Back
Home » ಸುದ್ದಿ
ಒಎನ್‌ಜಿಸಿಯ 31 ಉದ್ಯೋಗಿಗಳಿಗೆ ಕೊರೊನಾ ವೈರಸ್ ಪಾಸಿಟಿವ್
Oneindia | 12th Aug, 2020 02:20 PM

ಮುಂಬೈ, ಆಗಸ್ಟ್ 12: ಮುಂಬೈನ ತೈಲ ಮತ್ತು ನೈಸರ್ಗಿಕ ಅನಿಲ ನಿಗಮದ (ಒಎನ್‌ಜಿಸಿ) ಸಾಗರ ತೀರದ ಘಟಕದಲ್ಲಿ ಕೆಲಸ ಮಾಡುತ್ತಿರುವ 91 ಉದ್ಯೋಗಿಗಳ ಪೈಕಿ 31 ಮಂದಿಯಲ್ಲಿ ಕೊರೊನಾ ವೈರಸ್ ಪಾಸಿಟಿವ್ ಕಂಡುಬಂದಿದೆ.

ಈ 31 ಉದ್ಯೋಗಿಗಳು ಒಎನ್‌ಜಿಸಿ ಘಟಕದಲ್ಲಿ ಸುಮಾರು 15 ದಿನ ಕಳೆದಿದ್ದಾರೆ. ಮಾಹಿಮ್‌ನ ಆಸ್ಪತ್ರೆಯಲ್ಲಿ ನಡೆದ ಕೋವಿಡ್ ಪರೀಕ್ಷೆಯಲ್ಲಿ ಅವರಲ್ಲಿ ಕೊರೊನಾ ವೈರಸ್ ಇರುವುದು ಪತ್ತೆಯಾಗಿದೆ ಎಂದು ಜಿ ಉತ್ತರ ವಾರ್ಡ್‌ನ ಸಹಾಯಕ ಪಾಲಿಕೆ ಆಯುಕ್ತ ಕಿರಣ್ ದಿಘಾವ್ಕರ್ ತಿಳಿಸಿದ್ದಾರೆ.

ಶೈತ್ಯಾಗಾರದಲ್ಲಿದ್ದ ಸೀಫುಡ್ ಪ್ಯಾಕೆಟ್‌ಗಳಲ್ಲಿಯೂ ಕೊರೊನಾ ವೈರಸ್

ಮುಂಬೈ ಕರಾವಳಿ ಪ್ರದೇಶದಿಂದ ಸುಮಾರು 160 ಕಿ.ಮೀ. ದೂರದಲ್ಲಿರುವ ಅರಬ್ಬಿ ಸಮುದ್ರದ ನೀಲಂ ಕಾಂಪ್ಲೆಕ್ಸ್‌ನಲ್ಲಿ ಒಎನ್‌ಜಿಸಿಯ ಸಾಗರತೀರ ತೈಲ ಘಟಕ ಕಾರ್ಯನಿರ್ಹಿಸುತ್ತಿದೆ. ಈ ಉದ್ಯೋಗಿಗಳಿಗೆ ಮಾಹಿಮ್‌ನ ರಹೇಜಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟಕದ ಕೆಲವರಲ್ಲಿ ಕೊರೊನಾ ವೈರಸ್ ಲಕ್ಷಣ ಕಂಡುಬಂದಿದ್ದರಿಂದ ಪ್ರತಿ ಉದ್ಯೋಗಿಯನ್ನೂ ಪರೀಕ್ಷೆಗೆ ಒಳಪಡಿಸಲಾಗಿತ್ತು. ಅವರಲ್ಲಿ 31 ಮಂದಿಯಲ್ಲಿ ಪಾಸಿಟಿವ್ ಬಂದಿದೆ.

200 ಕೊರೊನಾ ಸೋಂಕಿತ ತಾಯಂದಿರು: 'ಕರುಳ ಬಳ್ಳಿ' ದಾಟದ ಕೊರೊನಾ

ಜಿ ನಾರ್ತ್ ವಾರ್ಡ್‌ನಲ್ಲಿ ಇದುವರೆಗೂ 6,613 ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾಗಿದ್ದು, ಅವರಲ್ಲಿ 1908 ಮಂದಿ ಮಾಹಿಮ್‌ನವರಾಗಿದ್ದಾರೆ. ಉಳಿದವರು ದಾದರ್ ಮತ್ತು ಧಾರಾವಿ ಪ್ರದೇಶಗಳಿಗೆ ಸೇರಿದ್ದಾರೆ.

 
ಹೆಲ್ತ್