Back
Home » ಸುದ್ದಿ
ಶೈತ್ಯಾಗಾರದಲ್ಲಿದ್ದ ಸೀಫುಡ್ ಪ್ಯಾಕೆಟ್‌ಗಳಲ್ಲಿಯೂ ಕೊರೊನಾ ವೈರಸ್
Oneindia | 12th Aug, 2020 01:36 PM

ಬೀಜಿಂಗ್, ಆಗಸ್ಟ್ 12: ಶೀತಲೀಕರಣಗೊಳಿಸಿದ ಸಮುದ್ರ ಖಾದ್ಯ ಪ್ಯಾಕೆಟ್‌ಗಳಲ್ಲಿಯೂ ನಾವೆಲ್ ಕೊರೊನಾ ವೈರಸ್ ಇರುವುದು ಪತ್ತೆಯಾಗಿದೆ. ಬಂದರು ನಗರ ದಾಲಿಯಾನ್‌ನಿಂದ ಆಮದು ಮಾಡಿಕೊಳ್ಳಲಾದ ಫ್ರೋಜನ್ ಸೀಫುಡ್‌ನ ಪ್ಯಾಕೆಟ್‌ಗಳಲ್ಲಿ ಕೊರೊನಾ ವೈರಸ್ ಇರುವುದನ್ನು ಚೀನಾ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ ಎಂದು ಸ್ಥಳೀಯ ಸರ್ಕಾರ ತಿಳಿಸಿದೆ.

ಪೂರ್ವ ಶಾಂಡೊಂಗ್ ಪ್ರಾಂತ್ಯದ ನಗರ ಯಾಂಟೈನಲ್ಲಿರುವ ಮೂರು ಕಂಪೆನಿಗಳು ಖರೀಸಿದ ಶೀತಲೀಕರಿಸಿದ ಸೀಫುಡ್ ಪ್ಯಾಕೆಟ್‌ನ ಹೊರಭಾಗದಲ್ಲಿ ವೈರಸ್ ಕಂಡುಬಂದಿದೆ. ದಾಲಿಯಾನ್‌ಗೆ ಬಂದಿಳಿದ ಸೀಫುಡ್‌ಅನ್ನು ಹಡಗಿನಲ್ಲಿ ತರಿಸಿಕೊಳ್ಳಲಾಗಿತ್ತು ಎಂದು ಯಾಂಟೈ ನಗರ ಸರ್ಕಾರ ತಿಳಿಸಿದೆ. ಆದರೆ ಈ ಪ್ಯಾಕೆಟ್‌ಗಳ ಮೂಲವನ್ನು ಬಹಿರಂಗಪಡಿಸಿಲ್ಲ.

200 ಕೊರೊನಾ ಸೋಂಕಿತ ತಾಯಂದಿರು: 'ಕರುಳ ಬಳ್ಳಿ' ದಾಟದ ಕೊರೊನಾ

ಈ ರೀತಿ ಸಮುದ್ರ ಖಾದ್ಯಗಳ ಪ್ಯಾಕೇಟ್‌ನಲ್ಲಿ ಕೊರೊನಾ ವೈರಸ್ ಇರುವುದು ಪತ್ತೆಯಾಗಿರುವುದು ಇದು ಎರಡನೆಯ ಬಾರಿ. ಲಿಯಾನಿಂಗ್ ಪ್ರಾಂತ್ಯದ ಮುಖ್ಯ ಬಂದರು ನಗರ ದಾಲಿಯಾನ್‌ನ ಸುಂಕ ಅಧಿಕಾರಿಗಳು ಜುಲೈ ತಿಂಗಳಲ್ಲಿ ಈಕ್ವೆಡಾರ್‌ನಿಂದ ಆಮದು ಮಾಡಿಕೊಂಡಿದ್ದ ಸೀಗಡಿಯ ಪ್ಯಾಕೆಟ್‌ಗಳ ಮೇಲೆ ಕೊರೊನಾ ವೈರಸ್ ಇರುವುದನ್ನು ಪತ್ತೆಹಚ್ಚಿದ್ದರು. ಇದರ ಬಳಿಕ ಈಕ್ವೆಡಾರ್‌ನ ಮೂರು ಮುಖ್ಯ ಸೀಗಡಿ ಉತ್ಪಾದಕ ಕಂಪೆನಿಗಳಿಂದ ಆಮದು ಮಾಡಿಕೊಳ್ಳುವುದನ್ನು ಸ್ಥಗಿತಗೊಳಿಸಲಾಗಿತ್ತು.

ಬೆಂಗಳೂರಲ್ಲಿ 2 ಕೊವಿಡ್ ಆರೈಕೆ ಕೇಂದ್ರಗಳನ್ನು ತೆರೆಯಲು ಬಿಬಿಎಂಪಿ ನಿರ್ಧಾರ

ವುಹಾನ್ ನಗರದಲ್ಲಿ ಸಮುದ್ರ ಆಹಾರ ಖಾದ್ಯಗಳು ಹಾಗೂ ವನ್ಯಜೀವಿ ಆಹಾರಗಳನ್ನು ಮಾರಾಟ ಮಾಡುವ ಮಾರುಕಟ್ಟೆಯಿಂದಲೇ ಕಳೆದ ವರ್ಷ ಕೊರೊನಾ ವೈರಸ್ ಸೋಂಕು ಹರಡಿದೆ ಎನ್ನಲಾಗಿದೆ. ಶೈತ್ಯಾಗಾರದಲ್ಲಿ ಇರಿಸಿದ ಆಹಾರ ಪ್ಯಾಕೆಟ್‌ಗಳ ಮೇಲೆ ಕೊರೊನಾ ವೈರಸ್ ಜೀವಂತವಾಗಿರುವುದು, ಅತಿ ಶೀತದ ವಾತಾವರಣದಲ್ಲಿಯೂ ವೈರಸ್ ಬದುಕಬಲ್ಲದು ಎಂಬುದನ್ನು ದೃಢಪಡಿಸಿದೆ.

 
ಹೆಲ್ತ್