪಟ್ಟಿ ಇಲ್ಲಿದೆ ನೋಡಿ. Relaxation Message, Memory Game, Loving Message, Friend SMS app, Contact Message, Compress Image, App Locker, Recover File, Remind Alarm - Alarm & Timer & Stopwatch App, Cheery Message.
ಇದು ಟೆಕ್ನಾಲಜಿ ಜಮಾನ. ಇಲ್ಲಿ ಯಾವುದೇ ಕೆಲಸ ಕಾರ್ಯವಾಗ ಬೇಕಿದ್ದರೂ ಆಪ್‌ಗಳ ಮೊರ ಹೋಗುವ ಮಟ್ಟಿಗೆ ದುನಿಯಾ ಬದಲಾಗಿ ಹೋಗಿದೆ. ಇನ್ನು ನಿಮಗೆಲ್ಲಾ ತಿಳಿದಿರುವ ಹಾಗೇ ನಿಮಗೆ ಯಾವುದೇ ಮಾದರಿಯಾ ಆಪ್‌ಗಳು ಬೇಕಿದ್ದರೂ ಆಪಲ್‌ನ ಆಪ್‌ ಸ್ಟೋರ್‌ ಇಲ್ಲವೇ ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಲಭ್ಯವಾಗಲಿವೆ. ಅದರಲ್ಲೂ ಸರ್ಚ್‌ ಇಂಜಿನ್‌ ದೈತ್ಯ ಗೂಗಲ್‌ ಭದ್ರತೆ ಮತ್ತು ಸುರಕ್ಷತೆಯ ದೃಷ್ಟಿಯಿಂದ ಅಪ್ಲಿಕೇಸನ್‌ಗಳ ಮೇಲೆ ಕಣ್ಣಿಟ್ಟಿರುತ್ತದೆ. ಯಾವುದೇ ಒಂದು ಅಪ್ಲಿಕೇಶನ್‌ನಿಂದ ಬಳಕೆದಾರರಿಗೆ ದಕ್ಕೆ ಆಗಲಿದೆ ಎಂದು ತಿಳಿದರೆ ಕ್ಷಣಾರ್ಧದಲ್ಲಿಯೇ ಅದನ್ನು ಕಿತ್ತೆಸೆಯುತ್ತದೆ. ಸದ್ಯ ಇದೀಗ ಗೂಗಲ್‌ ತನ್ನ ಪ್ಲೇ ಸ್ಟೋರ್‌ನಿಂದ 11 ಆಪ್‌ಗಳನ್ನ ಕಿತ್ತೆಸೆದಿದೆ.

 
ಹೆಲ್ತ್